HomeFresh Newsಮುಡಿಪು: ಗೋಡೆ ಕೊರೆದು ಜ್ಯುವೆಲ್ಲರಿಯಿಂದ ಚಿನ್ನಾಭರಣ ದರೋಡೆ

ಮುಡಿಪು: ಗೋಡೆ ಕೊರೆದು ಜ್ಯುವೆಲ್ಲರಿಯಿಂದ ಚಿನ್ನಾಭರಣ ದರೋಡೆ

ಉಳ್ಳಾಲ: ಮುಡಿಪು ಚಿನ್ನದ ಅಂಗಡಿಯ ಗೋಡೆ ಕೊರೆದು ಒಳನುಗ್ಗಿದ ಕಳ್ಳರು ಲಕ್ಷಾಂತರ ಬೆಲೆಬಾಳುವ ಚಿನ್ನ ದರೋಡೆ ನಡೆಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ನಾಡು ಬಳಿ ನಡೆದಿದೆ.

ಮುಡಿಪುವಿನಲ್ಲಿರುವ ಗೋಲ್ಡ್ ಕಿಂಗ್ ಜ್ಯುವೆಲ್ಲರಿಯಲ್ಲಿ ಕಳವು ನಡೆದಿದೆ. ಕುರ್ನಾಡು ನಿವಾಸಿ ಇಬ್ರಾಹಿಂ ಮಾಲೀಕತ್ವದ ಅಂಗಡಿ ಇದಾಗಿದೆ. ಜ್ಯುವೆಲ್ಲರಿ ಅಂಗಡಿಯ ಎಡಭಾಗದ ಗೋಡೆಯನ್ನು ಕೊರೆದು ಕೃತ್ಯ ನಡೆದಿದೆ. ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments