HomeFresh Newsಕಾಂತಾವರ ಕನ್ನಡ ಸಂಘದ 2026ರ ಸಾಲಿನ ದತ್ತಿನಿಧಿ ಪ್ರಶಸ್ತಿಗಳ ಘೋಷಣೆ

ಕಾಂತಾವರ ಕನ್ನಡ ಸಂಘದ 2026ರ ಸಾಲಿನ ದತ್ತಿನಿಧಿ ಪ್ರಶಸ್ತಿಗಳ ಘೋಷಣೆ

ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ 2026ನೇ ಸಾಲಿನ ಪ್ರತಿಷ್ಠಿತ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಈ ಬಾರಿ ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಂಘದ ಪ್ರಕಟಣೆ ತಿಳಿಸಿದೆ.
ಪ್ರಶಸ್ತಿ ವಿಜೇತರ ವಿವರಗಳು:

ಕೇ. ಬಿ. ಜಿನರಾಜ ಹೆಗ್ಡೆ ಸ್ಮಾರಕ ‘ಸಾಂಸ್ಕೃತಿಕ ಪ್ರಶಸ್ತಿ’: ಶ್ರೀಮತಿ ಸರಸ್ವತಿ ಬಲ್ಲಾಳ್ ಮತ್ತು ಡಾ. ಸಿ. ಕೆ. ಬಲ್ಲಾಳ್ ದಂಪತಿ ಪ್ರತಿಷ್ಠಾನದಿಂದ ನೀಡಲಾಗುವ ಈ ಪ್ರಶಸ್ತಿಗೆ ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ.

2025ರ ಸಾಲಿನ ‘ಮಹೋಪಾಧ್ಯಾಯ ಪ್ರಶಸ್ತಿ’: ಡಾ. ಯು. ಪಿ. ಉಪಾಧ್ಯಾಯ ಹೆಸರಿನಲ್ಲಿ ಡಾ. ವಾರಿಜ ಮಂಚಿ ಅವರ ದತ್ತಿನಿಧಿಯಿಂದ ನೀಡಲಾಗುವ 2025ರ ಸಾಲಿನ ಪ್ರಶಸ್ತಿಗೆ ಹಿರಿಯ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಅವರನ್ನು ಆಯ್ಕೆ ಮಾಡಲಾಗಿದೆ.

2026ರ ಸಾಲಿನ ‘ಮಹೋಪಾಧ್ಯಾಯ ಪ್ರಶಸ್ತಿ’: ಇದೇ ದತ್ತಿನಿಧಿಯ 2026ರ ಸಾಲಿನ ಪ್ರಶಸ್ತಿಗೆ ಪ್ರಸಿದ್ಧ ಸಂಶೋಧಕ ಪ್ರೊ. ಮಾಧವ ಪೆರಾಜೆ ಅವರನ್ನು ಆಯ್ಕೆ ಮಾಡಲಾಗಿದೆ.

‘ಮೊಗಸಾಲೆ ಸಾಹಿತ್ಯ ಪ್ರಶಸ್ತಿ’: ಮೊಗಸಾಲೆ ಕುಟುಂಬದವರ ದತ್ತಿನಿಧಿಯಿಂದ ನೀಡಲಾಗುವ ಪ್ರಶಸ್ತಿಗೆ ಪ್ರಖ್ಯಾತ ಸಾಹಿತಿ ಡಾ. ನರೇಂದ್ರ ರೈ ದೇರ್ಲ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭ:
ಈ ಎಲ್ಲ ಪ್ರಶಸ್ತಿಗಳು ತಲಾ ಹತ್ತು ಸಾವಿರ ರೂಪಾಯಿ ನಗದು, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿರುತ್ತವೆ. ಮುಂಬರುವ ನವೆಂಬರ್ 1 ರಂದು ಕಾಂತಾವರ ಕನ್ನಡ ಭವನದಲ್ಲಿ ನಡೆಯಲಿರುವ ‘ಕಾಂತಾವರ ಉತ್ಸವ – 2026’ ರ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಕಾಂತಾವರ ಕನ್ನಡ ಸಂಘವು ಪ್ರಕಟನೆಯಲ್ಲಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments