ಮೀನುಗಾರರು ಹಾಗೂ ಕೊಳ್ಳುಗರ ನಡುವೆ ನೇರ ಸಂಪರ್ಕದ ಮನೆಗೇ ಮೀನು ಮುಟ್ಟಿಸುವ ವೆಬ್ ಸೈಟ್ ಆರಂಭವಾಗಿದೆ.
ಕೆಎಫ್‍ಡಿಸಿ- ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮವು ಇದಕ್ಕಾಗಿ ಸೀ ಫುಡ್ ಎಟ್ ಡೋರ್ ಸ್ಟೆಪ್ಸ್ ಎಂಬ ಯೋಜನೆ ಆರಂಭಿಸಿದೆ. ಇದು ಡಿಜಿಟಲ್ ಇ ವಾಣಿಜ್ಯ ವೇದಿಕೆಯಾಗಿದೆ.
ಸಿದ್ಧ, ಶುದ್ಧ, ತಾಜಾ ಮೀನುಗಳನ್ನು ನೇರ ಮನೆಗೆ ಮುಟ್ಟಿಸಲಾಗುತ್ತದೆ. ಮೀನುಗಾರರ ಆದಾಯ ಹೆಚ್ಚಿಸಲು, ಸ್ವಸಹಾಯ ಸಹಕಾರ ಕೂಟ ಅಧಿಕರಿಸಲು ಇದು ಸಹಾಯಕ ಎನ್ನಲಾಗಿದೆ.

ಇದರ ಬಗೆಗೆ ಕೆಎಫ್‍ಡಿಸಿ ನಿರ್ದೇಶಕ ದಿನೇಶ್‍ಕುಮಾರ್ ಮಾತನಾಡಿ ಶಾಪಿಫೈ ತಂತ್ರಜ್ಞಾನದಡಿ ಈ ವೆಬ್ ಸೈಟ್ ರಚಿಸಲಾಗಿದೆ. ಜನರು ತಾಜಾ ಮೀನು ನೆಲೆಗಳನ್ನು ಅರಸಲು ಕೂಡ ವ್ಯವಸ್ಥೆ ಇದೆ. ಐದು ಕಿಲೋಮೀಟರ್ ವ್ಯಾಪ್ತಿಯಲ್ಲಿ ನಲ್ವತ್ತೊಂಬತ್ತು ರೂಪಾಯಿಗೆ ಮೀನು ಮನೆ ತಲುಪಲಿದೆ ಎಂದು ತಿಳಿಸಿದರು.

