ಅಮೆರಿಕ ಸಂಯುಕ್ತ ಸಂಸ್ಥಾನವು ಲೋಕದಲ್ಲಿ ಅತಿ ಹೆಚ್ಚು ಕೋಳಿ ಮಾಂಸ ಉತ್ಪಾದಿಸುವ ದೇಶವಾದರೆ, ಚೀನಾವು ಅತಿ ಹೆಚ್ಚು ಕೋಳಿ ಮಾಂಸ ಬಳಸುವ ದೇಶವಾಗಿದೆ.

ಭಾರತವು ಕೋಳಿ ಮಾಂಸ ಉತ್ಪಾದನೆಯಲ್ಲಿ ಐದನೆಯ ಸ್ಥಾನದಲ್ಲಿದೆ. ತಲಾವಾರು ಕೋಳಿ ಮಾಂಸ ಬಳಕೆಯಲ್ಲಿ ಭಾರತದ ಸ್ಥಾನ ಮೂವತ್ತರ ಆಚೀಚೆ ಓಡಾಡುತ್ತದೆ.

ಯುಎಸ್‌ಎ, ಬ್ರೆಜಿಲ್‌ನೊಂದಿಗೆ ಅತಿ ಹೆಚ್ಚು ಫ್ರೀಜ್ಡ್ ಮಾಂಸ ಉತ್ಪಾದಿಸುವ ದೇಶಗಳಾಗಿವೆ. ಅತಿ ಹೆಚ್ಚು ಕೋಳಿ ಮಾಂಸ ಉತ್ಪಾದಿಸುವ ದೇಶ ಹಾಗೂ ಉತ್ಪಾದನೆ ಮುಂದಿನಂತಿದೆ.

ಯುಎಸ್‌ಎ 2.18 ಕೋಟಿ ಟನ್, ಚೀನಾ 1.66 ಕೋಟಿ ಟನ್, ಬ್ರೆಜಿಲ್ 1.54 ಕೋಟಿ ಟನ್, ಯೂರೋಪು ಒಕ್ಕೂಟ 1.31 ಕೋಟಿ ಟನ್, ಭಾರತ 51 ಲಕ್ಷ ಟನ್, ರಶಿಯಾ 50 ಲಕ್ಷ ಟನ್, ಮೆಕ್ಸಿಕೋ 45 ಲಕ್ಷ ಟನ್, ತಾಯ್‌ಲ್ಯಾಂಡ್ 35.4 ಲಕ್ಷ ಟನ್, ಟರ್ಕಿ 28 ಲಕ್ಷ ಟನ್, ಅರ್ಜೆಂಟೀನಾ 25.3 ಲಕ್ಷ ಟನ್, ಕೊಲಂಬಿಯಾ 20 ಲಕ್ಷ ಟನ್. ಜಾಗತಿಕ ಒಟ್ಟು ಉತ್ಪಾದನೆ 10.8 ಕೋಟಿ ಟನ್.


