ಆರ್ಕಟಿಕ್ನಿಂದ, ಹವಾಯಿ, ನ್ಯೂಜಿಲ್ಯಾಂಡ್ವರೆಗೆ ಇರುವ ಬಾತುಕೋಳಿಗಳು ಉಷ್ಣವಲಯದಲ್ಲಿ ಕಡಿಮೆ, ಶೀತ ವಲಯಗಳಲ್ಲಿ ಹೆಚ್ಚು ಇವೆ.
ನೀರುಕೋಳಿಗಳಾದ ಬಾತುಕೋಳಿಗಳ ಕತ್ತು ಹಂಸ, ಹೆಬ್ಬಾತುಗಳಿಗಿಂತ ಗಿಡ್ಡ ಇರುತ್ತದೆ. ಅಲ್ಲದೆ ನೀರು ಹಕ್ಕಿಗಳಾದ ಗ್ರೀನ್ಸ್, ಲೂನ್, ಕೂಟ್ಸ್ನಂತವುಗಳನ್ನು ಬಾತುಕೋಳಿ ಎಂದು ತಪ್ಪು ತಿಳಿಯುವವರೂ ಇದ್ದಾರೆ.
ಅನಾಟೈಡೇ ಕುಟುಂಬದ ಬಾತುಕೋಳಿಗಳಲ್ಲಿ ನೂರಾರು ಜಾತಿಯವು ಇವೆ. ನೆಲ ಜಲ ವಾಸಿಯಾದ ಇವು ಕೂಡು ಬೆರಳಿನ ಜಾಲಪಾದ ಹೊಂದಿವೆ. ಇವು ಹಾರುವುದು ಕಡಿಮೆ. ಒಂದೆರಡು ಜಾತಿಗಳು ಹಾರುವುದೇ ಇಲ್ಲ.

ಬಹು ಹಿಂದೆಯೇ ಮಾನವರು ಬಾತುಕೋಳಿ ಬೇಟೆಯಾಡಿ ತಿನ್ನುತ್ತಿದ್ದರು. 8,000 ವರುಷಗಳ ಹಿಂದಿನಿಂದ ಜನರು ಬಾತುಕೋಳಿಯನ್ನು ಸಾಕತೊಡಗಿದ್ದಾರೆ. ಇದು ಯೂರೋಪಿನಲ್ಲಿ ಆರಂಭವಾಯಿತು. ಬಡಗಣ ಅಮೆರಿಕದ ಓಹಿಯೋ ನದಿಯ ಪಕ್ಕದಲ್ಲೂ ಜನರು ಬಾತುಕೋಳಿಗಳನ್ನು ಏಳೆಂಟು ಸಾವಿರ ವರುಷಗಳಿಂದ ಸಾಕುತ್ತ ಬಂದಿದ್ದಾರೆ.
ಇದರ ಮೊಟ್ಟೆ, ಮಾಂಸ ತಿನ್ನುವ ಮಾನವನು ಹಿಂದೆ ಗರಿಗಳ ಹಾಸಿಗೆ ಮಾಡಿಕೊಳ್ಳುತ್ತಿದ್ದ.

