HomeFresh Newsಕಾಜಾರಾಗುತ್ತು ಎಲ್.ಕೆ.ಜಿ ವಿಭಾಗದ ಮಕ್ಕಳ ಅಕ್ಷರಾಭ್ಯಾಸ ಕಾರ್ಯಕ್ರಮ

ಕಾಜಾರಾಗುತ್ತು ಎಲ್.ಕೆ.ಜಿ ವಿಭಾಗದ ಮಕ್ಕಳ ಅಕ್ಷರಾಭ್ಯಾಸ ಕಾರ್ಯಕ್ರಮ

ಉಡುಪಿ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಜಾರಾಗುತ್ತು ಇಲ್ಲಿ ಇಂದು ದಿನಾಂಕ 05-06-2026 ರಂದು ನಡೆದ ಎಲ್.ಕೆ.ಜಿ ವಿಭಾಗದ ಮಕ್ಕಳ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ದಾನಿಗಳ ನೆರವಿನಿಂದ ನಿರ್ಮಾಣವಾಗಲಿರುವ ಭೋಜನ ಶಾಲೆ ಶಿಲಾನ್ಯಾಸವನ್ನು ನೆರವೇರಿಸಿಕೊಟ್ಟರು

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯಲ್ಲಮ್ಮ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ್, ಕೊಡಿಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂದೀಪ್ ಮಡಿವಾಳ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಿತೇಶ್ ಶೆಟ್ಟಿ, ಶಾಲಾ ಮುಖ್ಯಸ್ಥರಾದ ಸುದರ್ಶನ್ ಶೆಟ್ಟಿ, ಅರುಣ್ ಕುಮಾರ್, ರಾಘವೇಂದ್ರ ನಾಯ್ಕ್, ಸುಧೀರ್ ಶೆಟ್ಟಿ, ನಿತೀಶ್ ಕುಮಾರ್, ಸುರೇಶ್ ಶ್ರೀಯಾನ್, ಶಾಲಾ ಮುಖ್ಯೋಪಾಧ್ಯಾಯರಾದ ಸವಿತಾ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments