HomeFresh Newsಬೋಳದಲ್ಲಿ ಆ.9ರಂದು ಯಕ್ಷಗಾನ ತಾಳಮದ್ದಳೆ 'ವೀರಮಣಿ ಕಾಳಗ'

ಬೋಳದಲ್ಲಿ ಆ.9ರಂದು ಯಕ್ಷಗಾನ ತಾಳಮದ್ದಳೆ ‘ವೀರಮಣಿ ಕಾಳಗ’

ಉಡುಪಿ: ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ.) ಬೋಳ ಹಾಗೂ ಅಶ್ವತ್ಥ ನಾರಾಯಣ ಭಜನಾ ಮಂಡಳಿ, ಬರಬೈಲು–ಬೋಳ ಇವರ ಸಂಯುಕ್ತ ಆಶ್ರಯದಲ್ಲಿ ಸುಪ್ರಸಿದ್ಧ ಕಲಾವಿದರಿಂದ ಕವಿ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ ‘ವೀರಮಣಿ ಕಾಳಗ’ ಯಕ್ಷಗಾನ ತಾಳಮದ್ದಳೆ
ಕಾರ್ಯಕ್ರಮವು ಆಗಸ್ಟ್ 9, ಭಾನುವಾರ ಮಧ್ಯಾಹ್ನ 2 ಗಂಟೆಗೆ ಬರಬೈಲಿನ ಅಶ್ವತ್ಥ ನಾರಾಯಣ ಭಜನಾ ಮಂದಿರದಲ್ಲಿ ನಡೆಯಲಿದೆ.


ಭಾಗವತರಾಗಿ ದೇವಿ ಪ್ರಸಾದ್ ಆಳ್ವ ತಲಪಾಡಿ, ಮದ್ದಳೆಯಲ್ಲಿ ಯೋಗೀಶ್ ಆಚಾರ್ಯ ಉಳೆಪಾಡಿ, ಚೆಂಡೆಯಲ್ಲಿ ಅಶೋಕ ಆಚಾರ್ಯ ಉಳೆಪಾಡಿ ಹಾಗೂ ಚಕ್ರತಾಳದಲ್ಲಿ ರವಿಚಂದ್ರ ವಂಜಾರಕಟ್ಟೆ ಭಾಗವಹಿಸಲಿದ್ದಾರೆ.


ಅರ್ಥದಾರಿಗಳಾಗಿ ಜಬ್ಬಾರ್ ಸಮೋ ಸಂಪಾಜೆ, ಸದಾಶಿವ ಆಳ್ವ ತಲಪಾಡಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ಹಾಗೂ ಸತೀಶ್ ಮಾಣಿ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ಯಕ್ಷಗಾನ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಗೌರವಾಧ್ಯಕ್ಷರಾದ ಉದಯ ಶೆಟ್ಟಿ ಮೂಡುಮನೆ, ಜಗನ್ನಾಥ ಶೆಟ್ಟಿ ಕಲ್ಲಬೆಟ್ಟು, ಕಾರ್ಯಾಧ್ಯಕ್ಷ ಬೋಳ ಸುಧಾಕರ ಆಚಾರ್ಯ, ಅಧ್ಯಕ್ಷ ಬಿ. ಸುದರ್ಶನ ಬಂಗೇರ, ಕಾರ್ಯದರ್ಶಿ ಸತೀಶ್ ಶೆಟ್ಟಿ ಅನ್ನೊಟ್ಟು, ಕೋಶಾಧಿಕಾರಿಗಳಾದ ದಿನೇಶ್ ದೇವಾಡಿಗ ಮತ್ತು ದೇವದಾಸ ಕಾಮತ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ. ಕಾರ್ಯಕ್ರಮದ ಯಶಸ್ಸಿಗೆ ಬಿ.ಎಸ್. ಪ್ರಕಾಶ ಆಚಾರ್ಯ, ವಿಜಯಕುಮಾರ್ ಕುಕ್ಕುಡೆಲು, ಸೂರಜ್ ಕುಲಾಲ್ ಹಾಗೂ ಸತೀಶ್ ಪ್ರಭು ವಂಜಾರಕಟ್ಟೆ ಸಹಕರಿಸುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home interiors
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments