ಮೂಡುಬಿದಿರೆ : ಘನ ವಾಹನಗಳ ಸಂಚಾರ, ಟ್ರಾಫಿಕ್ ಸಮಸ್ಯೆಯ ಬಗ್ಗೆ ಪಣಂಬೂರು ಎಸಿಪಿ, ಮೂಡುಬಿದಿರೆ ಪೊಲೀಸ್ ಠಾಣಾಧಿಕಾರಿ ಹಾಗೂ ಪುರಸಭೆಯ ಅಧಿಕಾರಿಗಳು ಜಂಟಿಯಾಗಿ ಸೋಮವಾರ ಮೂಡುಬಿದಿರೆ ಪಟ್ಟಣದ ವಿವಿಧ ಭಾಗಗಳಲ್ಲಿ ಸಂಚಾರ ಸಮೀಕ್ಷೆ ನಡೆಸಿ, ಪ್ರಸ್ತುತ ಎದುರಾಗುತ್ತಿರುವ ಸಮಸ್ಯೆಗಳಿಗೆ ತ್ವರಿತ ಹಾಗೂ ಕಾರ್ಯಸಾಧ್ಯ ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನ ನಡೆಸಿದರು.
ನೋ-ಎಂಟ್ರಿ ಉಲ್ಲಂಘನೆ
ಹೆಲ್ಮೆಟ್ ಧರಿಸದಿರುವುದು ಮತ್ತು ಸರಿಯಾಗಿ ಲಾಕ್ ಮಾಡದಿರುವುದು, ಸೀಟ್ ಬೆಲ್ಟ್ ಧರಿಸದಿರುವುದು ಸಹಿತ ಇತರ ಪ್ರಮುಖ ಸಂಚಾರ ನಿಯಮ ಉಲ್ಲಂಘನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಹಾಗೂ ದಂಡ ವಿಧಿಸುವುದಾಗಿ ಪಣಂಬೂರು ಎಸಿಪಿ ಶ್ರೀಕಾಂತ್ ಭರವಸೆ ನೀಡಿದ್ದಾರೆ.

ಸೆ.1 ರಂದು ಆಟೋ, ಖಾಸಗಿ ಬಸ್, ಶಾಲಾ ಬಸ್, ಗೂಡ್ಸ್ ವಾಹನ ಹಾಗೂ ಟೂರಿಸ್ಟ್ ಟಾವೆಲರ್ಸ್ ವಾಹನಗಳ ಸಂಘಟನೆಗಳೊಂದಿಗೆ ಸಭೆ ನಡೆಸಿ, ಎಲ್ಲರೂ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸ್ಪಷ್ಟ ಸೂಚನೆ ನೀಡುವುದಾಗಿ ಎಸಿಪಿ ಅವರು ತಿಳಿಸಿದ್ದಾರೆ.
ಮೂಡುಬಿದಿರೆ ಪಟ್ಟಣದೊಳಗೆ ಯಾವುದೇ ಕೆಲಸವಿಲ್ಲದ ವಾಹನಗಳು ಮುಖ್ಯ ರಸ್ತೆಗೆ ಪ್ರವೇಶಿಸದೆ ರಿಂಗ್ ರೋಡ್ ಅಥವಾ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಿ, ಪಟ್ಟಣದ ಅನಗತ್ಯ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ., ಮೂಡುಬಿದಿರೆ ಪೊಲೀಸ್ ನಿರೀಕ್ಷಕ ರಾಜೇಂದ್ರ, ಮಂಗಳೂರು ಉತ್ತರದ ಟ್ರಾಫಿಕ್ ಇನ್ಸ್ಪೆಕ್ಟರ್ ಶಿವ ಕುಮಾರ್, ನಮ್ಮ ಮೂಡುಬಿದಿರೆ ಫೋರಂ’ನ ಅಕ್ಷಯ್ ಕೆ. ಜೈನ್ ಈ ಸಂದಭ೯ದಲ್ಲಿದ್ದರು.


