ಮುಕ್ಕ: ನಂದಾದೀಪ ಸೇವಾ ಬಳಗವು ತನ್ನ 7ನೇ ಸೇವಾ ಕಾರ್ಯವಾಗಿ ವೈದ್ಯಕೀಯ ಚಿಕಿತ್ಸೆಗೆ ನೆರವು ಅಗತ್ಯವಿದ್ದ ತೌಸಿಫ್ ಅವರಿಗೆ ₹33,000 ಮೊತ್ತದ ಆರ್ಥಿಕ ಸಹಾಯವನ್ನು ನೀಡಿದೆ.
ಇಂದು ನಂದಾದೀಪ ಸೇವಾ ಬಳಗದ ಸದಸ್ಯರು ತೌಸಿಫ್ ಅವರ ನಿವಾಸಕ್ಕೆ ಭೇಟಿ ನೀಡಿ, ಸಾರ್ವಜನಿಕರು ಹಾಗೂ ದಾನಿಗಳ ಸಹಕಾರದಿಂದ ಸಂಗ್ರಹವಾದ ₹33,000 ಮೊತ್ತವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನಂದಾದೀಪ ಸೇವಾ ಬಳಗದ ಗೌರವಾಧ್ಯಕ್ಷ ಚಂದ್ರಶೇಖರ್ ಕರ್ಕೇರ, ಸದಸ್ಯರಾದ ಪುರುಷೋತ್ತಮ್ ದೇವಾಡಿಗ, ಶೈಲೇಶ್ ಸುವರ್ಣ, ತಾರಾನಾಥ್ ಕರ್ಕೇರ, ಜಗನ್ನಾಥ್ ಕೋಟ್ಯಾನ್, ರಾಜೇಶ್ ಸುವರ್ಣ, ಸುಮನ್ ಆಚಾರ್ಯ, ಸುಭಾಷ್, ರೋಹಿತ್ ದೇವಾಡಿಗ, ಸ್ಥಾಪಕ ಅಧ್ಯಕ್ಷ ಮಹೇಶ್ ದೇವಾಡಿಗ ಹಾಗೂ ಬರಹಗಾರ ವಿನಯ್ ಬೋಳಾರ್ ಉಪಸ್ಥಿತರಿದ್ದರು.
ಈ ಸೇವಾ ಕಾರ್ಯಕ್ಕೆ ಸಹಕರಿಸಿದ ಎಲ್ಲಾ ದಾನಿಗಳು ಹಾಗೂ ಬೆಂಬಲಿಗರಿಗೆ ನಂದಾದೀಪ ಸೇವಾ ಬಳಗವು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದೆ.


