HomeFresh Newsಚುನಾವಣಾ ಆಯೋಗದ ಎಸ್.ಐ.ಆರ್ (SIR) ಪ್ರಕ್ರಿಯೆ ಕುರಿತು ಹೆಜಮಾಡಿ ಶಕ್ತಿ ಕೇಂದ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆ

ಚುನಾವಣಾ ಆಯೋಗದ ಎಸ್.ಐ.ಆರ್ (SIR) ಪ್ರಕ್ರಿಯೆ ಕುರಿತು ಹೆಜಮಾಡಿ ಶಕ್ತಿ ಕೇಂದ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆ

ಪಡುಬಿದ್ರಿ:ಚುನಾವಣಾ ಆಯೋಗದ ಎಸ್.ಐ.ಆರ್ (SIR) ಪ್ರಕ್ರಿಯೆ ಕುರಿತಾಗಿ ಹೆಜಮಾಡಿ ಶಕ್ತಿ ಕೇಂದ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದ್ದರು.

ಸಭೆಯಲ್ಲಿ ಶಾಸಕರು ಎಸ್.ಐ.ಆರ್ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದರು. ಎಸ್.ಐ.ಆರ್ ಪ್ರಕ್ರಿಯೆ ವಿರುದ್ಧ ರಾಜ್ಯದಾದ್ಯಂತ ಸುಳ್ಳು ಆರೋಪ ಅಪಪ್ರಚಾರ ನಡೆಯುತ್ತಿದ್ದು ಬಿಜೆಪಿ ಕಾರ್ಯಕರ್ತರಾದ ನಾವು ಮತದಾರರಿಗೆ ಎಸ್.ಐ.ಆರ್ ನ ಸಾಧಕ ಬಾದಕಗಳ ಕುರಿತು ಮಾಹಿತಿ ನೀಡಿ ನಾವೆಲ್ಲರೂ ಈ ಅಭಿಯಾನಕ್ಕೆ ಸಜ್ಜಾಗೋಣ ಎಂದರು.

ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ನೀತಾ ಗುರುರಾಜ್, ಉಡುಪಿ ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಹೆಜಮಾಡಿ ಶಕ್ತಿ ಕೇಂದ್ರದ ಶರಣ್ ಕುಮಾರ್ ಮಟ್ಟು, ಶಿವ ಕುಮಾರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments