HomeFresh Newsಮೂಡುಬಿದಿರೆ ತಾ. ಪಂ. ನ ಮಾಜಿ ಉಪಾಧ್ಯಕ್ಷ ಸಂತೋಷ್ ಮಾಡಿನಿಂದ ಬಿದ್ದು ಸಾವು

ಮೂಡುಬಿದಿರೆ ತಾ. ಪಂ. ನ ಮಾಜಿ ಉಪಾಧ್ಯಕ್ಷ ಸಂತೋಷ್ ಮಾಡಿನಿಂದ ಬಿದ್ದು ಸಾವು

ಮೂಡುಬಿದಿರೆ : ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಸಂತೋಷ್ ಅವರು ಗುರುವಾರ ಮಂಗಳೂರಿನಲ್ಲಿ ಮನೆಯ ಮಾಡಿನ ಕೆಲಸ ಮಾಡುತ್ತಿದ್ದಾಗ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.

ಬೆಳುವಾಯಿ ನಿವಾಸಿ, ಇದೇ ಕ್ಷೇತ್ರದ ತಾ.ಪಂ.ನ ಮಾಜಿ ಸದಸ್ಯರಾಗಿದ್ದ ಅವರು ಮಂಗಳೂರಿಗೆ ಕೆಲಸಕ್ಕೆ ಹೋಗುತ್ತಿದ್ದರು. ಗುರುವಾರ ಬೇರೆ ಕಡೆಗೆ ಬದಲಿ ಕೆಲಸಗಾರನಾಗಿ ಹೋಗಿದ್ದರೆನ್ನಲಾಗಿದೆ.
‌ ಮನೆಯ ಮಾಡಿನಲ್ಲಿ ಕೆಲಸ ಮಾಡುತ್ತಿರಬೇಕಾದರೆ ಆಯ ತಪ್ಪಿ ಕೆಳಕ್ಕೆ ಬಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಿಲ್ಲವೆಂದು ತಿಳಿದು ಬಂದಿದೆ.
ಸಂತೋಷ್ ಅವರಿಗೆ ಪತ್ನಿ ಇದ್ದಾರೆ.
ಹೊಸದಾಗಿ ರಚನೆಯಾಗಿದ್ದ ಮೂಡುಬಿದಿರೆ ತಾಲೂಕು ಪಂಚಾಯತ್ ನ ಮೊದಲ ಅವಧಿಯ ಉಪಾಧ್ಯಕ್ಷರಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments