HomeFresh Newsವಿಬಿ ರಾಮ್‌ಜಿ ಎಎಂ ಮುಟ್ಟದ ಹಳ್ಳಿಗಳು - ಮಳೆ ಕೊರತೆಯಿಂದ ಹಳ್ಳಿಗಳ ಕಾತರ

ವಿಬಿ ರಾಮ್‌ಜಿ ಎಎಂ ಮುಟ್ಟದ ಹಳ್ಳಿಗಳು – ಮಳೆ ಕೊರತೆಯಿಂದ ಹಳ್ಳಿಗಳ ಕಾತರ

ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಮಳೆ ಕೊರತೆ, ಕೆಲವೆಡೆ ಬಾರದ್ದರಿಂದ ಗ್ರಾಮೀಣ ಉದ್ಯೋಗ ಕಾತರಿ ಯೋಜನೆಗೆ ಬೇಡಿಕೆ ಇದೆ; ಆದರದು ಕೆಲವೆಡೆ ಸಿಕ್ಕಿಯೇ ಇಲ್ಲ.

ಮಹಾತ್ಮಾ ಗಾಂಧಿ ಉದ್ಯೋಗ ಕಾತರಿ ಯೋಜನೆಗೆ ಬದಲಾಗಿ ತಂದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಅಜೀವಿಕಾ ಮಿಶನ್ ಬಂದಿದೆ. ಆದರೆ ಈಗಿನ ತುರ್ತು ಸಮಯವನ್ನು ಅದು ಕೆಲವೆಡೆ ಇನ್ನೂ ಆರಂಭವೇ ಆಗಿಲ್ಲ. ಕರ್ನಾಟಕದ 5,958 ಗ್ರಾಮಗಳಲ್ಲಿ ಮನರೇಗಾ ನಿಂತಿದೆ, ವಿಬಿ ರಾಮ್‌ಜಿ ಬಂದಿಲ್ಲ. ಜೊತೆಗೆ ಮಳೆ ಕೈಕೊಟ್ಟಿರುವುದರಿಂದ ಹಳ್ಳಿಗಾಡಿನವರು ಒತ್ತಡಕ್ಕೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

60:40 ದಾಮಾಶಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ‌ಸೇರಿ 1,621.18 ಕೋಟಿ ರೂಪಾಯಿ ಬಿಡುಗಡೆ ಆಗಿದ್ದರೂ ಕೆಲಸ ಆಗದಿರುವುದೇಕೆ. ವರುಷದಲ್ಲಿ 100ರಿಂದ 125 ದಿನ ಕೆಲಸದ ಕಾತರಿ ಕೊಡಬೇಕು. ಆದರೆ ಜುಲಾಯಿ ಮುಗಿಯುತ್ತ ಬಂದರೂ ರಾಮ್‌ಜಿ ಬಂದಿಲ್ಲ ಎನ್ನುವ ಸ್ಥಿತಿ.

ತಿಳಿದು ಬಂದಿರುವಂತೆ 2025ರಲ್ಲಿ 61.49 ಲಕ್ಷ ಮಾನವ ದಿನಗಳ ಕೆಲಸ ಆಗಿದೆ. ಈ ವರುಷ ಏಳು ತಿಂಗಳು ಮುಗಿಯುವಾಗ 10.23 ಲಕ್ಷ ಮಾನವ ದಿನಗಳ ಕೆಲಸ ಮಾತ್ರ ಆಗಿದೆ. ಹಳ್ಳಿಗರ ಗುಳೆ ವಲಸೆ ಮತ್ತೆ ಆರಂಭವಾಗಿದೆ.

Sudha Interior new 1
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments