ಮೂಡುಬಿದಿರೆ : ಸಾವಿರಾರು ವಷ೯ಗಳ ಇತಿಹಾಸವಿರುವ ತುಳು ಭಾಷೆಗೆ ಸೌಹಾದ೯ತೆಯೇ ಅಡಿಪಾಯ. ಈ ಭಾಷೆಯನ್ನು ಸೌಹಾದ೯ತೆಯೊಂದಿಗೆ ರಕ್ಷಣೆ ಮಾಡಿ ಮುಂದಿನ ಯುವಜನತೆಗೆ ನೀಡುವಂತಹ ಕೆಲಸ ನಮ್ಮಿಂದಾಗಬೇಕಾಗಿದೆ ಎಂದು ಉಡುಪಿ ಶಿವರಾಮ ಕಾರಂತ ಟ್ರಸ್ಟ್ ನ ಅಧ್ಯಕ್ಷ ಡಾ. ಗಣನಾಥ ಎಕ್ಕಾರ್ ಹೇಳಿದರು.
ಕನಾ೯ಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಶ್ರೀ ಧವಲಾ ಮಹಾ ವಿದ್ಯಾಲಯ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ತುಳು ವಿಚಾರಗೋಷ್ಠಿ ಮತ್ತು ಸಾಹಿತ್ಯ ಸಾಂಸ್ಕೃತಿಕ ಸ್ಪಧಾ೯ ಕಾಯ೯ಕ್ರಮ ‘ತುಳುವ ಐಸಿರಿ -2026’ನ್ನು ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಉದ್ಘಾಟಿಸಿ ‘ಆಡಳಿತ ಭಾಷೆಯಾಗಿ ತುಳು-ಹೊಸ ಸಾಧ್ಯತೆಗಳು’ ಎಂಬ ವಿಷಯವಾಗಿ ತುಳು ಉಪನ್ಯಾಸ ನೀಡಿ ಮಾತನಾಡಿದರು.
ತುಳು ಭಾಷೆಯಲ್ಲಿ ಜಾನಪದ ಸಂಪತ್ತು ಮತ್ತು ಸಾಹಿತ್ಯದ ಪರಂಪರೆಯಿದೆ.ಈ ಭಾಷೆಯ ಉಳಿವಿಗಾಗಿ ಹಲವಾರು ಮಂದಿ, ಸಂಘಟನೆಗಳು ತಮ್ಮದೇ ರೀತಿಯಲ್ಲಿ ಕೊಡುಗೆಗಳನ್ನು ನೀಡಿದ್ದು ಅದರಲ್ಲೂ ಯುವಕ ಮಂಡಲಗಳು ತುಳು ನಾಟಕಗಳನ್ನು ಮಾಡುವ ಮೂಲಕ ಶ್ರಮಪಟ್ಟಿವೆ.
ಇದೀಗ ರಾಜ್ಯ ಸರಕಾರವು ತುಳು ಭಾಷೆಯನ್ನು ಎರಡನೆ ಅಧಿಕೃತ ಭಾಷೆಯಾಗಿ ಅಂಗೀಕಾರ ಮಾಡಿದೆ. ಆದ್ದರಿಂದ ನಾವು ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವಂತೆ ದೇಶದ ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗೆ ಮನವಿ ಸಲ್ಲಿಸಿ ಆಗ್ರಹಿಸುವ ಕೆಲಸ ಅಗತ್ಯವಾಗಿ ಮಾಡಬೇಕಾಗಿದೆ ಎಂದರು.
ಸನ್ಮಾನ : ಡಿಜೆವಿ ಸಂಘದ ಸಂಚಾಲಕ ಕೆ. ಹೇಮರಾಜ್ ಅಧ್ಯಕ್ಷತೆಯಲ್ಲಿ
ನಾಟಿ ವೈದ್ಯೆ ಕಾಕ೯ಳ ಕಿನ್ನಿಮುಂಡೇವುನ ಶಾಂತ ಇಂದು ನಾಯ್ಕ್ ಹಾಗೂ ದೈವ ನತ೯ಕ ಕರಿಯ ನಲ್ಕೆ ವಾಲ್ಪಾಡಿ ಅವರನ್ನು ಸನ್ಮಾನಿಸಲಾಯಿತು.
ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಬಾಬು ಪಾಂಗಾಳ, ಡಿಜೆವಿ ಸಂಘದ ಆಡಳಿತ ಮಂಡಳಿಯ ಸದಸ್ಯ ಪೃಥ್ವಿರಾಜ್ ಶೆಟ್ಟಿ ಪಡುಮಾನಾ೯ಡು ಗ್ರಾ. ಪಂ. ಮಾಜಿ ಸದಸ್ಯ ರಮೇಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿದ್ಯಾಥಿ೯ ಸಂಘದ ಅಧ್ಯಕ್ಷ ಅವಿನಾಶ್ ಸುವಣ೯, ಲಲಿತಕಲಾ ಸಂಘದ ತ್ರಿಶಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಪಾಶ್ವ೯ನಾಥ ಅಜ್ರಿ ಸ್ವಾಗತಿಸಿದರು. ಕಾಯ೯ಕ್ರಮದ ಸಂಯೋಜಕಿ ಮಲ್ಲಿಕಾ ರಾವ್ ಸನ್ಮಾನಿತರನ್ನು ಪರಿಚಯಿಸಿದರು.
ವಿದ್ಯಾಥಿ೯ನಿ ಶ್ರೇಯ ಕಾಯ೯ಕ್ರಮ ನಿರೂಪಿಸಿದರು. ಲಲಿತಕಲಾ ಸಂಘದ ಕಾಯ೯ದಶಿ೯ ಸುಜನ್ ಶೆಟ್ಟಿ ವಂದಿಸಿದರು.

