HomeFresh Newsಪರಿಸರ ಸಂರಕ್ಷಣಾ ದಿನಾಚರಣೆ : ನಿಡ್ಡೋಡಿಯಲ್ಲಿ ಶ್ರಮದಾನ

ಪರಿಸರ ಸಂರಕ್ಷಣಾ ದಿನಾಚರಣೆ : ನಿಡ್ಡೋಡಿಯಲ್ಲಿ ಶ್ರಮದಾನ

ಮೂಡುಬಿದಿರೆ : ಸಂತ ತೆರೆಜಮ್ಮನವರ ದೇವಾಲಯ ನಿಡ್ಡೋಡಿ ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ನಿಡ್ಡೋಡಿ ಘಟಕದ ನೇತೃತ್ವದಲ್ಲಿ ಪರಿಸರ ಆಯೋಗ, ಐ. ಸಿ. ವೈ. ಎಂ ನಿಡ್ಡೋಡಿ ಘಟಕದ ಜಂಟಿ ಆಶ್ರಯದಲ್ಲಿ ಪರಿಸರ ಸಂರಕ್ಷಣಾ ದಿನವನ್ನು ಭಾನುವಾರ ಆಚರಿಸಲಾಯಿತು.

ಚರ್ಚಿನ ಧರ್ಮಗುರು ವಂ. ಲಿಯೋ ವಿಲಿಯಂ ಲೋಬೊ ಕಾರ್ಯಕ್ರಮವನ್ನು ಉದ್ಘಾಟಿಸಿ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶರ್ಮಿಳಾ ಸೆರಾವೊ, ಕಾರ್ಯದರ್ಶಿ ಪ್ರಿಮಾ ಕೊರೆಯಾ, ಅಯೋಗಗಳ ಸಂಯೋಜಕರಾದ ಮ್ಯಾಕ್ಸಿಮ್ ಪಿಂಟೊ, ಐ. ಸಿ. ವೈ. ಎಂ ಘಟಕದ ಅಧ್ಯಕ್ಷರಾದ ಅಲನ್ ಸೆರಾವೊ, ಪರಿಸರ ಆಯೋಗದ ಹಿಲ್ಡಾ ಡಿಸೋಜಾ, ಕಥೊಲಿಕ್ ಸಭಾ ನಿಡ್ಡೋಡಿ ಘಟಕದ ಅಧ್ಯಕ್ಷೆ ಸರಿತ ತಾವ್ರೊ, ನಿಕಟ ಪೂರ್ವ ಅಧ್ಯಕ್ಷ ಕಿಶೋರ್ ಡಿಸೋಜಾ ಉಪಸ್ಥಿತರಿದ್ದರು. ಕಾಯ೯ದಶಿ೯ ಜೀವನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಸರಿತಾ ತಾವ್ರೊ ವಂದಿಸಿದರು. ಕಾರ್ಯಕ್ರಮದ ನಂತರ ಕುದ್ರಿಪದವು ಜಂಕ್ಷನ್ ನಿಂದ ನಿಡ್ಡೋಡಿ ಪೇಟೆಯವರೆಗೆ ರಸ್ತೆ ಬದಿಯಲ್ಲಿನ ಕಸ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಮಾಡಲಾಯಿತು. ಕಲ್ಲಮಂಡ್ಕೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೇಖರ್ ಸಹಕಾರ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments