ಕಾಪು:ಕಟಪಾಡಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ )ಬಿ ಸಿ ಟ್ರಸ್ಟ್, ಹಾಗೂ ಎಸ್ ವಿ ಎಸ್ ವಿದ್ಯಾವರ್ಧಕ ಸಂಘ(ರಿ )ಕಟಪಾಡಿ ಮತ್ತು
ಸಾಮಾಜಿಕ ಅರಣ್ಯ ವಿಭಾಗ ಉಡುಪಿ ಇವರ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಇಂದು 05/06/2026 ಶುಕ್ರವಾರದಂದು ಎಸ್ ವಿ ಎಸ್ ವಿದ್ಯಾ ಸಂಸ್ಥೆ ಯ ಆವರಣದಲ್ಲಿ 200 ಕ್ಕೂ ಹೆಚ್ಚು ಗಿಡಗಳ ನಾಟಿ ಮಾಡುವ ಕಾರ್ಯಕ್ರಮ ನಡೆಯಿತು.
ಗಿಡಗಳ ನಾಟಿ ಮಾಡುವ ಕಾರ್ಯಕ್ರಮದ ಬಳಿಕ ಎಸ್ ವಿ. ಎಸ್ ವಿದ್ಯಾ ಸಂಸ್ಥೆ ಸಬಾಭವನದಲ್ಲಿ ಸಭಾ ಕಾರ್ಯಕ್ರಮವು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಸತ್ಯೇoದ್ರ ಪೈ ಯವರ ಅಧ್ಯಕ್ಷತೆಯಲ್ಲಿ ನಡೆಯುತು.
ಅರಣ್ಯ ಇಲಾಖೆಯ ಉಪ ಅರಣ್ಯಾಧಿಕಾರಿ ರವೀಂದ್ರ ಕುಮಾರ್ ಅವರು ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಮಾಹಿತಿ ನೀಡಿದರು..
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕರಾದ ನಾಗರಾಜ್ ಶೆಟ್ಟಿ ಅವರು ಮಾತನಾಡಿ ಗಿಡ ನಾಟಿ ಮಾಡುವ ಜೊತೆಗೆ ನಿರಂತರ ಗಿಡಗಳ ಪೋಷಣೆ ಮಾಡುವುದು ಅತೀ ಅಗತ್ಯ ಎಂದು ಶುಭ ಹಾರೈಕೆ ಮಾಡಿದರು.
ಈ ಸಂದರ್ಭದಲ್ಲಿ ಅರಣ್ಯ ವಿಭಾಗದ ಕೃಷ್ಟಪ್ಪ, ಯೋಜನಾಧಿಕಾರಿ ಮಮತ ಶೆಟ್ಟಿ, ಜನ ಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ,ಆಡಳಿತ ಮಂಡಳಿ ಶ್ರೀನಿವಾಸ್ ಕಿಣಿ, ಕಾಲೇಜು ಪ್ರಾoಶುಪಾಲ ದಯಾನಂದ ಪೈ, ವಿವೇಕಾನಂದ, ದೇವೇಂದ್ರ ನಾಯ್ಕ್ ಹಾಗೂ ಸುಜಾ ಡಿಸೋಜ ಮತ್ತು ಆಶಾಲತಾ ಉಪಸ್ಥಿತರಿದ್ದರು.

