HomeFresh Newsವಿದೇಶೀ ದೇಣಿಗೆ ನಿಯಮ ಬಿಗಿ | ದೇಣಿಗೆ ಹಣ ಮತಾಂತರಕ್ಕಲ್ಲ | ಧಾರ್ಮಿಕ ಕ್ರಿಯೆ ಅದಕ್ಕೇ...

ವಿದೇಶೀ ದೇಣಿಗೆ ನಿಯಮ ಬಿಗಿ | ದೇಣಿಗೆ ಹಣ ಮತಾಂತರಕ್ಕಲ್ಲ | ಧಾರ್ಮಿಕ ಕ್ರಿಯೆ ಅದಕ್ಕೇ ಸೀಮಿತ

ವಿದೇಶೀ ದೇಣಿಗೆ ಪಡೆಯುವ ಸರಕಾರೇತರ ಸಂಸ್ಥೆಗಳಿಗೆ ಮತ್ತಷ್ಟು ಕಠಿಣ ನಿಯಮಾವಳಿಗಳನ್ನು ಹೇರಿ ಒಕ್ಕೂಟ ಸರಕಾರವು ಆದೇಶ ಹೊರಡಿಸಿದೆ.
ವಿದೇಶೀ ದೇಣಿಗೆಗಳನ್ನು ಮತಾಂತರಕ್ಕೆ ಬಳಸುವಂತಿಲ್ಲ; ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಕ್ರಿಯೆಗಳ ಹೊರತು ಬೇರೆ ಯಾವುದಕ್ಕೂ ಅವಕಾಶವಿಲ್ಲ.

ವಿದೇಶೀ ದೇಣಿಗೆಯ ಲೆಕ್ಕ ಪಕ್ಕಾ ಇರಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಕೇಂದ್ರ ಗೃಹ ಸಚಿವಾಲಯವು ವಿದೇಶೀ ದೇಣಿಗೆ ಪಡೆಯುವ ಎನ್‌ಜಿಓಗಳಿಗೆ ಹೊಸ ನಿಯಮಾವಳಿಗಳನ್ನು ಮಾಡಿ ಆದೇಶ ನೀಡಿದೆ.

ಅದರಲ್ಲಿ ವಿದೇಶೀ ದೇಣಿಗೆಯನ್ನು 105 ಕೆಲಸಗಳಿಗೆ ಮಾತ್ರ ಬಳಸುವಂತೆ ಪಟ್ಟಿ ಮಾಡಿ ಕೊಟ್ಟಿದೆ. ಧಾರ್ಮಿಕ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಎಂದು 105 ಕೆಲಸ ಕಾರ್ಯಗಳ ಪಟ್ಟಿ ಮಾಡಲಾಗಿದೆ.

ವಿದೇಶೀ ದೇಣಿಗೆ ನಿಯಂತ್ರಣ ತಿದ್ದುಪಡಿ ನಿಯಮಗಳು 2-26 ಎಂದು ಇದನ್ನು ಈಗ ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ವಿದೇಶೀಯರನ್ನೇ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ ಹೊಂದಿರುವ ಸಂಸ್ಥೆಗಳಿಗೆ ವಿದೇಶೀ ದೇಣಿಗೆ ಸ್ವೀಕರಿಸಲು ಅವಕಾಶವಿಲ್ಲ ಎಂದು ಹೇಳಲಾಗಿದೆ.

sudha add new
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments