ವಾಹನಗಳಿಗೆ ಎದುರಾಗುತ್ತಿರುವ ಅಡಚಣೆಗಳ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಕರ್ನಾಟಕದ ಉನ್ನತ ಮಟ್ಟದ ನಿಯೋಗ ಮನವಿ ಸಲ್ಲಿಸಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಲಾದ್ ಜೋಶಿ ಅವರ ನೇತೃತ್ವದ ನಿಯೋಗವು ದೆಹಲಿಯಲ್ಲಿ ಫಡ್ನವಿಸ್ ಅವರನ್ನು ಭೇಟಿಯಾಯಿತು.

ನಿಯಮಬದ್ಧವಾಗಿ ಮತ್ತು ಕಾನೂನುಬದ್ಧ ದಾಖಲೆಗಳೊಂದಿಗೆ ಸಾಗುತ್ತಿರುವ ಅಡಿಕೆ ವಾಹನಗಳ ಸಂಚಾರಕ್ಕೆ ಮಹಾರಾಷ್ಟ್ರದಲ್ಲಿ ತಪಾಸಣೆಯ ಹೆಸರಿನಲ್ಲಿ ತೊಂದರೆ ಆಗುತ್ತಿದೆ ಎಂದು ನಿಯೋಗವು ಗಮನಕ್ಕೆ ತಂದಿದೆ. ನಿಯೋಗದಲ್ಲಿ ಸಂಸದರಾದ ಬ್ರಿಜೇಶ್ ಚೌಟ, ಬಿ.ವೈ. ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಆರಗ ಜ್ಞಾನೇಂದ್ರ, ರಾಜೇಶ್ ನಾಯ್ಕ, ಕ್ಯಾಂಸ್ಕೋ ಹಾಗೂ ವಿವಿಧ ಅಡಿಕೆ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು. ಅಡಿಕೆಯು ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಲಕ್ಷಾಂತರ ರೈತ ಕುಟುಂಬಗಳು ಮತ್ತು ಅಡಿಕೆ ವ್ಯಾಪಾರ, ಸಾರಿಗೆ, ಸಹಕಾರಿ ವಲಯದ ಆರ್ಥಿಕತೆಗೆ ಆಧಾರವಾಗಿದೆ ಎಂದು ನಿಯೋಗವು ತಿಳಿಸಿತು.
ಅಂತರರಾಜ್ಯ ವ್ಯಾಪಾರಕ್ಕೆ ಅನಗತ್ಯ ಅಡ್ಡಿ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಕೋರಿತು. ನಿಯೋಗದ ಮನವಿಗೆ ಸ್ಪಂದಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ರಾಜ್ಯದ ರೈತರು ಮತ್ತು ಅಡಿಕೆ ವ್ಯಾಪಾರ ವಲಯದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

