HomeFresh Newsಕಾಪುವಿನಲ್ಲಿ 12 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾಪು ಬಿಜೆಪಿ ಯುವ ಮೋರ್ಚಾ ಮಂಡಲ ನೇತೃತ್ವದಲ್ಲಿ...

ಕಾಪುವಿನಲ್ಲಿ 12 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾಪು ಬಿಜೆಪಿ ಯುವ ಮೋರ್ಚಾ ಮಂಡಲ ನೇತೃತ್ವದಲ್ಲಿ ಯೋಗ ದಿನ ಆಚರಣೆ

ಕಾಪು ಬಿಜೆಪಿ ಯುವ ಮೋರ್ಚಾ ಕಾಪು ಮಂಡಲ ನೇತೃತ್ವದಲ್ಲಿ 12 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾಪುವಿನ ಓಶಿಯನ್ ಬೀಚ್ ರೆಸಾರ್ಟ್ ನಲ್ಲಿ ಭಾನುವಾರದಂದು ನೆರವೇರಿತು.
“ಅಂತರರಾಷ್ಟ್ರೀಯ ಯೋಗ ದಿನಾಚರಣೆ” ಯನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿಯವರು ಉದ್ಘಾಟಿಸಿದರು.

ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರು ಸುಮಾರು ಆರು ಸಾವಿರ ವರ್ಷಗಳ ಹಿಂದೆ 2015 ಜೂನ್ 21ರಂದು ಚಾಲ್ತಿಗೆ ತಂದ ಯೋಗ ದಿನಾಚರಣೆ ಇಂದು ಪ್ರಪಂಚಾದ್ಯಂತ ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ನಡೆಸಲಾಗುತ್ತಿದೆ.
ಶಿರ್ವ ಪತಂಜಲಿ ಯೋಗ ಸಂಸ್ಥೆಯವರ ಸಹಕಾರದಲ್ಲಿ ಕಾಪುವಿನ ಕಾಪುವಿನ ಓಶಿಯನ್ ಬೀಚ್ ರೆಸಾರ್ಟ್ನಲ್ಲಿ ಯೋಗ ಶಿಬಿರ ಆಯೋಜಿಸಿದ್ದೇವೆ. ಮಾಜಿ ಶಾಸಕ ಲಾಲಾಜಿ ಮೆಂಡನ್ ಯುವ ಮೋರ್ಚಾದ ಸೋನು ಪಾಂಗಾಳ, ಕಾಪು ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಮತ್ತು ಸ್ಥಳದಾನಿ ಶ್ರೀಮತಿ ಶಿಲ್ಪಾ ಗಂಗಾಧರ ಸುವರ್ಣ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ವಿಶ್ವ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಡೆದ ಯೋಗ ಕಾರ್ಯಕ್ರಮವನ್ನು ಪತಂಜಲಿ ಯೋಗಪೀಠ ಶಿರ್ವದ ಅನಂತರಾಮ್ ಶೆಣೈ ಮತ್ತು ಅವರ ತಂಡ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಿಲ್ಪಾ ಜಿ ಸುವರ್ಣ, ಕಾಪು ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೋನು ಪಾಂಗಾಳ, ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ಪುರಸಭೆಯ ಸದಸ್ಯರಾದ ನಿತಿನ್, ಹಿರಿಯ ಕಾರ್ಯಕರ್ತರಾದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ನಿವೃತ್ತ ಸೈನಿಕರಾದ ಕುಶ ಸಾಲ್ಯಾನ್, ಕಾಪು ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣ ರಾವ್, ಶರಣ್ ಕುಮಾರ್ ಮಟ್ಟು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments