HomeFresh Newsಬೈಂದೂರು; ರೋಟರಿ ಸಮುದಾಯ ಭವನದಲ್ಲಿ ಉಚಿತ ದೇಶಿ ನಾಯಿಗಳ ಸಂತಾನಹರಣ ಚಿಕಿತ್ಸಾ ಶಿಬಿರ

ಬೈಂದೂರು; ರೋಟರಿ ಸಮುದಾಯ ಭವನದಲ್ಲಿ ಉಚಿತ ದೇಶಿ ನಾಯಿಗಳ ಸಂತಾನಹರಣ ಚಿಕಿತ್ಸಾ ಶಿಬಿರ

ಬೈಂದೂರು; ರೋಟರಿ ಕ್ಲಬ್ ಬೈಂದೂರು, ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ (ರಿ.) ಮಲ್ಪೆ, W.V.S. INDIA, ಫ್ರೋಡೋ ಫೌಂಡೇಶನ್ ಹಾಗೂ ಜೆಸಿಐ ಬೈಂದೂರು ಸಿಟಿ ಇನ್ನರ್ ವೀಲ್ ಬೈಂದೂರು ಇವುಗಳ ಸಂಯುಕ್ತ ಆಶ್ರಯದಲ್ಲಿ “ದೇಶೀ ನಾಯಿಗಳ ಗಂಡು/ಹೆಣ್ಣು ಉಚಿತ ಸಂತಾನಹರಣ ಚಿಕಿತ್ಸಾ ಶಿಬಿರ ಸೋಮವಾರ ಬೈಂದೂರಿನ ರೋಟರಿ ಸಮುದಾಯ ಭವನದಲ್ಲಿ ಚಾಲನೆ ನೀಡಲಾಯಿತು.
​ಈ ಶಿಬಿರವನ್ನು ಪಶು ವೈದ್ಯರಾದ ಡಾ. ಶಂಕರ್ ಶೆಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿ ಪ್ರಾಣಿಗಳ ನಿಯಂತ್ರಣ ಹಾಗೂ ಆರೋಗ್ಯ ಸಂರಕ್ಷಣೆಯಲ್ಲಿ ಇಂತಹ ಸಾಮಾಜಿಕ ಕಾಳಜಿಯ ಶಿಬಿರಗಳು ಅತ್ಯಂತ ಶ್ಲಾಘನೀಯ ಇದರಿಂದ ಬೀದಿನಾಯಿಗಳ ನಿಯಂತ್ರಣ ಸಾದ್ಯ ಎಂದರು.
​ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ ರೋ| ಅರುಣ್ ಕುಮಾರ್ ಕಳೆದ ಬಾರಿಯೂ ಅತ್ಯಂತ ಯಶಸ್ವಿಯಾಗಿ ನೆರವೇರಿದ್ದ ಈ ಶಿಬಿರವು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಈ ಬಾರಿಯೂ ಇಂದಿನಿಂದ (ಅಕ್ಟೋಬರ್ 05 ರಿಂದ ಅಕ್ಟೋಬರ್ 10 ರವರೆಗೆ) ಒಟ್ಟು ಐದು ದಿನಗಳ ಕಾಲ ನುರಿತ ಪಶುವೈದ್ಯರ ತಂಡದಿಂದ ಚಿಕಿತ್ಸೆ ನಡೆಯಲಿದ್ದು, ಸಾರ್ವಜನಿಕರು ತಮ್ಮ ಮನೆ ಹಾಗೂ ಪರಿಸರದ ದೇಶೀ ನಾಯಿಗಳಿಗೆ ಸಂತಾನಹರಣ ಮಾಡಿಸಿ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
​ಕಾರ್ಯಕ್ರಮದಲ್ಲಿ ಪ್ರಮುಖರಾದ ಐ. ನಾರಾಯಣ್, ಪ್ರಿಯಾಂಕಾ, ಜೆಸಿ ಚೈತ್ರಾ, ಜ್ಯೋತಿ ಶ್ರೀಧರ್, ಸಂತೋಷ್, ಡಾ. ಚೇತನ್, ಶ್ವೇತಾ, ರೋಟರಿ ಕ್ಲಬ್, ಜೆಸಿಐ ಹಾಗೂ ಅನಿಮಲ್ ಕೇರ್ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.​ಸುಬ್ರಹ್ಮಣ್ಯ ಜಿ. ಉಪ್ಪುಂದ ಕಾರ್ಯಕ್ರಮ ನಿರ್ವಹಿಸಿದರು. ರೋಟರಿ ಕಾರ್ಯದರ್ಶಿ ಎಸ್. ಮಣಿಕಂಠ ಬೈಂದೂರು  ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments