ಸಚಿನ್ ಅಹಿರ್ ಅವರು ಉದ್ಧವ್ ಠಾಕ್ರೆ ಬಣದಿಂದ ಶಿಂಧೆ ಬಣಕ್ಕೆ ಬಂದ ಮರುದಿನವೇ ವಿಧಾನ ಪರಿಷತ್ತಿನ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಮುಖ್ಯವಾಗಿ ಶಿವಸೇನೆ ಮತ್ತು ಎನ್ಸಿಪಿಗಳಿಂದ ಒಡೆದು ಆಳುವ ಕೂಟದಲ್ಲಿ ಸೇರಿಕೊಂಡವರು ಬಹಳ ಮಂದಿ.

ಅದು ಮುಂದುವರಿದಿದೆ. ವಿಚಿತ್ರವೆಂದರೆ ನಿನ್ನೆ ಉದ್ಧವ್ ಬಣದಿಂದ ಸಚಿನ್ ಅಹಿರ್ ಉಪ ಮುಖ್ಯಮಂತ್ರಿ ಶಿಂಧೆ ಬಣಕ್ಕೆ ಬಂದರು. ನೇರ ಹೋಗಿ ನಾಮಪತ್ರ ಸಲ್ಲಿಸಿದರು. ಇಂದು ಆಳುವವರ ಬೆಂಬಲದಿಂದ ವಿಧಾನ ಪರಿಷತ್ತಿನ ಉಪನಾಯಕರಾಗಿ ಆಯ್ಕೆಯಾದರು.

ಗೆಲ್ಲಲು ಸಂಖ್ಯೆ ಇಲ್ಲದ್ದರಿಂದ ಎಂವಿಎ ಅಭ್ಯರ್ಥಿ ಅಭಯಂಕರ್ ನಾಮಪತ್ರ ಹಿಂಪಡೆದರು. ಹಾಗಾಗಿ ಅಹಿರ್ ಅವಿರೋಧವಾಗಿ ಆಯ್ಕೆಯಾದರು. ಎಂವಿಎ- ಮಹಾ ವಿಕಾಸ ಅಘಾಡಿ ಅಭ್ಯರ್ಥಿ ಅಭಯಂಕರ್ ನಾಮಪತ್ರ ಹಿಂಪಡೆದ ಬಗೆಗೂ ಗುಮಾನಿ ಪ್ರಕಟಿಸಲಾಗಿದೆ.

ಹಿಂದೆ ವರ್ಲಿ ಶಾಸಕರಾಗಿದ್ದ ಅಹಿರ್ ಅವರು ಅದಿತ್ಯ ಠಾಕ್ರೆಯ ಗೆಳೆಯರು. ಹಾಗಾಗಿ ಮೇಲ್ಮನೆಗೂ ಹೋದರು; ಈಗ ಆಳುವ ಪಕ್ಷಕ್ಕೂ ಹೋದರು. ರಾಜಕೀಯ ಹಸಿವು ಹೆಚ್ಚಾಗಿರುವುದು ಈ ಪಕ್ಷಾಂತರಗಳಿಗೆ ಕಾರಣ ಎಂದು ಶಿವಸೇನೆ ಉದ್ಧವ್ ಬಣದ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.



