HomeFresh Newsಗಾಂಧೀಜಿ–ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ: ಹಿರಿಯ ನಾಗರಿಕರಿಗೆ ಹಣ್ಣುಹಂಪಲು ಹಾಗೂ ವಸ್ತ್ರ ವಿತರಣೆ

ಗಾಂಧೀಜಿ–ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ: ಹಿರಿಯ ನಾಗರಿಕರಿಗೆ ಹಣ್ಣುಹಂಪಲು ಹಾಗೂ ವಸ್ತ್ರ ವಿತರಣೆ

ತೋಕೂರು: ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯ ಅಂಗವಾಗಿ ಫೇಮಸ್ ಯೂತ್ ಕ್ಲಬ್ (ರಿ.) ಹಾಗೂ ಮಹಿಳಾ ಮಂಡಲದ ವತಿಯಿಂದ ಹಿರಿಯ ನಾಗರಿಕರಿಗೆ ಉಚಿತವಾಗಿ ಹಣ್ಣುಹಂಪಲು ಹಾಗೂ ವಸ್ತ್ರಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮೈ ಭಾರತ್ ದಕ್ಷಿಣ ಕನ್ನಡದ ಆಡಳಿತ ಅಧಿಕಾರಿ ಜಗದೀಶ್, ರೋಟರಿ ಕ್ಲಬ್ ಬೈಕಂಪಾಡಿ ಅಧ್ಯಕ್ಷ ರೋಟೇರಿಯನ್ ಕಶ್ಯಪ್ ಪ್ರಭು, ರೋಟೇರಿಯನ್ ಗಂಗಾಧರ ಕುಳಾಯಿ, ಜೆಸಿಐ ಸುರತ್ಕಲ್ ಅಧ್ಯಕ್ಷ ಶ್ರೀ ಅಶೋಕ್ ಎನ್., ಲಯನ್ಸ್ ಕ್ಲಬ್ ಗಾಂಧಿನಗರ ಮಂಗಳೂರು ಅಧ್ಯಕ್ಷ ಶ್ರೀ ಹರೀಶ್ ಕುಂಬ್ಳೆ, ಫೇಮಸ್ ಯೂತ್ ಕ್ಲಬ್‌ನ ಗೌರವಾಧ್ಯಕ್ಷ ಶ್ರೀ ಗುರುರಾಜ್ ಎಸ್. ಪೂಜಾರಿ, ಅಧ್ಯಕ್ಷ ಶ್ರೀ ಸುರೇಶ್ ಬಿ. ದೇವಾಡಿಗ, ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಪ್ರೇಮಲತಾ ಯೋಗೀಶ್ ಹಾಗೂ ರೋಟರಿ ಸಮುದಾಯದಳದ ಅಧ್ಯಕ್ಷ ಶ್ರೀ ವಿಶ್ವಜಿತ್ ಆಚಾರ್ಯ ಉಪಸ್ಥಿತರಿದ್ದರು.

ಜಯಂತಿ ಆಚರಣೆಯ ಅಂಗವಾಗಿ ಸಮಾಜದ ಹಿರಿಯ ನಾಗರಿಕರನ್ನು ಗೌರವಿಸುವ ಉದ್ದೇಶದಿಂದ ಸುಗುಣ, ಆಶಾ, ಜಾನಕಿ, ಭಾಸ್ಕರ ದೇವಾಡಿಗ, ನಾರಾಯಣ ದೇವಾಡಿಗ, ಯಮುನ ದೇವಾಡಿಗ, ಅಪ್ಪಿ, ಸೀತು, ರಾಧಾ ಹಾಗೂ ಬೇಬಿ ಸೇರಿದಂತೆ ಒಟ್ಟು 10 ಮಂದಿ ಹಿರಿಯ ನಾಗರಿಕರಿಗೆ ಉಚಿತ ವಸ್ತ್ರ ಹಾಗೂ ಹಣ್ಣುಹಂಪಲುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ಮಾರ್ಗದರ್ಶಕರಾದ ಶ್ರೀ ದಿನಕರ್ ಸಾಲ್ಯಾನ್, ಶ್ರೀ ಗಣೇಶ ಜಿ. ಬಂಗೇರ ಹಾಗೂ ಶ್ರೀ ಸಂಜೀವ ಕರ್ಕೇರರವರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಹಿರಿಯ ನಾಗರಿಕರ ಸೇವೆ ಹಾಗೂ ಗೌರವವು ನಮ್ಮ ಸಾಮಾಜಿಕ ಜವಾಬ್ದಾರಿಯ ಒಂದು ಭಾಗವಾಗಿದ್ದು, ಮಹಾತ್ಮ ಗಾಂಧೀಜಿಯವರ ಸೇವೆ, ಮಾನವೀಯತೆ ಮತ್ತು ಸರಳತೆಯ ಆದರ್ಶಗಳನ್ನು ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳ ಜೀವನ, ಪ್ರಾಮಾಣಿಕತೆ ಮತ್ತು ರಾಷ್ಟ್ರಸೇವೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂದೇಶವನ್ನು ಕಾರ್ಯಕ್ರಮದಲ್ಲಿ ಸಾರಲಾಯಿತು.

ಫೇಮಸ್ ಯೂತ್ ಕ್ಲಬ್ ಹಾಗೂ ಮಹಿಳಾ ಮಂಡಲದ ಈ ಸೇವಾ ಕಾರ್ಯವು ಹಿರಿಯ ನಾಗರಿಕರೊಂದಿಗೆ ಆತ್ಮೀಯತೆ ಬೆಳೆಸುವುದರ ಜೊತೆಗೆ ಸಮಾಜದಲ್ಲಿ ಸೇವೆ, ಸಹಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಉತ್ತಮ ಪ್ರಯತ್ನವಾಗಿ ಮೂಡಿಬಂದಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು, ಹಿರಿಯ ನಾಗರಿಕರು, ಯುವಕರು ಹಾಗೂ ಮಹಿಳಾ ಮಂಡಲದ ಸದಸ್ಯರ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮವನ್ನು ಭಾಸ್ಕರ್ ಅಮೀನ್, ತೋಕೂರು ಅವರು ನಿರೂಪಿಸಿದರು.

swarna sep
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments