HomeFresh Newsಕೊಂಕಣಿ ಎಂ.ಎ. - ಅಲೋಶಿಯಸ್‌ ವಿವಿಯಲ್ಲಿ ವೃತ್ತಿಪರ ಪ್ರವೇಶಾತಿಗೆ ಅರ್ಜಿ ಆಹ್ವಾನ

ಕೊಂಕಣಿ ಎಂ.ಎ. – ಅಲೋಶಿಯಸ್‌ ವಿವಿಯಲ್ಲಿ ವೃತ್ತಿಪರ ಪ್ರವೇಶಾತಿಗೆ ಅರ್ಜಿ ಆಹ್ವಾನ

ಮಂಗಳೂರು: ಸಂತ ಅಲೋಶಿಯಸ್‌ (ಡೀಮ್ಡ್‌ ಟು ಬಿ ಯೂನಿವರ್ಸಿಟಿ) ವಿಶ್ವವಿದ್ಯಾಲಯದ ಕೊಂಕಣಿ ವಿಭಾಗ ಮತ್ತು ಕೊಂಕಣಿ ಸಂಸ್ಥೆಯು 2027-28ನೇ ಶೈಕ್ಷಣಿಕ ಸಾಲಿನಿಂದ ವೃತ್ತಿಪರ ಕೊಂಕಣಿ ಎಂ.ಎ. (M.A. in Professional Konkani) ಪದವಿ ಕಾರ್ಯಕ್ರಮ ಆರಂಭಿಸುತ್ತಿದ್ದು,
ಪ್ರವೇಶಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಗೋವಾ, ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕದ ಕರಾವಳಿಯಲ್ಲಿ ಮಾತೃಭಾಷೆಯಾಗಿರುವ ಕೊಂಕಣಿ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನವನ್ನು ಮಾಧ್ಯಮ, ಪತ್ರಿಕೋದ್ಯಮ, ಅನುವಾದ, ತಂತ್ರಜ್ಞಾನ, ರಂಗಭೂಮಿ, ಚಲನಚಿತ್ರ ಹಾಗೂ ಡಿಜಿಟಲ್ ವಸ್ತು-ವಿಷಯ ರಚನೆಯಂತಹ ವೃತ್ತಿಪರ ಕ್ಷೇತ್ರಗಳೊಂದಿಗೆ ಸಂಯೋಜಿಸಲಾಗಿದೆ.

ಪಠ್ಯಕೇಂದ್ರಿತ ಅಧ್ಯಯನದ ಬದಲಾಗಿ ಕೌಶಲ್ಯಕೇಂದ್ರಿತ ಕಲಿಕೆಗೆ ಆದ್ಯತೆ ನೀಡುವ ಈ ಕೋರ್ಸ್‌ನಲ್ಲಿ ಇಂಟರ್ನ್‌ಶಿಪ್‌, ಅಪ್ರೆಂಟಿಸ್‌ಶಿಪ್‌, ಅರ್ನ್‌-ವೈಲ್‌-ಯು-ಲರ್ನ್‌ (ಕಲಿಕೆಯೊಂದಿಗೆ ಸಂಪಾದನೆ) ಹಾಗೂ ವಿವಿಧ ಕಮ್ಮಟಗಳೂ ಇರಲಿವೆ. ಪದವಿಹಂತದಲ್ಲಿ ಕೊಂಕಣಿ ಅಧ್ಯಯನ ಮಾಡಿರಬೇಕೆಂಬ ಕಡ್ಡಾಯವಿಲ್ಲ. ವಯಸ್ಸಿನ ಮಿತಿಯಿಲ್ಲ. ಡಿಗ್ರಿಯಲ್ಲಿ ಯಾವುದೇ ವಿಭಾಗದಲ್ಲಿ ಕನಿಷ್ಠ 45% ಅಂಕಗಳನ್ನು ಗಳಿಸಿರಬೇಕು. ಅಧ್ಯಯನದಲ್ಲಿ ಕನ್ನಡ ವಾ ರೋಮಿ ವಾ ದೇವನಾಗರಿ ಲಿಪಿಗಳನ್ನು ಬಳಸಬಹುದು. ಆಸಕ್ತರು ಅಲೋಶಿಯಸ್‌ ವಿ.ವಿ.ಗೆ ಅರ್ಜಿ ಸಲ್ಲಿಸಲು URL: https://apply.staloysius.edu.in/ ಕಾಲೇಜು URL: https://staloysius.edu.in/ ಹೆಚ್ಚಿನ
ಮಾಹಿತಿಗಾಗಿ ಸಂಪರ್ಕಿಸಲು ಪೋನ್: 0824-2007394 / ಮೊಬಾಯ್ಲ್: 94815 27394.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments