ಮಂಗಳೂರು: ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ತನ್ನ ಗ್ರಾಹಕರಿಗಾಗಿ “ಜಿ.ಎಲ್. ಸ್ವರ್ಣ ಧಾರಾ” ಚಿನ್ನ ಉಳಿತಾಯ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆಯು ಪುತ್ತೂರು, ಸುಳ್ಯ, ಮೂಡಬಿದ್ರೆ, ಹಾಸನ ಹಾಗೂ ಕುಶಾಲನಗರ ಶಾಖೆಗಳಲ್ಲಿ ಲಭ್ಯವಿದೆ.
ಈ ವಿಶೇಷ ಉಳಿತಾಯ ಯೋಜನೆಯ ಮೂಲಕ ಗ್ರಾಹಕರು ಪ್ರತಿತಿಂಗಳು ಕಂತು ಪಾವತಿಸಿ, ಅದನ್ನು ಚಿನ್ನದ ಹೂಡಿಕೆಯಾಗಿ ಪರಿವರ್ತಿಸಿಕೊಳ್ಳುವ ಅವಕಾಶವನ್ನು ಪಡೆಯಲಿದ್ದಾರೆ. ಜೊತೆಗೆ, ಯೋಜನೆಯ ಸದಸ್ಯರಿಗೆ ಆಕರ್ಷಕ ಬೋನಸ್ ಸೌಲಭ್ಯವೂ ನೀಡಲಾಗುತ್ತಿದೆ.
ಭವಿಷ್ಯಕ್ಕಾಗಿ ಸುರಕ್ಷಿತ ಉಳಿತಾಯದ ಜೊತೆಗೆ ಚಿನ್ನದ ರೂಪದಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ಒದಗಿಸಿರುವ ಈ ಯೋಜನೆ, ಗ್ರಾಹಕರಿಂದ ಉತ್ತಮ ಸ್ಪಂದನೆ ಪಡೆಯುವ ನಿರೀಕ್ಷೆಯಿದೆ.
ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರು ತಮ್ಮ ಸಮೀಪದ ಶಾಖೆಗೆ ಭೇಟಿ ನೀಡಿ, ಜಿ.ಎಲ್. ಸ್ವರ್ಣ ಧಾರಾ ಉಳಿತಾಯ ಯೋಜನೆಯ ಸದಸ್ಯರಾಗಿ ಆಕರ್ಷಕ ಬೋನಸ್ ಹಾಗೂ ವಿಶೇಷ ಸೌಲಭ್ಯಗಳ ಪ್ರಯೋಜನ ಪಡೆಯುವಂತೆ ಆಹ್ವಾನಿಸಿದೆ.

