HomeFresh Newsಎಂ.ಡಿ.ಎಂ.ಎ ಸಾಗಾಟ ಪತ್ತೆ ಪ್ರಕರಣ. ಮೂವರು ಆರೋಪಿಗಳು ಹಾಗೂ ರೂ 7,64,000-/ ಮೌಲ್ಯದ ಎಂ.ಡಿ.ಎಂ.ಎ ಸ್ವಾಧೀನ

ಎಂ.ಡಿ.ಎಂ.ಎ ಸಾಗಾಟ ಪತ್ತೆ ಪ್ರಕರಣ. ಮೂವರು ಆರೋಪಿಗಳು ಹಾಗೂ ರೂ 7,64,000-/ ಮೌಲ್ಯದ ಎಂ.ಡಿ.ಎಂ.ಎ ಸ್ವಾಧೀನ

ದಿನಾಂಕ 04.06.2026ರಂದು ಸಂಜೆ, ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಸಂದೀಪ್‌ ಕುಮಾರ್‌ ಶೆಟ್ಟಿರವರು ಠಾಣಾ ಸಿಬ್ಬಂದಿಗಳೊಂದಿಗೆ ಮೆಲ್ಕಾರ್ ಪ್ಲೈಒವರ್ ಬಳಿ ಕಾರೊಂದನ್ನು ತಪಾಸಣೆಗಾಗಿ ನಿಲ್ಲಿಸಿದ್ದು, ಸದ್ರಿ ಕಾರಿನಲ್ಲಿ ಚಾಲಕ ಹಾಗೂ ಇಬ್ಬರು ಪ್ರಯಾಣಿಕರಿರುತ್ತಾರೆ. ಕಾರನ್ನು ಪರಿಶೀಲಿಸಿದಾಗ ಮನೋದ್ರೇಕಕಾರಿ ವಸ್ತು ಸೇವನೆ ಮಾಡಲು ಬಳಸುವ ಸಾಧನ ಕಂಡುಬಂದಿದ್ದು, ಈ ಬಗ್ಗೆ ಅವರನ್ನು ವಿಚಾರಿಸಿದಾಗ, ಬಂಟ್ವಾಳ ಪುದು ನಿವಾಸಿ ಎ,ಜುಬೈರ್ (39), ಬಂಟ್ವಾಳ ಸಜಿಪ ಮುನ್ನೂರು ನಿವಾಸಿ ಮೊಹಮ್ಮದ್ ಸವಾದ್ (36) ಹಾಗೂ ಬಂಟ್ವಾಳ ಬಿ ಮೂಡ ನಿವಾಸಿ ಬಿ.ಎಮ್. ರಶೀದ್ ಯಾನೆ ಮಾರಿಮುತ್ತು ಎಂಬುದಾಗಿ ತಿಳಿಸಿರುತ್ತಾರೆ. ತಾವುಗಳು ಎಂ,ಡಿ,ಎಂ,ಎ ಎಂಬ ಮಾದಕದ್ರವ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿರುವುದಾಗಿ ತಿಳಿಸಿದ್ದು, ತಪಾಸಣೆ ನಡೆಸಿದಾಗ ಆರೋಪಿಗಳ ಬಳಿ ಹಾಗೂ ಕಾರಿನಲ್ಲಿ ಅಂದಾಜು ರೂ 7,64,000-/ ಮೌಲ್ಯದ ಒಟ್ಟು 76 ಗ್ರಾಂ 40 ಮಿಲಿಗ್ರಾಂ ಎಂ.ಡಿ.ಎಂ.ಎ ಮಾದಕದ್ರವ್ಯ ಹಾಗೂ ಮಾದಕ ವಸ್ತು ಸೇವನೆ ಮಾಡಲು ಉಪಯೋಗಿಸುವ ಸಾಧನ ಪತ್ತೆಯಾಗಿರುತ್ತದೆ. ಸದ್ರಿ ಸೊತ್ತುಗಳನ್ನು, ಆರೋಪಿಗಳ ಬಳಿಯಿದ್ದ 03 ಮೊಬೈಲ್ ಪೋನ್ ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ K,A 19 MR 1997 ನೊಂದಣಿಯ ಕಾರನ್ನು ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments