ಚುನಾವಣೆ ಆಯೋಗ SIR ಪ್ರಕ್ರಿಯೆ ನಡೆಸುತ್ತಿದ್ದು, ಜನರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ SIR ಪ್ರಕ್ರಿಯೆಯಲ್ಲಿ ಭಾಗವಹಿಸದೆ ಹಲವಾರು ಜನರ ಹೆಸರು ಮತಪಟ್ಟಿಯಿಂದ ಹೊರಗುಳಿಯುವ ಅಪಾಯವಿದ್ದು. ಜನರು ಯಾವ ಪಕ್ಷಕ್ಕೂ ಬೇಕಾದರೂ ಮತ ಹಾಕಲಿ ಅದು ಅವರಿಗೆ ಬಿಟ್ಟದ್ದು ಆದರೆ ಯಾರ ಮತವೂ ಮತದಾರರ ಪಟ್ಟಿಯಿಂದ ಡಿಲೀಟ್ ಆಗಬಾರದು ಎಂಬುದೇ ನಮ್ಮ ದ್ಯೇಯ ಅದಕ್ಕಾಗಿ SIR ಬಗ್ಗೆ ಪಕ್ಷಾತೀತವಾಗಿ ಮಾಹಿತಿ ಕಾರ್ಯಾಗಾರ ಹಮ್ಮಿಕೊಂಡಿದ್ದೇವೆ ಹಾಗೂ ನಮ್ಮಸಹಕಾರಿ ಸಂಘದ ಸರ್ವ ಸದಸ್ಯರ ಹಾಗೂ ಗ್ರಾಮಸ್ಥರ ಮತದ ಹಕ್ಕನ್ನು ಕಾಪಾಡುವ ಉದ್ದೇಶದಿಂದ ಈ ಮಾಹಿತಿ ಶಿಬಿರ ನಡೆಸಲಾಗಿರುತ್ತದೆ ಎಂದು ಆರ್ಯಾಪು ಸಹಕಾರಿ ಸಂಘದ ಅಧ್ಯಕ್ಷ ಎಚ್. ಮಹಮ್ಮದ್ ಅಲಿ ಹೇಳಿದರು.

ಅವರು ಆರ್ಯಾಪು ಸಹಕಾರಿ ಸಂಘದ ಕಚೇರಿಯಲ್ಲಿ ಏರ್ಪಡಿಸಲಾದ SIR ಮಾಹಿತಿ ಕಾರ್ಯಾಗಾರದಲ್ಲಿ ಪ್ರಸ್ತಾವಿಕವಾಗಿ ಮಾತನಾಡುತ್ತಾ ಚುನಾವಣೆ ಆಯೋಗ ಈಗಾಗಲೇ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯ ಮುಗಿಸಿದ್ದು ಅದರಲ್ಲಿ ಶೇಕಡಾ 90 ರಷ್ಟು ಮತದಾರರ ಹೆಸರು ಮ್ಯಾಪಿಂಗ್ ಆಗಿರುತ್ತದೆ. ಆದರೂ ಜನರಿಗೆ ತೊಂದರೆ ಕೊಡುವ ದುರುದ್ದೇಶದಿಂದ ಈ SIR ಪ್ರಕ್ರಿಯೆ ನಡೆಸಲಾಗುತ್ತಿದೆ. ಇದರಿಂದ ಜನರಿಗೆ ಅನಾವಶ್ಯಕ ಮಾನಸಿಕ ಹಿಂಸೆಯಾಗಿರುತ್ತದೆ.
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಇನ್ನು ಮುಂದಕ್ಕೆ ವಿದ್ಯಾರ್ಥಿವೇತನ, ಜಾತಿ ಮತ್ತು ಆದಾಯ ದಾಖಲೆಗಳು, ಪೆನ್ಶನ್ ಗಳು ಸೇರಿ ಸರಕಾರದ ಹಲವಾರು ಸೌಲಭ್ಯಗಳಿಂದ ವಂಚಿತರಾಗುವ ಅಪಾಯವಿದೆ ಆದ ಕಾರಣ SIR ಪ್ರಕ್ರಿಯೆಯಲ್ಲಿ ಎಲ್ಲರು ಬಾಗವಹಿಸಿ ಎಂದು ಜನರಿಗೆ ಕರೆ ನೀಡಿದರು .
ಗಿಡಕ್ಕೆ ನೀರು ಹೊರೆಯುವ ಮೂಲಕ
ಕಾರ್ಯಗಾರವನ್ನು ಉದ್ಘಾಟಿಸಿದ SIR ತರಬೇತುದಾರರಾದ ಶ್ರೀಮತಿ ಅಮಿತಾ ಅಶ್ವಿನ್ ಉಳ್ಳಾಲ್ ರವರು ಸೇರಿದ ಜನರಿಗೆ SIR ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ರೈ. ನಿರ್ದೇಶಕರುಗಳಾದ ಸದಾನಂದ ಶೆಟ್ಟಿ ಕೊರೆಲು, ಇಸ್ಮಾಯಿಲ್ ಮಲಾರ್, ಗಣೇಶ್ ರೈ ಕುರಿಯ, ಸಂಶುದ್ದೀನ್ ನೀರ್ಕಜೆ,ಶ್ರೀಮತಿ ತೆರೆಜ ಸಿಕ್ವೆರಾ,ಶಾಕಾ ವ್ಯವಸ್ಥಾಪಕಿ ಶ್ರೀಮತಿ ಶುಭಾಶಿನಿ, ಸಿಬ್ಬಂದಿಗಳಾದ ಅರ್ಜುನ್ ಭಾಸ್ಕರ್, ಶ್ರೀಮತಿ ಪ್ರಶಾಂತಿ, ವಿನಯ ಕುಮಾರ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು, ನಿರ್ದೇಶಕಿ ಶ್ರೀಮತಿ ತೆರೆಜ ಸಿಕ್ವೆರಾರವರು ಶ್ರೀಮತಿ ಅಮಿತಾ ಅಶ್ವಿನ್ ಉಳ್ಳಾಲ್ ರವರನ್ನು ಸಹಕಾರಿ ಶಾಲು ಹೊದಿಸಿ, ಹೂ ಗುಚ್ಚ ನೀಡಿ ಗೌರವಿಸಿದರು
ಸಿಬ್ಬಂದಿ ಉಮೇಶ್ ಎಸ್ ಕೆ ಕಾರ್ಯಕ್ರಮ ನಿರೂಪಣೆ ಮಾಡಿದರು.


