ಪುತ್ತೂರು:ನಿರ್ಮಾಣ, ಕಾರ್ಯ ಹಾಗೂ ವಿಶ್ಚಾಸದಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ಇನ್ನೊ ಕಂಪೆನಿಯ ದ.ಕ ಜಿಲ್ಲೆಯ ಅಧಿಕೃತ ಡೀಲರ್ ದೀರ್ಘಕಾಲ ಬಾಳ್ವಿಕೆ ಬರುವ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆ ನೀಡುವ ಸಾಧನೆಗಳನ್ನೊಳಗೊಂಡ ಶ್ರೀ ಮಹಾಲಿಂಗೇಶ್ವರ ಪವರ್ ಟೂಲ್ಸ್(ವಿದ್ಯುತ್ ಚಾಲಿತ ಉಪಕರಣಗಳು) ಸಂಸ್ಥೆಯು ಜು.29 ರಂದು ಪುತ್ತೂರು ಎಂ.ಟಿ ರಸ್ತೆಯ ಕ್ಯಾಂಸ್ಕೋ ಹತ್ತಿರದ ಎಸ್.ಕೆ.ಎ.ಸಿ.ಎಂ.ಎಸ್ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ಭಾರತೀಯ ನೌಕಾದಳದ ನಿವೃತ್ತ ಯೋಧ, ಕೆ.ಎಸ್.ಎಸ್.ಎನ್ ಪುತ್ತೂರು ಇದರ ಸ್ಥಾಪಕಾಧ್ಯಕ್ಷರು ಹಾಗೂ ನಿರ್ದೇಶಕರಾದ ಸುಬ್ರಹ್ಮಣ್ಯ ಕೆಮ್ಮಿಂಜೆರವರು ರಿಬ್ಬನ್ ಕತ್ತರಿಸಿ ಮಾತನಾಡಿ, ಎಂ.ಟಿ ರಸ್ತೆಯಲ್ಲಿನ ಶ್ರೀ ಮಹಮ್ಮಾಯ ದೇವಸ್ಥಾನದ ಮಡಿಲಲ್ಲಿ ಕಾರ್ತಿಕ್ ರವರು ನೂತನ ಪವರ್ ಟೂಲ್ಸ್ ಮಳಿಗೆಯನ್ನು ತೆರೆದಿರುತ್ತಾರೆ. ಪ್ರತಿಷ್ಠಿತ ಕ್ಯಾಂಸ್ಕೋ ಹತ್ತಿರದಲ್ಲಿದ್ದು ಕ್ಯಾಂಸ್ಕೋ ಸಂಸ್ಥೆಗೆ ಸಾಕಷ್ಟು ಕೃಷಿಕರು ಆಗಮಿಸುತ್ತಿದ್ದು ಹತ್ತಿರದಲ್ಲಿಯೇ ಇರುವ ಈ ಪವರ್ ಟೂಲ್ಸ್ ಮಳಿಗೆಯು ಗ್ರಾಹಕರಿಗೆ ಬಹಳ ಉಪಯುಕ್ತವೆನಿಸುತ್ತದೆ ಎಂದು ಹೇಳಿ ನೂತನ ಉದ್ಯಮಕ್ಕೆ ಶುಭ ಹಾರೈಸಿದರು.
ನೂತನ ಸಂಸ್ಥೆಯನ್ನು ಪುತ್ತೂರು ನಗರಸಭಾ ನಿಕಟಪೂರ್ವ ಉಪಾಧ್ಯಕ್ಷರಾದ ಬಾಲಚಂದ್ರ ಕೆ.ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸ್ವಾವಲಂಭಿ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ನನ್ನ ಸಂಬಂಧಿಯಾಗಿರುವ ಕಾರ್ತಿಕ್ ರವರು ನೂತನ ಉದ್ಯಮಕ್ಕೆ ಗುರುಪೂರ್ಣಿಮೆ ದಿನದಂದು ಆರಂಭಿಸಿರುತ್ತಾರೆ. ಪವರ್ ಟೂಲ್ಸ್ ಗಳು ಬೇರೆ ಕಡೆ ಸಿಗುತ್ತಿದ್ದರೂ ಇಲ್ಲಿರುವುದು ಬ್ರಾಂಡೆಡ್ ಉತ್ಪನ್ನಗಳು ಎಂಬುದು ಗಮನಾರ್ಹ. ಹಿಂದಿನ ಕಾಲದಲ್ಲಿ ಮನುಷ್ಯನ ಸಾಮಾರ್ಥ್ಯದೊಂದಿಗೆ ಕೆಸಲ ನಡೆಯುತ್ತಿತ್ತು. ಇಂದಿನ ಆಧುನಿಕ ಯುಗದಲ್ಲಿ ಪವರ್ ಟೂಲ್ಸ್ ಮೂಲಕ ಸುಲಭರೀತಿಯಲ್ಲಿ ಕೆಲಸ ಕಾರ್ಯಗಳು ಮಾಡಬಹುದಾಗಿದೆ. ಎಲೆಕ್ಟಿಕಲ್, ಫ್ಯಾಬ್ರಿಕೇಟರ್ ನಿಂದ ಹಿಡಿದು ಕೂಲಿ ಕಾರ್ಮಿಕರ ತನಕ ಸುಲಭ ರೀತಿಯಲ್ಲಿ ಕೆಲಸ ಮಾಡುವ ಬ್ರಾಂಡೆಡ್ ಉಪಕರಣಗಳು ಸಿಗುತ್ತಿದ್ದು ಕುಶಲಕರ್ಮಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು ಎಂದರು.
