HomeFresh Newsಅತಿ ಹೆಚ್ಚು ಹಾಲು ರಫ್ತು ಮಾಡುವ ದೇಶ

ಅತಿ ಹೆಚ್ಚು ಹಾಲು ರಫ್ತು ಮಾಡುವ ದೇಶ

ನ್ಯೂಜಿಲ್ಯಾಂಡ್ ದೇಶವು ಅತಿ ಹೆಚ್ಚು ಹಾಲು ರಫ್ತು ಮಾಡುವ ದೇಶವಾಗಿದೆ. ಚೀನಾ ದೇಶವು ಅತಿ ಹೆಚ್ಚು ಹಾಲು ಆಮದು ಮಾಡಿಕೊಳ್ಳುವ ದೇಶವಾಗಿದೆ.

ಒಟ್ಟು ಹಾಲು ಉತ್ಪಾದನೆಯಲ್ಲಿ ಭಾರತ ಮುಂದಿದ್ದರೂ ಜನಸಂಖ್ಯೆಯ ಲೆಕ್ಕದಂತೆ ಅದು ತುಂಬ ಕಡಿಮೆ. ಹಾಲು ರಫ್ತು ಹಣದ ಲೆಕ್ಕದ್ದು. ನ್ಯೂಜಿಲ್ಯಾಂಡ್ ಪ್ರಪಂಚದ ಒಟ್ಟು ಹಾಲು ರಫ್ತಿನ 20 ಶೇಕಡಾ ನಿರ್ವಹಿಸುತ್ತದೆ.

ನ್ಯೂಜಿಲ್ಯಾಂಡ್ 770 ಕೋಟಿ ಡಾಲರ್, ನೆದರ್‍ಲ್ಯಾಂಡ್ಸ್ 350 ಕೋಟಿ ಡಾಲರ್, ಜರ್ಮನಿ 330 ಕೋಟಿ ಡಾಲರ್, ಬೆಲ್ಜಿಯಂ 260 ಕೋಟಿ ಡಾಲರ್, ಯುಎಸ್‍ಎ 230 ಕೋಟಿ ಡಾಲರ್, ಫ್ರಾನ್ಸ್ 160 ಕೋಟಿ ಡಾಲರ್, ಪೆÇೀಲೆಂಡ್ 130 ಕೋಟಿ ಡಾಲರ್, ಆಸ್ಟ್ರೇಲಿಯಾ 120 ಕೋಟಿ ಡಾಲರ್, ಯುಕೆ 9.69 ಕೋಟಿ ಡಾಲರ್, ಐರ್ಲ್ಯಾಂಡ್ 9.27 ಕೋಟಿ ಡಾಲರ್, ಜೆಕ್ ರಿಪಬ್ಲಿಕ್, ಉರುಗ್ವೆ, ಅರ್ಜೆಂಟೀನಾ, ಸೌದಿ ಅರೇಬಿಯಾ, ಆಸ್ಟ್ರಿಯಾ ಈ ಹದಿನೈದು ದೇಶಗಳು ಲೋಕದ 80.3 ಶೇಕಡಾ ಹಾಲು ರಫ್ತು ನಿರ್ವಹಿಸುತ್ತವೆ.

ಚೀನಾ, ಜರ್ಮನಿ, ಬೆಲ್ಜಿಯಂ, ನೆದರ್‍ಲ್ಯಾಂಡ್ಸ್, ಆಲ್ಜೀರಿಯಾ ಹಾಲು ಆಮದು ಮಾಡಿಕೊಳ್ಳುವ ದೇಶಗಳಾಗಿವೆ.

ಐರ್ಲ್ಯಾಂಡ್, ಫಿನ್ಲ್ಯಾಂಡ್, ಬ್ರಿಟನ್, ಆಸ್ಟ್ರೇಲಿಯಾ, ಸ್ವೀಡನ್, ಕೆನಡಾ, ಯುಎಸ್‍ಎ, ಇಯು, ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಗ್ರೀಸ್ ದೇಶಗಳವರು ಕ್ರಮವಾಗಿ ತಲಾವಾರು ಹೆಚ್ಚು ಹಾಲು ಕುಡಿಯುವವರಾಗಿದ್ದಾರೆ. ಭಾರತದವರು ವರುಷಕ್ಕೆ ತಲಾ 3.95 ಲೀಟರ್ ಹಾಲು ಮಾತ್ರ ಕುಡಿಯುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments