ಮುಂಗಾರು ಆರಂಭವಾಗಿದೆ. ಮುನ್ ಕಾರು ಎಂದರೆ ಮೊದಲು ಸುರಿಯುವ ಮಳೆಯ ಕಾಲ. ಅದೀಗ ದಿಗಿಣ ಹಾಕಿದೆ.

ಮುಖ್ಯಮಂತ್ರಿ ಮಾಡುವ ಮಾತು ಕೊಟ್ಟಿದ್ದೀರಿ ಎಂದು ಮುನ್ ಕಾರಿ ಡಿಕೆಶಿ ಅದನ್ನು ಗಿಟ್ಟಿಸಿಕೊಂಡರು. ಬೆಂಗಳೂರು ಅಭಿವೃದ್ಧಿ ಖಾತೆ ಕೊಡುವುದಾಗಿ ಹೇಳಿ ತಪ್ಪಿದ್ದೀರಿ ಎಂದು ಆರ್ಎಲ್ಆರ್ ಸಂಪುಟ ರಚನೆಯಾಗುತ್ತಲೇ ಮುನ್ ಕಾರಿ ಹೊರ ಹೋಗಿದ್ದಾರೆ.

ಕಾರುವುದು ಎಂದರೆ ಹೊರಹಾಕುವುದು. ಬಂಗಾಳದಲ್ಲಿ ಬಿಜೆಪಿಯವರು ಹಣ ಕಾರಿದ್ದರಿಂದ ಟಿಎಂಸಿಯ ಶಾಸಕ, ಸಂಸದ, ಕೌನ್ಸಿಲರ್ಗಳು ಮಮತಾ ಬ್ಯಾನರ್ಜಿಯವರ ವಿರುದ್ಧ ಉರಿ ಕಾರಿ, ಹೊರ ಹಾರುತ್ತಿದ್ದಾರೆ.

ಮಳೆಗಾಲ ಕಾರ್ ತಿನ್ಗೊಲು, ಮಳೆ ಹಬ್ಬ ಕಾರ್ ಹುಣ್ಣಿಮೆ, ಮಳೆಯ ಮೋಡ ಕಾರ್ಮೋಡ, ಜೋರಾಗಿ ನೀರು ನದಿಗೆ ಹಾರುವ ಜಾಗ ಕಡೆಕಾರ್ ಹೀಗೆ ಹಲವು. ಡಿಕೆಶಿ ಸಂಪುಟಕ್ಕೆ, ಮಮತಾ ಬ್ಯಾನರ್ಜಿಯವರ ಪಕ್ಷಕ್ಕೆ ಈಗ ಕಾರ್ಮೋಡ ಕವಿದಿದೆ. ಮಳೆ ನಿಂತಾಗ ಇಲ್ಲವೆ ನಿಲ್ಲುವಾಗ ಅದೂ ಕೊನೆಗೊಳ್ಳಬಹುದು.


