HomeFresh Newsತಲಪಾಡಿ: ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು

ತಲಪಾಡಿ: ಕೆರೆಯಲ್ಲಿ ಮುಳುಗಿ ವ್ಯಕ್ತಿ ಸಾವು

ಉಳ್ಳಾಲ: ಕೆರೆ ನೀರಿನಲ್ಲಿ ಈಜಲು ತೆರಳಿದ್ದ ವ್ಯಕ್ತಿಯೋರ್ವರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ  ತಲಪಾಡಿ ನಾರ್ಲಪಡೀಲಿನಲ್ಲಿ ಇಂದು ಸಂಜೆ ಸಂಭವಿಸಿದೆ.


ನಾರ್ಲಪಡೀಲು ನಿವಾಸಿ ರಾಜೇಶ್ ಶೆಟ್ಟಿ (55) ಮೃತರು. ತಲಪಾಡಿ ಟೋಲ್ ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ರಾಜೇಶ್ ಅವರು ಎಂದಿನಂತೆ ಕಲ್ಲಿನ ಕೋರೆಯಲ್ಲಿ ಈಜಲು ತೆರಳಿದ್ದರು. ಇಂದು ಸಂಜೆ ಈಜುವಾಗ ಏಕಾಏಕಿ ಮುಳುಗಿ ಅಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಸ್ಥಳೀಯರು ರಕ್ಷಿಸಲು ಮುಂದಾದರೂ ಅದಾಗಲೇ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿದ್ದಾರೆ. ಬೆಂಗಳೂರು ತೆರಳುವ ಬಸ್ಸಿನಲ್ಲಿ ಕ್ಲೀನರಾಗಿದ್ದ ರಾಜೇಶ್ ಕೊರೊನಾ ಬಳಿಕ ತಲಪಾಡಿ ಟೋಲ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments