HomeFresh Newsಮಂಗಳೂರಿನಲ್ಲಿ‌ಸಚಿವ‌ ಸಂಪುಟ ಸಭೆ: ಸ್ಥಳ ವೀಕ್ಷಣೆ ಮಾಡಿದ ಶಾಸಕ ಅಶೋಕ್ ರೈ

ಮಂಗಳೂರಿನಲ್ಲಿ‌ಸಚಿವ‌ ಸಂಪುಟ ಸಭೆ: ಸ್ಥಳ ವೀಕ್ಷಣೆ ಮಾಡಿದ ಶಾಸಕ ಅಶೋಕ್ ರೈ

ಪುತ್ತೂರು: ಸೆ. 18 ರಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ರಾಜ್ಯ‌ಸಚಿವ ಸಂಪುಟ ಸಭೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರು ಸಭೆ ನಡೆಯುವ ಜಿಲ್ಲಾಧಿಕಾರಿಗಳ ಕಚೇರಿ ಸ್ಥಳ ಪರಿಶೀಲನೆ ನಡೆಸಿದರು.
ಮಂಗಳೂರಿನಲ್ಲಿ‌ನಡೆಯುವ ಸಚಿವ‌ಸಂಪುಟ ಸಭೆಯಲ್ಲಿ ಪುತ್ತೂರು ಸರಕಾರಿ ಮೆಡಿಕಲ್ ಕಾಲೇಜಿಗೆ ಅನುಮೋದನೆ ದೊರೆಯಲಿದ್ದು ಜೊತೆಗೆ ಜಿಲ್ಲೆಗೆ ಸಂಭಂದಿಸಿದ‌ಕೆಲವೊಂದು‌ಮಹತ್ವದ ವಿಚಾರ,ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಷುವರಿ‌ಭಾಷೆಯಾಗಿ ಘೋಷಣೆ ಮಾಡುವ ವಿಚಾರವೂ ಸಭೆಯಲ್ಲಿ‌ಚರ್ಚೆಯಾಗಲಿದೆ.


ಈ‌ಸಂಧರ್ಭದಲ್ಲಿ ಎಡಿಸಿ ರಾಜು,ಕೆಪಿಸಿಸಿ‌ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ,ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್,ಪಕ್ಷದ ಮುಖಂಡರುಗಳಾದ ರಂಜಿತ್ ಬಂಗೇರ,ಫಾರೂಕ್ ಬಾಯಬ್ಬೆ,ಪೂರ್ಣೇಶ್ ಭಂಡಾರಿ,ಗಿರೀಶ್ ರೈ ಕೈಕಾರ,ದಯಾನಂದ ರೈ ,ಸದಾಶಿವ ರೈ ದಂಬೆಕಾನ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments