ಕಟಪಾಡಿ: ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮಪೀಠದ ಆತ್ಮಜ್ಞಾನಿ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್ ಜನ್ಮ ವೈಭವಕ್ಕೆ ಶ್ರೀ ಕ್ಷೇತ್ರದಲ್ಲಿ ಅ.4 ರಂದು ಚಾಲನೆಯನ್ನು ನೀಡಲಾಯಿತು.
ಚಾಲನೆ ನೀಡಿದ ಧಾರವಾಡ ಶ್ರೀ ಕ್ಷೇತ್ರ ದ್ವಾರಾಪುರದ ಶ್ರೀ ಪರಮಾತ್ಮ ಮಹಾ ಸಂಸ್ಥಾನಂ ಇದರ ಶ್ರೀ ಪರಮಾತ್ಮ ಜೀ ಮಹಾರಾಜ್ ಆಶೀರ್ವಚಿಸುತ್ತಾ, ಶಂಕರಪುರವನ್ನು ಜಗದ್ವಿಖ್ಯಾತಗೊಳಿಸಿದ ಸಾಯಿ ಈಶ್ವರ್ ಸ್ವಾಮೀಜಿ ಸ್ವತಃ ಪೀಠವನ್ನು ಸ್ಥಾಪಿಸಿ ಭಕ್ತರಿಗೆ ಅನುಗ್ರಹಿಸುವ ಅವರು ಸಾಧನೆಗಳ ಮೂಲಕ ಯುಗ ಮಹಾತ್ಮರಾಗಿದ್ದು, ಪರಮಾತ್ಮ ಸ್ವರೂಪಿ ಶಕ್ತಿಯಾಗಿದ್ದು, ಅವರನ್ನು ಶ್ರೀ ಪರಮಾತ್ಮ ಮಹಾ ಸಂಸ್ಥಾನಂ ಪೀಠದ ಮೂಲಕ ಧರ್ಮಾತ್ಮ ಬಿರುದು ನೀಡಿ ಗೌರವಿಸಲಾಗುತ್ತದೆ ಎಂದು ಘೋಷಿಸಿದರು.

ಚಿಕ್ಕಬಳ್ಳಾಪುರ ಓಂಕಾರ ಮಠದ ಕಾಳೀತನಯ ಡಾ|ಶ್ರೀ ಉಮಾಮಹೇಶ್ವರ ಸ್ವಾಮೀಜಿ ಆಶೀರ್ವಚಿಸುತ್ತಾ, ಸಾಯಿ ಈಶ್ವರ್ ಸ್ವಾಮೀಜಿ ಅವರು ಮನುಕುಲಕ್ಕೆ ದಾರಿದೀಪವಾಗುವ ತಪಸ್ವಿಯಾಗಿ ಶ್ರೀ ಕ್ಷೇತ್ರಕ್ಕೆ ಧನಾತ್ಮಕ ಶಕ್ತಿಯನ್ನು ತುಂಬಿದ್ದಾರೆ. ಗೋ ಮಾತೆಯ ಸೇವೆಯಲ್ಲಿ ಜೀವನವನ್ನು ಮುಡಿಪಾಗಿಸುವ ಹಾಗೂ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಮಠ ಮಾನ್ಯಗಳು, ಸರಕಾರಗಳು ಮಾಡದಂತಹ ಮಾದರಿ ಕೆಲಸಗಳ ಮೂಲಕ ಲೋಕಕ್ಕೆ ಬೆಳಕಾಗುತ್ತಿದ್ದಾರೆ ಎಂದರು.
ಅನ್ನಬ್ರಹ್ಮ ಬಿರುದು ಸಹಿತ ಅಭಿನಂದನೆಯನ್ನು ಸ್ವೀಕರಿಸಿದ ಆತ್ಮಜ್ಞಾನಿ ಶ್ರೀ ಸಾಯಿ ಈಶ್ವರ್ ಗುರೂಜಿ ಮಾತನಾಡಿ, ಎಲ್ಲಿ ಪರಿಶುದ್ಧ ಸತ್ಯ, ಪ್ರೀತಿ ಇರುತ್ತದೋ ಅಲ್ಲಿ ಪರಮಾತ್ಮ ಇರುತ್ತಾನೆ. ಮುಂದಿನ ಒಂದು ವರ್ಷ ಕಾಲ ದಾನಿಗಳು, ಶಿಷ್ಯ ಹಾಗೂ ಭಕ್ತ ಅಭಿಮಾನಿಗಳ ಸಹಕಾರದಿಂದ ಮತ್ತಷ್ಟು ಸೇವೆ ಮತ್ತು ಧರ್ಮ ಜಾಗೃತಿಯ ಮೂಲಕ ಸ್ವಸ್ತ್ಯ ಸಮಾಜ ಹಾಗೂ ಸಂಕಲ್ಪಿತ ಹನ್ನೆರಡು ಕೋಟಿ ರೂ. ವೆಚ್ಚದ ಆತ್ಮತಪೋವನ ಆಶ್ರಮ ನಿರ್ಮಾಣಕ್ಕೆ ಕೈ ಜೋಡಿಸುವಂತೆ ವಿನಂತಿಸಿದರು.
