ವಿಧಾನ ಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಏಳನೆಯವರಾಗಿ ಗೆಲ್ಲುವವರು ಯಾರು ಎಂಬ ಪ್ರಶ್ನೆ ಎದ್ದಿದೆ.

ಪ್ರತಿಯೊಬ್ಬನ ಗೆಲುವಿಗೆ 28 ಕೆಳಮನೆ ಶಾಸಕರ ಮತ ಬೇಕು. ಕಾಂಗ್ರೆಸ್ 4, ಬಿಜೆಪಿ 2 ಗೆಲ್ಲಲು ಅಡ್ಡಿಯಿಲ್ಲ. ಕಾಂಗ್ರೆಸ್ ಬಳಿ ಇತರ ಐವರು ಸೇರಿ 140 ಮತಗಳು ಇವೆ. ಬಿಜೆಪಿ ಬಳಿ 62 ಮತಗಳು ಇವೆ.

ಜೆಡಿಎಸ್ ಬಳಿ 18 ಮತಗಳು ಇದ್ದು 10 ಮತಕ್ಕೆ ಮೈತ್ರಿ ಪಕ್ಷ ಬಿಜೆಪಿಯ ಉಳಿಕೆ ಮತವನ್ನು ನಂಬಿದೆ. ಆದರೆ ಬಿಜೆಪಿಯ ಉಳಿಕೆ ಮತ 9ಮಾತ್ರ.

ಮಿತ್ರರು ಸೇರಿ ಕಾಂಗ್ರೆಸ್ ಕಯ್ಯಲ್ಲಿ 15-16 ಮತಗಳು ಇವೆ. ಹಾಗಾಗಿ ಅದು ನೋಡುವ ಒಂದು ಕಯ್ ಎಂದು ಅಯ್ದನೆಯ ಅಭ್ಯರ್ಥಿ ನಿಲ್ಲಿಸಿದೆ. ಹಾಗಾಗಿ ಏಳನೆಯ ಸ್ಥಾನಕ್ಕೆ ತುರುಸಿನ ಸ್ಪರ್ಧೆ ನಡೆಯುತ್ತದೆ.

ಕಾಂಗ್ರೆಸ್ಸಿನ 5 ನೇ ಅಭ್ಯರ್ಥಿ ಶಿವಣ್ಣ ಮತ್ತು ಜೆಡಿಎಸ್ನ ಗೋವಿಂದರಾಜ್ ಈ ಇಬ್ಬರಲ್ಲಿ ಒಬ್ಬರು ಮೇಲ್ಮನೆಗೆ ಆಯ್ಕೆಯಾಗುವರು.


