HomeFresh Newsಅತಿ ಹೆಚ್ಚು ಹಂದಿ ಮಾಂಸ ರಫ್ತು ಮಾಡುವ ದೇಶ | ಅತಿ ಹೆಚ್ಚು ಹಂದಿ ಮಾಂಸ...

ಅತಿ ಹೆಚ್ಚು ಹಂದಿ ಮಾಂಸ ರಫ್ತು ಮಾಡುವ ದೇಶ | ಅತಿ ಹೆಚ್ಚು ಹಂದಿ ಮಾಂಸ ಆಮದು ಮಾಡಿಕೊಳ್ವ ದೇಶ | ಆಮದು ಮಾಡಿಕೊಂಡು ಹೆಚ್ಚು ಪೋರ್ಕ್ ತಿನ್ನುವ ದೇಶ

ಸ್ಪೆಯಿನ್ ಅತಿ ಹೆಚ್ಚು ಹಂದಿ ಮಾಂಸ ರಫ್ತು ಮಾಡುವ ದೇಶವಾಗಿದೆ. ಜಪಾನ್ ಅತಿ ಹೆಚ್ಚು ಪೋರ್ಕ್ ಆಮದು ಮಾಡಿಕೊಳ್ಳುವ ದೇಶವಾಗಿದೆ. ನಾಡು ಹಂದಿ ಮಾಂಸ ಕರ್ನಾಟಕದಲ್ಲಿ ಕೊಡವರು ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದ ಒಕ್ಕಲಿಗರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಯೂರೋಪಿಯನರ ಕಾಲದಿಂದಲೂ ಕ್ರಿಶ್ಚಿಯನರು, ಅದರಲ್ಲೂ ಕರಾವಳಿ ಕ್ರಿಶ್ಚಿಯನರು ಹಂದಿ ಮಾಂಸ ಪ್ರಿಯರಾಗಿರುವರು.

ಹಂದಿ ಮಾಂಸ ರಫ್ತು ಮಾಡಿ ಹಣ ಗಳಿಸುವುದರಿಂದ ತೂಕಕ್ಕಿಂತ ಹಣ ಗಳಿಕೆಗೆ ಅಂಕ ನೀಡಲಾಗುತ್ತದೆ. ಸ್ಪೆಯಿನ್ 670 ಕೋಟಿ ಡಾಲರ್, ಇದು ಲೋಕದ ಒಟ್ಟು ರಫ್ತಿನ 18 ಶೇಕಡಾ ಆಗಿದೆ. ಯುಎಸ್‌ಎ 640 ಕೋಟಿ ಡಾಲರ್ ಎಂದರೆ 17 ಶೇಕಡಾ, ಜರ್ಮನಿ 390 ಕೋಟಿ ಡಾಲರ್ ಅರ್ಥಾತ್ 10 ಶೇಕಡಾ. ಬ್ರೆಜಿಲ್ 340 ಕೋಟಿ ಡಾಲರ್, ಕೆನಡಾ 320 ಕೋಟಿ ಡಾಲರ್, ಡೆನ್ಮಾರ್ಕ್ 290 ಕೋಟಿ ಡಾಲರ್, ನೆದರ್‌ಲ್ಯಾಂಡ್ಸ್ 270 ಕೋಟಿ ಡಾಲರ್, ಬೆಲ್ಜಿಯಂ 160 ಕೋಟಿ ಡಾಲರ್, ಫ್ರಾನ್ಸ್ 104 ಕೋಟಿ ಡಾಲರ್, ಪೋಲೆಂಡ್ 101 ಕೋಟಿ ಡಾಲರ್. ಬಳಿಕದ ಸ್ಥಾನಗಳಲ್ಲಿ ಮೆಕ್ಸಿಕೋ, ಚಿಲಿ, ಹಂಗೆರಿ, ಆಸ್ಟ್ರಿಯಾ, ಐರ್ಲೆಂಡ್ ಇವೆ. ಈ ಹದಿನೈದು ದೇಶಗಳು ಲೋಕದ ಒಟ್ಟು ರಫ್ತಿನ 94.8 ಶೇಕಡಾ ಹೊಂದಿವೆ.

ಆಮದು ಮಾಡಿಕೊಂಡು ಹೆಚ್ಚು ಪೋರ್ಕ್ ತಿನ್ನುವ ದೇಶ ಜಪಾನ್. ಈ ದೇಶವು 420 ಕೋಟಿ ಡಾಲರಿನ ಹಂದಿ ಮಾಂಸ ಆಮದು ಮಾಡಿಕೊಳ್ಳುತ್ತದೆ. ಅನಂತರದ ಪೋರ್ಕ್ ಆಮದು ದೇಶಗಳು ಕ್ರಮವಾಗಿ ಚೀನಾ, ಮೆಕ್ಸಿಕೋ, ಇಟೆಲಿ, ಬ್ರಿಟನ್.

sudha add new
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments