ಜೆಸಿಐ ಭಾರತದ ವಲಯ 15 ರ 2024 ರ ಸಾಲಿನಲ್ಲಿ ಕೊಡಮಾಡುವ ಈ ವರ್ಷದ ಅತ್ತ್ಯುತ್ತಮ ತರಬೇತುದಾರ ಪ್ರಶಸ್ತಿ ಗೆ ಜೆಸಿಐ ರಾಷ್ಟ್ರೀಯ ತರಬೇತುದಾರ ಸುಧಾಕರ್ M ಪೂಜಾರಿ ಕಾರ್ಕಳ ರವರು ಭಾಜನರಾದರು ಜೇಸಿ ಸುಧಾಕರ್ ಪೂಜಾರಿ ಯವರು 2007 ರಿಂದ ವ್ಯಕ್ತಿತ್ವ ವಿಕಸನ ತರಬೇತುಧಾರರಾಗಿ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ, ಉದ್ಯಮಿಗಳಿಗೆ ಜೇಸಿ loins ರೋಟರಿ ಸದಸ್ಯರಿಗೆ, ವಿವಿಧ
ಮೂಡುಬಿದಿರೆ ತಾಲೂಕಿನ ಪುರಸಭಾ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಬೀಸಿದ ಭಾರೀ ಗಾಳಿ ಮಳೆಗೆ ಮರಗಳು ಮತ್ತು ವಿದ್ಯುತ್ ತಂತಿಗಳು ಧರೆಗುರುಳಿದ್ದಲ್ಲದೆ ಹಲವಾರು ಮನೆಗಳಿಗೆ ಹಾನಿಯುಂಟ್ಟಾಗಿ ಲಕ್ಷಾಂತರ ರೂ ನಷ್ಟ ಸಂಭವಿಸಿದ ಘಟನೆ ನಡೆದಿದೆ. ಒಂಟಿಕಟ್ಟೆ, ಸ್ವರಾಜ್ಯಮೈದಾನ ಪರಿಸರ, ಮಾಸ್ತಿಕಟ್ಟೆ ಪ್ರದೇಶಗಳಲ್ಲಿ ಸಂಜೆ ಮಳೆಯೊಂದಿಗೆ ಭಾರೀ ಗಾಳಿ ಬೀಸಿದ್ದು ೧೫ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರಿಳಿವೆ ಹಾಗೂ ಸ್ವರಾಜ್ಯ ಮೈದಾನದ ಬಳಿಯಿರುವ ಪತ್ರಕರ್ತ ಧನಂಜಯ
ಭಾರತದ ಪ್ರಸಿದ್ಧ ಟೆನ್ನಿಸ್ ಆಟಗಾರರಾದ ವಿಜಯ ಅಮೃತರಾಜ್ ಮತ್ತು ಲಿಯಾಂಡರ್ ಪಯಸ್ರಿಗೆ ಅಂತರರಾಷ್ಟ್ರೀಯ ಟೆನ್ನಿಸ್ ಹಾಲ್ ಆಫ್ ಫೇಮ್ ಗೌರವ ಸಂದಿದೆ. ಟೆನ್ನಿಸ್ ಆಟಗಾರರಾಗಿ ಲಿಯಾಂಡರ್ ಪಯಸ್ ಮತ್ತು ಟೆನ್ನಿಸ್ಗೆ ನೀಡಿರುವ ಕೊಡುಗೆಗಾಗಿ ವಿಜಯ ಅಮೃತ್ರಾಜ್ ಅವರುಗಳಿಗೆ ಈ ಗೌರವ ಸಲ್ಲುತ್ತಿದೆ. ಇಲ್ಲಿಗೆ ೨೮ ದೇಶಗಳ ೨೬೭ ಜನರು ಟೆನ್ನಿಸ್ ಹಾಲ್ ಆಫ್ ಫೇಮ್ ಗೌರವ ಪಡೆದಂತಾಯಿತು ಎಂದು ಇಂಟರ್ನ್ಯಾಶನಲ್ ಟೆನ್ನಿಸ್ ಹಾಲ್ ಆಫ್ ಫೇಮ್ ಒಕ್ಕೂಟವು ತಿಳಿಸಿದೆ.ಟೆನ್ನಿಸ್
ಸುರತ್ಕಲ್: ಬಂಟರ ಸಂಘ ಸುರತ್ಕಲ್, ರೋಟರಿ ಕ್ಲಬ್ ಬೈಕಂಪಾಡಿ ಹಾಗೂ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಸುರತ್ಕಲ್ ಇದರ ಸಹಯೋಗದಲ್ಲಿ ಮೇಬೈಲು ಸದಾಶಿವ ಶೆಟ್ಟಿ ನೇತೃತ್ವದಲ್ಲಿ 15ನೇ ವರ್ಷದ ಸಸಿ ವಿತರಣಾ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವಾರ್ಪಣೆ ಕಾರ್ಯಕ್ರಮ ಇಲ್ಲಿನ ಬಂಟರ ಭವನದಲ್ಲಿ ಜರುಗಿತು. ಉದ್ಘಾಟನೆಯನ್ನು ನೆರವೇರಿಸಿ ಮಾತಾಡಿದ ವಿ.ಕೆ ಸಮೂಹ ಸಂಸ್ಥೆ ಮುಂಬಯಿ ಇದರ ಸಿಎಂಡಿ ಕರುಣಾಕರ ಎಂ. ಶೆಟ್ಟಿ
ಬೈಂದೂರು; ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ತ್ರಾಸಿ ಗ್ರಾಮ ಪಂಚಾಯಿತ ವ್ಯಾಪ್ತಿಯ ಗುಜ್ಜಾಡಿ, ನಾಯಕವಾಡಿ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸಮುದ್ರ ಅಲೆಗಳ ಆರ್ಭಟದಿಂದ ಉಂಟಾದ ಕಡಲ ತೀರದ ಹಾನಿಗಳ ಕುರಿತು ಸ್ಥಳೀಯರು ಹಾಗೂ ಊರಿನ ಪ್ರಮುಖರಿಂದ ಮಾಹಿತಿ ಪಡೆದು. ತುರ್ತು ಪರಿಹಾರದ ಕಾರ್ಯ ಬಗ್ಗೆ ಮುಂಜಾಗ್ರತಾ ಕ್ರಮದ ಕುರಿತು ಚರ್ಚೆ ನಡೆಸಿದರು. ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖೆ ಹಾಗೂ ಸರಕಾರದ
ಮೂಡುಬಿದಿರೆ: ಮಂಗಳೂರು-ಕಾರ್ಕಳ ಹೆದ್ದಾರಿಯ ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ್ಕ ಎಸ್ಕೆಎಫ್ ಬಳಿ ಗುಡ್ಡ ಕುಸಿತದಿಂದ ರಸ್ತೆ ಸಂಚಾರಕ್ಕೆ ಸಮಸ್ಯೆಯುಂಟಾಗಿದೆ. ಪೋಯ್ಯದ ಪಲ್ಕೆ ಬಳಿ ಪ್ರವಾಹದಿಂದ ರಸ್ತೆ ಹಾಗೂ ಗದ್ದೆಗೆ ನೀರು ನುಗ್ಗಿ ಹಾನಿ, ಕೆಂಪುಲು ಬಳಿ ಮಳೆಯಿಂದ ರಸ್ತೆಗೆ ಹಾನಿ, ಕೆಸರ್ ಗದ್ದೆ ವಿಕ್ಟರ್ ಮನೆ ಬಳಿ ಮಳೆಯ ಪ್ರವಾಹ ದಿಂದ ಮೋರಿ ಬ್ಲಾಕ್ ಆಗಿ ಜಮೀನಿಗೆ ನೀರು ಬಂದು ಹಾನಿಯಾಗಿದೆ. ಅಂಬೂರಿ ಬಳಿಯ ಕಿರಣ್
ಪಾಕಿಸ್ತಾನದಲ್ಲಿ ಅಧಿಕೃತ ಜನಗಣತಿಯ ವರದಿ ಡಾನ್ ಪತ್ರಿಕೆ ಮೂಲಕ ವರದಿಯಾಗಿದ್ದು, ಹಿಂದೂ ಮತ್ತು ಕ್ರಿಶ್ಚಿಯನರ ಸಂಖ್ಯೆಯು ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಈಗ ಪಾಕಿಸ್ತಾನದಲ್ಲಿ ಹಿಂದೂಗಳು ಅತಿ ದೊಡ್ಡ ಅಲ್ಪಸಂಖ್ಯಾಕ ಸಮುದಾಯವಾಗಿದ್ದಾರೆ. ಪಾಕಿಸ್ತಾನದ ಜನಸಂಖ್ಯೆಯು ಈಗ ೨೪.೦೮ ಕೋಟಿ. ಮುಸ್ಲಿಂ ಜನಸಂಖ್ಯೆಯು ೨೦೧೭ರಲ್ಲಿ ೯೬.೪೬ ಶೇಕಡಾ ಇದ್ದುದು ೯೬.೩೫ ಶೇಕಡಾಕ್ಕೆ ತುಸು ಕೆಳ ಸರಿದಿದೆ. ಹಿಂದೂಗಳ ಜನಸಂಖ್ಯೆಯು ೨೦೧೭ರಲ್ಲಿ ೩೫ ಲಕ್ಷ ಇದ್ದುದು ೨೦೨೩ರಲ್ಲಿ ೩೮
ನೀವು ಏಕೆ ಮದುವೆ ಆಗುವುದಿಲ್ಲ ಎಂದು ಪ್ರಶ್ನಿಸುತ್ತಿದೆ ಜಪಾನ್ ಸರಕಾರ.ನಿಮ್ಮ ತುಮುಲ ತಿಳಿದರೆ ನಾವು ಕೃತಜ್ಞರು ಎನ್ನುತ್ತ ಜಪಾನ್ ಮಕ್ಕಳು ಮತ್ತು ಕಲ್ಯಾಣ ಸಚಿವೆ ಆಯುಕೋ ಕತೋ ಅವರು ಯುವ ಜನಾಂಗವನ್ನು ಕೇಳುತ್ತ ದೇಶದ ಜನಸಂಖ್ಯೆ ಇಳಿಮುಖವಾಗಿರುವುದಕ್ಕೆ ಪರಿಹಾರ ಹುಡುಕುತ್ತಿದ್ದಾರೆ. ಚಿಲ್ಡ್ರನ್ ಆಂಡ್ ಫ್ಯಾಮಿಲೀಸ್ ಏಜೆನ್ಸಿ ಮೂಲಕ ಜಪಾನ್ ಸರಕಾರವು ಅಲ್ಲಿನ ಯುವ ಜನಾಂಗವು ನಿಮಗೆ ಮದುವೆ ಆಗಲು ಇರುವ ಸಮಸ್ಯೆ ಏನು ಎಂದು ಪ್ರಶ್ನಿಸುತ್ತಿದೆ. ಡೇಟಿಂಗ್, ಮ್ಯಾಚ್
ಮಲ್ಪೆಯಿಂದ ಉಡುಪಿ ಮೂಲಕ ಮಣಿಪಾಲದ ಮೇಲೆ ಹಾದು ಹೋಗುವ ಮೊಳಕಾಲ್ಮೂರು ಬಳಿ ಅಪೂರ್ಣ ಹೆದ್ದಾರಿ ಕಾಮಗಾರಿಯಿಂದಾಗಿ ಆತ್ರಾಡಿ ಬಳಿ ಕೃತಕ ನೆರೆ ಉಂಟಾಗಿದೆ. ಹೆದ್ದಾರಿ ಅವ್ಯವಸ್ಥೆಯಿಂದಾಗಿ ಉಂಟಾದ ನೆರೆಯಿಂದ ಆತ್ರಾಡಿಯ ಭಾಗದ ನಿವಾಸಿಗಳ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಸರಿಯಾದ ಒಳಚರಂಡಿ ವ್ಯವಸ್ಥೆ ನಿರ್ಮಿಸದ ಹಿನ್ನೆಲೆಯಲ್ಲಿ ಮನೆಗೆ ಚರಂಡಿ ನೀರು ನುಗ್ಗಿದ ಪರಿಣಾಮ ಆತ್ರಾಡಿಯ ಸ್ಥಳೀಯ ಜನರು ಆಕ್ರೋಶಗೊಂಡಿದ್ದು, ಸಂಬಂಧಪಟ್ಟವರು ವ್ಯವಸ್ಥೆಯನ್ನು
ಉಡುಪಿಯಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದ್ದು,ಉಡುಪಿ ಜಿಲ್ಲೆಯ ಕೆಮ್ತೂರು ,ಬೊಳ್ಜೆ ಭಾಗ ಸಂಪೂರ್ಣ ಜಲಾವೃತಗೊಂಡಿದೆ. ಪಾಪನಾಶಿನಿ ನದಿ ತುಂಬಿ ಹರಿಯುತ್ತಿದ್ದು, ನದಿ ತೀರದ ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವು ಮನೆಗಳು ಜಾಲಾವೃತಗೊಂಡಿದ್ದು, ಅಗ್ನಿ ಶಾಮಕ ದಳ ಸಿಬಂದಿಗಳು ರಬ್ಬರ್ ಮೂಲಕ ನೆರೆ ಸಂತ್ರಸ್ತರನ್ನ ರಕ್ಚಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆ ತಂದರೂ. ಮಳೆ ಪ್ರಮಾಣ ಜಾಸ್ತಿಯಾಗುತ್ತಿದ್ದು, ನದಿ ನೀರಿ ಮಟ್ಟ ಹೆಚ್ಚಾಗುತ್ತಿರುವುದು ಸ್ಥಳೀಯರ