ರಶಿಯಾದ ಸಂಪರ್ಕ ಹೊಂದಿದ್ದವು ಎಂಬ ಕಾರಣಕ್ಕೆ ಭಾರತದ ನಾಲ್ಕು ಕಂಪೆನಿಗಳ ವಿರುದ್ಧ ಹೇರಿದ್ದ ಆರ್ಥಿಕ ನಿರ್ಬಂಧವನ್ನು ಯುಎಸ್‍ಎ ತೆಗೆದು ಹಾಕಿದೆ.
ಯುಎಸ್‍ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಇದನ್ನು ಬಹಿರಂಗಪಡಿಸಿದ್ದಾರೆ. ಹೈದರಾಬಾದಿನ ಆರ್‍ಆರ್‍ಜಿ ಎಂಜಿನೀರಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಲೋಕೇಶ್ ಮೆಷೀನ್ಸ್ ಲಿಮಿಟೆಡ್, ಅಹಮದಾಬಾದಿನ ಗೆಲಾಕ್ಸಿ ಬೇರಿಂಗ್ಸ್ ಲಿಮಿಟೆಡ್, ದಿಲ್ಲಿಯ ಶೌರ್ಯ ಏರೋನಾಟಿಕ್ಸ್ ಪ್ರೈವೇಟ್ ಲಿಮಿಟೆಡ್ ಈ ನಾಲ್ಕು ಕಂಪೆನಿಗಳು ಅವು. ಈ ಕಂಪೆನಿಗಳ ಚಟುವಟಿಕೆಯು ರಶಿಯಾ ಸಂಬಂಧದವು ಎಂದು ಯುಎಸ್‍ಎ ಆರ್ಥಿಕ ನಿರ್ಬಂಧ ಹೇರಿತ್ತು.

ವಿದೇಶೀ ಸಂಪತ್ತು ಹತೋಟಿಯ ಖಜಾನೆ ಕಚೇರಿ ಮೂಲಕ ನಿರ್ಬಂಧ ತೆರವು ಮಾಡಿದ್ದನ್ನು ಪ್ರಕಟಿಸಲಾಗಿದೆ. ಭಾರತದ ಈ ಸಂಸ್ಥೆಯಲ್ಲದೆ, ಮೆಕ್ಸಿಕೋದ ಕಂಪೆನಿಗಳು, ಕೆಲವು ವ್ಯಕ್ತಿಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ಕೂಡ ತೆಗೆಯಲಾಗಿದೆ.

