ಜೂನ್ 29ರಂದು ನಡೆದ ಹುಣ್ಣಿಮೆಯು ಒಂದು ಕಡೆ ಸ್ಟ್ರಾಬೆರಿ ಮೂನ್ ಆಗಿದ್ದರೆ ಇನ್ನೊಂದು ಕಡೆ ಕಾರ ಹುಣ್ಣಿಮೆ ತಿಂಗಳ ಆಗಿ ಹೋಯ್ತು.
ಹುಣ್ಣಿಮೆ ಮಾಮೂಲು, ಪೂರ್ಣ ಚಂದ್ರನೂ ಮಾಮೂಲು. ಜಗತ್ತಿನಲ್ಲಿ ಆಚರಣೆಗಳು ಮಾತ್ರ ಬೇರೆ ಬೇರೆ ಬಗೆ. ಬಡಗಣ ಅಮೆರಿಕದ ಮೂಲನಿವಾಸಿಗಳು ಜೂನ್ ತಿಂಗಳ ಹುಣ್ಣಿಮೆಯಂದು ಕಾಡು ಸ್ಟ್ರಾಬೆರಿ ಹಣ್ಣು ಸಂಗ್ರಹಿಸುವ ಬೆಳೆ ಹಬ್ಬ ಆಚರಿಸುತ್ತಾರೆ. ಹಾಗಾಗಿ ಅದನ್ನು ಸ್ಟ್ರಾಬೆರಿ ಮೂನ್ ಎಂದು ಕರೆಯಲಾಗುತ್ತದೆ.

ತುಳುವರ ಕಾರ್ ತಿನ್ಗೊಲು ಮಳೆ ಮತ್ತು ಕೃಷಿ ಚಟುವಟಿಕೆಯ ಕಾಲ.ಉತ್ತರ ಕರ್ನಾಟಕದ ಜನರು ಚಾಂದ್ರಮಾನ ಲೆಕ್ಕದವರಾದ್ದರಿಂದ ತುಳುವರ ಕಾರ್ ತಿಂಗಳಿಗಿಂತ ಹದಿನೈದು ದಿನಗಳಷ್ಟು ಮೊದಲು ಕಾರ ಹುಣ್ಣಿಮೆ ಆಚರಿಸುತ್ತಾರೆ.
ಕಾರ ಹುಣ್ಣಿಮೆ ಕೂಡ ಕೃಷಿ ಚಟುವಟಿಕೆ ಆರಂಭದ ಹಬ್ಬ. ಕೃಷಿಗೆ ಹಿಂದೆ ಎತ್ತುಗಳೇ ಮುಖ್ಯವಾದದ್ದರಿಂದ ಎತ್ತು ಸಂಬಂಧಿ ಆಚರಣೆಗಳು ಇರುತ್ತವೆ.