ಸಂಕಲ್ಪಿತ ಆತ್ಮತಪೋವನ ಆಶ್ರಮದ ನೀಲ ನಕಾಶೆ ಬಿಡುಗಡೆಗೊಳಿಸಲಾಯಿತು. ಪಂಚಾಶತ್ ಜನ್ಮ ವೈಭವಕ್ಕೆ ಗುರೂಜಿ ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಪ್ರಕೃತಿ-ಗೋ ಸಂರಕ್ಷಣೆಗೆ ರಾಮ ನಾಮ ಬರೆಯುವ ಅಭಿಯಾನದ ಪುಸ್ತಕ ಬಿಡುಗಡೆಗೊಳಿಸಲಾಯಿತು. ವೈಷ್ಣವೀ ಹವನ್, ಕಲಶಾಭಿಷೇಕ, ಗುರುವಂದನೆ, ಮಧ್ಯಾಹ್ನ ಮಹಾಪೂಜೆ ಬಳಿಕ ಎರಡು ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಂಗಳೂರು ಶ್ರೀ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ಧಿಪೀಠದ ಶ್ರೀ ಪ್ರವೀಣ್ ರಾಜ್ ಮಚ್ಚೇಂದ್ರನಾಥ್ ಬಾಬಾ, ಕಿಷ್ಕಿಂದ ಸಾಣಾಪುರ ಶ್ರೀ ಬಾಲಾಂಜನೇಯ ಬೆಟ್ಟದ ಶ್ರೀ ಹನುಮಾನ್ ದಾಸ್ ಬಾಬಾ, ಆಗಮ ವೇದ ವಿದ್ವಾಂಸ ವಿನಾಯಕ್ ಕಾರಂತ್, ಫೆಡರೇಶನ್ ಆಫ್ ಸಾಯಿನಾಥ್ ಟೆಂಪಲ್ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ/ ಶಿವ ಹನುಮಾನ್ ಶ್ರೀ ಸಾಯಿ ದೇವಾಲಯದ ಧರ್ಮದರ್ಶಿ ಸಾಯಿ ರೂಪೇಶ್ ಕೋಲಾರ, ರಾಷ್ಟ್ರೀಯ ಕೋಶಾಧಿಕಾರಿ ಶ್ರೀಕಾಂತ್, ಮಹಿಳಾ ಕಾರ್ಯದರ್ಶಿ ರಾಮ ತುಳಸೀ ಮೊಳಕಾಲ್ಮೂರು, ಸಾಯಿರಾಮ್ ಬೆಂಗಳೂರು, ಸತೀಶ್ ವೇಣೂರು, ಗಣೇಶ್ ಶಿಲ್ಪಿ ಕಾರ್ಕಳ, ಪ್ರಕಾಶ್ ಕಾಂತಾವರ, ಧನ್ ರಾಜ್ ಮಂಗಳೂರು, ಶ್ರೀ ಸಾಯಿ ಸಾಂತ್ವಾನ ಮಂದಿರ ಟ್ರಸ್ಟ್ ಇದರ ಟ್ರಸ್ಟಿಗಳಾದ ವಿಶ್ವನಾಥ ಸುವರ್ಣ, ಸ್ಮಿತಾ ಪ್ರವೀಣ್, ಅಧ್ಯಕ್ಷ ಸುಧಾಕರ ಶೆಟ್ಟಿ, ಶ್ರೀ ದ್ವಾರಕಾಮಾಯಿ ಮಠ ಟ್ರಸ್ಟ್ ಇದರ ಟ್ರಸ್ಟಿಗಳಾದ ಕಿರಣ್ ಜೋಗಿ ಮಂಗಳೂರು, ಗೀತಾಂಜಲಿ ಎಂ. ಸುವರ್ಣ ಕಟಪಾಡಿ, ಸತೀಶ್ ದೇವಾಡಿಗ, ಪ್ರಮುಖರಾದ ಸಾಯಿ ಜ್ಯೋತಿ, ಟಿ. ರಾಮ ಪೂಜಾರಿ ಸಂತೆಕಟ್ಟೆ, ನಾಗರಾಜ್ ಬೈಂದೂರು, ಗಜೇಂದ್ರ ಎಸ್. ಬೇಲೆಮನೆ, ರಾಘವೇಂದ್ರ ಪ್ರಭು ಕರ್ವಾಲು, ವೀಣಾ ಎಸ್. ಶೆಟ್ಟಿ, ವಿಜಯ್ ಕುಂದರ್, ವಾರಿಜಾ ಕಲ್ಮಾಡಿ, ಲಾವಣ್ಯ ವಿನೋದ್ ಕುಮಾರ್, ಶಿಲ್ಪಾ ಮಹೇಶ್ ಜತ್ತನ್, ಸಂಧ್ಯಾ ರಾಜೇಶ್ ಇನ್ನಂಜೆ, ಅನುರಾಧ ಸಂತೋಷ್, ವಿಘ್ನೇಶ್ ನೀಲಾವರ, ನೀಲೇಶ್ ಪಾಲನ್, ಶ್ವೇತಾ ಜಯರಾಮ್ ಶೆಟ್ಟಿಗಾರ್, ಶೈಲಜಾ ನಾರಾಯಣ ಪೂಜಾರಿ, ಸುಷ್ಮಾ ಉಮೇಶ್ ಪುತ್ರನ್, ಶ್ರೀಧರ್ ಅಮೀನ್ ಮಣಿಪುರ, ಮಧೂಸೂಧನ್ ನಾಯಕ್, ಸಂತೋಷ್ ಪ್ರಭು, ಅಜಿತ್ ಕುಮಾರ್, ವಿಜಯ್ ಕೊಡವೂರು, ಮೋಕ್ಷಿತ್, ಸೂರಜ್ ಇಂದ್ರಾಳಿ, ಮನಸ್ವಿ ಕಪ್ಪೆಟ್ಟು, ಲಕ್ಷ್ಮೀಶ ಹವಾಲ್ದಾರ್, ಶ್ರೀ ಕ್ಷೇತ್ರ ಆಡಳಿತ ಮಂಡಳಿ, ಭಕ್ತರು, ಆಡಳಿತ ಮಂಡಳಿ, ಶಿಷ್ಯ ವೃಂದದವರು ಇದ್ದರು.
ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

