ಮೂಡುಬಿದಿರೆ : ತಾಲೂಕಿನ ಇರುವೈಲು ಗ್ರಾಮ ಪಂಚಾಯತ್ ನ ಓಡ ಪರಿಸರದಲ್ಲಿ ಕಳೆದ ಹಲವು ವರುಷಗಳಿಂದ ಪರಿಸರದ ಸುಮಾರು ಮನೆಯವರಿಗೆ ಪ್ರತಿನಿತ್ಯ ಪ್ರಯೋಜನವಾಗುತ್ತಿದ್ದ ಓಡ ಬಸ್ ತಂಗುದಾಣ ರಸ್ತೆ ಅಭಿವೃದ್ಧಿ ಕಾರ್ಯ ಸಂದರ್ಭದಲ್ಲಿ ಧರೆಗುರುಳಿದೆ.

1996ರಲ್ಲಿ ಊರವರು ಸೇರಿಕೊಂಡು ಸಾರ್ವಜನಿಕ ಪ್ರಯೋಜನಕ್ಕಾಗಿ ಈ ಬಸ್ ನಿಲ್ದಾಣವನ್ನು ನಿಮಿ೯ಸಿದ್ದು ಪರಿಸರದ ಜನರಿಗೆ ಬಿಸಿಲಿನ ಬೇಗೆಯ ಸಂದಭ೯ ಧರಿವಾರಿಸಿಕೊಳ್ಳಲು ಹಾಗೂ ಮಳೆಗಾಲದಲ್ಲಿ ಮಳೆಯಿಂದ ರಕ್ಷಿಸಿಕೊಳ್ಳಲು ಅನುಕೂಲಕರವಾಗಿತ್ತು. ಆದರೆ ಇದೀಗ ಅ.14ರ ರಾತ್ರಿ ಬಸ್ ತಂಗುದಾಣ ಕುಸಿದು ಬಿದ್ದಿದೆ.
ಈ ತಂಗುದಾಣ ಕುಸಿತದಿಂದಾಗಿ ಇದೀಗ ಪರಿಸರದ ಹಲವಾರು ಮನೆಯವರಿಗೆ ಬೇಸಿಗೆಯನ್ನು ಎದುರಿಸುವ ಸವಾಲು ಎದುರಾಗಿದೆ. ಇದೀಗ ಓಡ ಪ್ರದೇಶದಲ್ಲಿ ಇರುವ ಖಾಲಿ ಜಾಗದಲ್ಲಿ ಮತ್ತೊಮ್ಮೆ ತಂಗುದಾಣವನ್ನು ನಿರ್ಮಿಸುವ ಅನಿವಾಯ೯ತೆಯಿದೆ.