ವಿಶ್ರಾಂತ ಉಪನ್ಯಾಸಕ ಡಾ.ಶ್ರೀಶ ಕುಮಾರ್ ಮಾತನಾಡಿ, ನೂತನ ಮಳಿಗೆಯ ಮಾಲಕ ಕಾರ್ತಿಕ್ ರವರಲ್ಲಿ ಉಪಕರಣಗಳನ್ನು ಹೇಗೆ ಬಳಸುವುದು, ಅದರಲ್ಲಿನ ಸಮಸ್ಯೆಗಳ ಬಗ್ಗೆ, ಅದರ ರಕ್ಷಣೆ ಬಗ್ಗೆ ಬಹಳಷ್ಟು ಅನುಭವವಿದೆ. ಇಂದಿನ ದಿನಗಳಲ್ಲಿ ಕಡಿಮೆ ಮೊತ್ತಕ್ಕೆ ವಸ್ತು ಸಿಗಬೇಕೆಂಬ ಹುಚ್ಚುತನ ಗ್ರಾಹಕರಲ್ಲಿದೆ. ಆದರೆ ಖರೀದಿ ಮಾಡಿದಂತಹ ವಸ್ತುಗಳನ್ನು ರಿಪೇರಿ ಮಾಡುವವರು ಯಾರು ಎಂಬ ಅರಿವು ಇಲ್ಲದಿರುವುದು ಖೇದಕರ. ಯಾರೇ ಉದ್ಯಮ ಆರಂಭಿಸಲಿ, ಅವರಲ್ಲಿ ಗುಣಮಟ್ಟದ ಸೇವೆ ಮಾಡುವ ಮನಸ್ಸು ಇರಬೇಕು, ಆವಾಗ ಗ್ರಾಹಕರು ಹುಡುಕಿಕೊಂಡು ಬರುತ್ತಾರೆ ಮಾತ್ರವಲ್ಲ ಮಳಿಗೆಯ ಮೇಲೆ ವಿಶ್ವಾಸ ಮೂಡುತ್ತದೆ ಎಂದರು. ವಿಶ್ರಾಂತ ಉಪನ್ಯಾಸಕ ಡಾ.ಶ್ರೀಶ ಕುಮಾರ್ ಹಾಗೂ ಭಾರತೀಯ ನೌಕಾದಳದ ನಿವೃತ್ತ ಯೋಧ ಸುಬ್ರಹ್ಮಣ್ಯ ಕೆಮ್ಮಿಂಜೆರವರು ಪ್ರಥಮ ಖರೀದಿಯೊಂದಿಗೆ ಉತ್ಪನ್ನಗಳನ್ನು ಖರೀದಿಸುವ ಮೂಲಕ ಮಳಿಗೆಯ ಉದ್ಯಮಕ್ಕೆ ಚಾಲನೆ ನೀಡಿದರು.
ಸಂಸ್ಥೆಯ ಮಾಲಕ ಕಾರ್ತಿಕ್ ಹಾಗೂ ಅವರ ತಂದೆ ಉದಯ ಕುಮಾರ್, ತಾಯಿ ಮಾಲಿನಿ, ಸಹೋದರ ಸಾಪ್ಟ್ ವೇರ್ ಇಂಜಿನಿಯರ್ ಕೀರ್ತನ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಡಿಬಿಸಿ ಆಗೋ ಚೀಫ್ ಮ್ಯಾನೇಜರ್ ನೇಮಿರಾಜ್ ರೈ,ಸುಭಾಶ್ಚಂದ್ರ, ಮೋಹನ್ ರಾವ್ ಕಾಡುಮನೆ, ನವದೀಪ್ ಎಂಟರ್ಪ್ರೈಸ್ ಮಾಲಕ ಯುವರಾಜ್ ನೆಕ್ಸಾರ್, ದಿನೇಶ್ ಕುಮಾರ್ ಮರೀಲು, ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ ಚಾಲಕ ಉದಯ, ರಾಜೇಂದ್ರ ಮೆಸ್ಕಾಂ, ಮಾಜಿ ನಗರಸಭೆ ಸದಸ್ಯ ಹರೀಶ್ ಮಾಲ್ಲೊಟ್ಟು, ಶ್ರೀ ಮಹಾಲಿಂಗೇಶ್ವರ ಗ್ಯಾಸ್ ಏಜೆನ್ಸಿ ಸಿಬ್ಬಂದಿ ರಾಜೇಶ್, ಧೀರಜ್, ಶ್ರವಣ್ ದೀಪ್, ಕರಣ್ ದೀಪ್, ಶ್ರವಣ್ ಅತ್ತಾಳ, ಗಗನ್ ದೀಪ್, ಶ್ರೀಶ ಅತ್ತಾಳ, ಅನೀಶ್ ಕುಮಾರ್ ಮರೀಲ್, ಅನಿಲ್ ಮರೀಲು, ಕಾರ್ತೀಕ್ ಕೆಮ್ಮಿoಜೆ,ವಲ್ಲೀಶ ಮರೀಲು, ನವನೀತ್ ಬಜಾಜ್ ಸಹಿತ ಹಲವರು ಆಗಮಿಸಿ ಸಂಸ್ಥೆಗೆ ಶುಭ ಹಾರೈಸಿದರು.

