HomeFresh Newsಚಿನ್ನಯ್ಯ ಸಿಕ್ಕಿದ್ದು ನಿಜ- ನಟ ಪ್ರಕಾಶ್‍ರಾಜ್

ಚಿನ್ನಯ್ಯ ಸಿಕ್ಕಿದ್ದು ನಿಜ- ನಟ ಪ್ರಕಾಶ್‍ರಾಜ್

ಮಾರಿಕೊಂಡವರು ಪದವನ್ನು ನಾನು ಮಾರಿಕೊಂಡವರಿಗೆ ಬಳಸಿದ್ದೇನೆ, ಮಾರಿಕೊಳ್ಳದವರಿಗಲ್ಲ ಎಂದು ನಟ ಪ್ರಕಾಶ್‍ರಾಜ್ ಪತ್ರಿಕಾಗೊಟ್ಟಿಯಲ್ಲಿ ಒತ್ತಿ ಹೇಳಿದರು.
ಮಾಧ್ಯಮದವರನ್ನು ಮಾರಿಕೊಂಡವರು ಎಂದಿದ್ದೀರಿ, ಕ್ಷಮೆ ಕೇಳಬೇಕೆಂದು ಕೆಲವರು ಒತ್ತಾಯ ಮಾಡಿದರು. ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ, ಪ್ರೆಸ್ ಮೀಟ್ ನಡೆಸದಿರುಲು ನಾನು ಮೋದಿಯಲ್ಲ. ಮಾರಿಕೊಂಡವರು ಎನ್ನುವುದು ನನ್ನ ಮನಸ್ಸಿನ ಲೇವಡಿಯಲ್ಲ; ನನ್ನೊಳಗಿನ ನೋವು ಎಂದು ಪ್ರಕಾಶ್‍ರಾಜ್ ಹೇಳಿದರು. ನೀವು ನಿರೀಕ್ಷಿಸುವಂತೆ ಮಾತನಾಡಲು ನಾನು ಬಂದಿಲ್ಲ. ನಾನು ಮಾತನಾಡಿದ್ದು ನಿಮಗೆ ಹಿಡಿಸದಿದ್ದರೆ ಹಾಗೆಯೇ ಹೇಳಿ ಎಂದು ಅವರು ಕಾರವಾಗಿಯೇ ಹೇಳಿದರು.
ಚಿನ್ನಯ್ಯ ಬೇರೆಯವರ ಮೂಲಕ ಫೋನಿನಲ್ಲಿ ಸಂಪರ್ಕಿಸಿ ಭೇಟಿಯಾಗಿದ್ದ. ಧರ್ಮಸ್ಥಳದಲ್ಲಿ ಅಸಹಜ ಸಾವುಗಳು ಆಗುತ್ತಿವೆ ಎಂಬ ವಿಷಯ ಮಾತ್ರ ನನಗೆ ನೋವು ತಂದ ವಿಚಾರ. ಅದರ ಸಮಗ್ರ ತನಿಖೆ ನಡೆಯಲಿ ಎಂದು ಹೇಳಿದ್ದೇನೆ. ಉಳಿದಂತೆ ಧರ್ಮಸ್ಥಳದ ಯಾವುದೂ ನನಗೆ ಸಂಬಂಧವಿಲ್ಲ. ನಾನು ಧರ್ಮಸ್ಥಳಕ್ಕೆ ಎಂದೂ ಹೋಗಿಲ್ಲ. ಮಂಗಳೂರಿನ ಒಂದು ಸಭೆಯಲ್ಲಿ ವೀರೇಂದ್ರ ಹೆಗ್ಡೆಯವರನ್ನು ಭೇಟಿಯಾಗಿದ್ದೆ; ಮಾತನಾಡಿದ್ದೆ; ಒಟ್ಟಿಗೆ ಊಟ ಮಾಡಿದ್ದೆವು. ಅಷ್ಟರ ಮಟ್ಟಿಗೆ ಅವರು ಗಣ್ಯ ವುಕ್ತಿ, ಅವರನ್ನು ನಾನೇಕೆ ತೆಗಳಬೇಕು ಎಂದು ಪ್ರಕಾಶ್‍ರಾಜ್ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments