HomeFresh Newsಹಿರಿಯಡಕ ಬೊಮ್ಮರಬೆಟ್ಟುವಿನಲ್ಲಿ ‘ರಂಗ ರುಕ್ಮಿಣಿ’ ನೂತನ ಮನೆ ಉದ್ಘಾಟನೆ

ಹಿರಿಯಡಕ ಬೊಮ್ಮರಬೆಟ್ಟುವಿನಲ್ಲಿ ‘ರಂಗ ರುಕ್ಮಿಣಿ’ ನೂತನ ಮನೆ ಉದ್ಘಾಟನೆ

ಉಡುಪಿ, ಅ.5: ಯಕ್ಷಗಾನ ಕಲಾರಂಗ (ರಿ.) ಉಡುಪಿ ವತಿಯಿಂದ ವಿದ್ಯಾಪೋಷಕ್ ವಿದ್ಯಾರ್ಥಿನಿ ಅಕ್ಷಿತಾ ನಾಯಕ್ ಅವರಿಗೆ ಗಾಂಧಿ ಆಸ್ಪತ್ರೆ ಸಂಸ್ಥಾಪಕರಾದ ಡಾ. ಹರೀಶ್ಚಂದ್ರ ಅವರ ಪ್ರಾಯೋಜಕತ್ವದಲ್ಲಿ ಉಡುಪಿ ತಾಲೂಕಿನ ಹಿರಿಯಡಕ ಬೊಮ್ಮರಬೆಟ್ಟುವಿನಲ್ಲಿ ನಿರ್ಮಿಸಿರುವ ‘ರಂಗ ರುಕ್ಮಿಣಿ’ ನೂತನ ಮನೆಯ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು.
ಸಮಾರಂಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ, ಮನೆ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಂಚಮಿ ಟ್ರಸ್ಟ್‌ನ ಪ್ರವರ್ತಕರಾದ ಡಾ. ಹರೀಶ್ಚಂದ್ರ, ಲಕ್ಷ್ಮೀ ಹರೀಶ್ಚಂದ್ರ, ಡಾ. ಪಂಚಮಿ, ಉದ್ಯಮಿಗಳಾದ ನಟರಾಜ್ ಹೆಗ್ಡೆ, ಬಿ.ಎಲ್. ವಿಶ್ವಾಸ್, ಯಕ್ಷಗಾನ ಕಲಾರಂಗ (ರಿ.) ಉಡುಪಿ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments