HomeFresh Newsಮಲಬಾರ್ ಗೋಲ್ಡ್ & ಡೈಮಂಡ್ಸ್ ಮಂಗಳೂರು ವತಿಯಿಂದ "ಟೈಮ್ ಅನ್ ವೈಲ್ಡ್" ವಾಚ್ ಪ್ರದರ್ಶನಕ್ಕೆ ಚಾಲನೆ

ಮಲಬಾರ್ ಗೋಲ್ಡ್ & ಡೈಮಂಡ್ಸ್ ಮಂಗಳೂರು ವತಿಯಿಂದ “ಟೈಮ್ ಅನ್ ವೈಲ್ಡ್” ವಾಚ್ ಪ್ರದರ್ಶನಕ್ಕೆ ಚಾಲನೆ

ಮಂಗಳೂರು: ಮಲಬಾರ್ ಗೋಲ್ಡ್ & ಡೈಮಂಡ್ಸ್ ಮಂಗಳೂರು ಶೋರೂಂ ವತಿಯಿಂದ “ಟೈಮ್ ಅನ್ ವೈಲ್ಡ್” ವಿಶೇಷ ವಾಚ್ ಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಈ ಪ್ರದರ್ಶನವು ಅಕ್ಟೋಬರ್ 23 ರಿಂದ ನವೆಂಬರ್ 8 ರವರೆಗೆ ನಡೆಯಲಿದೆ.

ಈ ಪ್ರದರ್ಶನದಲ್ಲಿ 15ಕ್ಕೂ ಹೆಚ್ಚು ಅಂತರಾಷ್ಟ್ರೀಯ ಬ್ರಾಂಡ್ ಗಳ ಸಾವಿರಾರು ವಿನ್ಯಾಸದ ಬ್ರಾಂಡೆಡ್ ವಾಚ್ ಗಳು ಲಭ್ಯವಿದ್ದು, ಎಲ್ಲಾ ಬ್ರಾಂಡೆಡ್ ವಾಚ್ ಗಳ ಮೇಲೆ ಗರಿಷ್ಠ 50% ವರೆಗೆ ರಿಯಾಯಿತಿ ನೀಡಲಾಗುತ್ತಿದೆ.

ಈ ವಿಶೇಷ ಪ್ರದರ್ಶನವನ್ನು ಉದ್ಯಮಿ ಹಾಗೂ ಧಾರ್ಮಿಕ ಮುಖಂಡರಾದ ಶ್ರೀ ದಿಲ್ ರಾಜ್ ಆಳ್ವ ಅವರು ಉದ್ಘಾಟಿಸಿ ಮಾತನಾಡಿದರು. “ಬ್ರಾಂಡೆಡ್ ವಾಚ್ ಗಳನ್ನು ಅತ್ಯಂತ ಆಕರ್ಷಕ ರಿಯಾಯಿತಿ ದರದಲ್ಲಿ ಖರೀದಿಸಲು ಮಂಗಳೂರಿನ ಜನರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ” ಎಂದು ಅವರು ಶುಭ ಹಾರೈಸಿದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಬ್ರಾಂಡ್ ಗಳ ಕಲೆಕ್ಷನ್ ಗಳನ್ನು ಗಣ್ಯರು ಅನಾವರಣಗೊಳಿಸಿದರು:

– ಟ್ಯಾಗ್ ಹ್ಯೂಯರ್ (Tag Heuer) ಕಲೆಕ್ಷನ್ ಅನ್ನು ಮಂಗಳೂರು ಮೂಲದ ಅಬುಧಾಬಿ ಉದ್ಯಮಿ ಶ್ರೀ ಅಬ್ದುಸ್ ಸಲಾಂ ಅವರು ಅನಾವರಣಗೊಳಿಸಿದರು.

– ರಾಡೋ (Rado) ಕಲೆಕ್ಷನ್ ಅನ್ನು ಶ್ರೀ ಪ್ರೇಮನಾಥ್ ಶೆಟ್ಟಿ ಹೆಜಮಾಡಿ ಅವರು ಅನಾವರಣಗೊಳಿಸಿದರು.

– ಟಿಸ್ಸಾಟ್ (Tissot) ಕಲೆಕ್ಷನ್ ಅನ್ನು ಡಾ. ಮುಸ್ತಫಾ ಬಸ್ತಿಕೋಡಿ ಅವರು ಅನಾವರಣಗೊಳಿಸಿದರು.

– ಕಿಂಗ್ ಸೈಕೋ (King Seiko) ಕಲೆಕ್ಷನ್ ಅನ್ನು ಶ್ರೀ ಪದ್ಮನಾಭ ಶೆಟ್ಟಿ ಪುತ್ತೂರು ಅವರು ಅನಾವರಣಗೊಳಿಸಿದರು.

– ಸೈಕೋ (Seiko) ಕಲೆಕ್ಷನ್ ಅನ್ನು ಶ್ರೀ ಜಿ.ಎ. ಮೊಹಮ್ಮದ್ ಯೂಸುಫ್ ಕಲ್ಲಡ್ಕ ಅವರು ಅನಾವರಣಗೊಳಿಸಿದರು.

– ಸೆರೂಟಿ (Cerruti) ಕಲೆಕ್ಷನ್ ಅನ್ನು ಶ್ರೀ ಸನೀಶ್ ಅಗಸ್ಟೀನ್ ಅವರು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಮಾಧವ ಮಾವೆ ಸಾಲೆತ್ತೂರು ಅವರು ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಪ್ರದರ್ಶನದ ವಿಶೇಷತೆಗಳು: ಈ ವಿಶೇಷ ಪ್ರದರ್ಶನದಲ್ಲಿ ಹಳೆಯ ವಾಚ್ ಗಳಿಗೆ ಬದಲಾಗಿ ಹೊಸ ಬ್ರಾಂಡೆಡ್ ವಾಚ್ ಗಳನ್ನು ಖರೀದಿಸುವ ಎಕ್ಸ್ಚೇಂಜ್ ಆಫರ್, ಉಚಿತ ಬ್ಯಾಟರಿ ಬದಲಾವಣೆ ಮತ್ತು ಉಚಿತ ಪಾಲಿಶ್ ಸೌಲಭ್ಯವನ್ನು ನೀಡಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಮಂಗಳೂರಿನ ಡೈರೆಕ್ಟರ್ ಶ್ರೀ ಕರುಣಾಕರನ್ ಅವರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ಸ್ಟೋರ್ ಹೆಡ್ ಶ್ರೀ ಹಫೀಜ್ ರೆಹಮಾನ್, ಶೋರೂಂ ಮ್ಯಾನೇಜರ್ ಶ್ರೀ ಗಿರೀಶ್ ರೈ, ಸೇಲ್ಸ್ ಮ್ಯಾನೇಜರ್ ಶ್ರೀ ಮೊಹಮ್ಮದ್ ಸಮೀರ್, ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀ ಶೇಕ್ ಫರ್ಹಾನ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments