ಲೋಕದಲ್ಲಿ ಹಣ ಸೇರಿ ಒಟ್ಟು ಸಂಪತ್ತಿನ 89 ಪಾಲು ಗಂಡಸರ ಕೈಯಲ್ಲಿ ಇದ್ದರೆ 11 ಶೇಕಡಾ ಮಾತ್ರ ಮಹಿಳೆಯರ ಕಯ್ಯಲ್ಲಿದೆ.

ಘನ ಎಲ್ಲ ವಾಹನಗಳು ಸೇರಿ 91 ಶೇಕಡಾ ಗಂಡಸರ ಕಯ್ಯಲ್ಲಿ ಹಾಗೂ 10 ಶೇಕಡಾ ಹೆಂಗಸರ ಕೈಯಲ್ಲಿ ಇದೆ. ಕಳೆದ ಒಂದು ದಶಕದಿಂದ ಮಹಿಳೆಯರು ಇಗ್ಗಾಲಿ ಮತ್ತು ಕಾರು ಕೊಳ್ಳುವುದರಲ್ಲಿ ಗಂಡಸರ ಸಮೀಪ ಇದ್ದಾರೆ.

ಯುಎಸ್ಎಯಲ್ಲಿ ಇದು ಸರಿಸಮಕ್ಕೆ ಕೂಡ ಬಂದಿದೆ. ಹಳೆಯ ಅಂತರವನ್ನು ಸರಿತೂಗಿಸಲಾರರು.

ಒಟ್ಟು ಎಲ್ಲ ನೆಲದಲ್ಲಿ 85 ಶೇಕಡಾ ಗಂಡಸರ ಕಯ್ಯಲ್ಲಿ, 15 ಪಾಲು ಮಾತ್ರ ಹೆಣ್ಣುಮಕ್ಕಳ ಕರದಲ್ಲಿ, ಕೃಷಿ ಭೂಮಿಯಲ್ಲಿ ಮಹಿಳಾ ಪಾಲು 20 ಶೇಕಡಾ ಇದೆ.

ಭಾರತದಲ್ಲಿ ಒಟ್ಟು ಭೂಮಿಯ ವಿಷಯಕ್ಕೆ ಬಂದರೆ ಮಹಿಳೆಯರ ಪಾಲು 8.3 ಶೇಕಡಾ ಮಾತ್ರ ಇದೆ; ಬೇಸಾಯದ ಭೂಮಿ ಸೇರಿದರೆ 22 ಶೇಕಡಾ ಮುಟ್ಟುತ್ತದೆ.

ಕೇರಳ, ಮಣಿಪುರ, ತುಳುನಾಡು ಹಾಗೂ ಲೋಕದ ಕೆಲವೇ ಕೆಲವು ಕಡೆ ಹೆಣ್ಣುಮಕ್ಕಳ ಭೂ ಒಡೆತನ ಸ್ವಲ್ಪ ಮೇಲು ಎನ್ನಬಹುದು. ಮುಖ್ಯವಾಗಿ ಕೃಷಿ ಭೂಮಿ.

ಸರಕಾರದ ಬಸ್ಸುಗಳಲ್ಲಿ ಹೆಣ್ಣುಮಕ್ಕಳಿಗೆ ಪುಕ್ಕಟೆ ಪ್ರಯಾಣ ಎನ್ನುವುದು ಸಾಮಾಜಿಕ ನ್ಯಾಯದ ಒಂದು ಭಾಗ. ಅದನ್ನು ದುರುಪಯೋಗ ಮಾಡುವ ಮಹಿಳೆಯರು ಆರೇಳು ಶೇಕಡಾ ಇರಬಹುದು.


