HomeFresh Newsಬೊಕ್ಕಪಟ್ಣದ ಯುವಜನ ಅಕ್ಷಯ ವತಿಯಿಂದ 53ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ

ಬೊಕ್ಕಪಟ್ಣದ ಯುವಜನ ಅಕ್ಷಯ ವತಿಯಿಂದ 53ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮಂಗಳೂರಿನ ಬೊಕ್ಕಪಟ್ಣದ ಯುವ ಜನ ಅಕ್ಷಯ ವತಿಯಿಂದ 53ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ ಮಾಡಲಾಗುತ್ತಿದೆ. ಬೊಕ್ಕಪಟ್ಣ ಶ್ರೀ ವೀರವಿನಾಯಕ ಜನಸೇವಾ ಟ್ರಸ್ಟಿನ ಸಭಾಭವನದಲ್ಲಿ ಗಣಪನ ವಿಗ್ರಹವನ್ನ ಪ್ರತಿಷ್ಠಿಸಲಾಗಿದೆ.

ಮೂರು ದಿನಗಳ ಕಾಲ ಪರ್ಯಂತ ಗಪಣನಿಗೆ ವಿಶೇಷ ಪೂಜೆ ನಡೆಯಲಿದೆ.ಆದಿತ್ಯವಾರದಂದು ವಿವಿಧ ಪೂಜೆ ಹಾಗೂ ಮಹಪೂಜೆಯೊಂದಿಗೆ ಮೆರವಣಿಗೆ ಮೂಲಕ ಶ್ರೀ ಬಹ್ಮ ಬೊಬ್ಬರ್ಯ ದೇವಸ್ಥಾನದ ಹಿಂದುಗಡೆಯಿರುವ ನದಿ ಕಿನಾರೆಯಲ್ಲಿ ಜಲಸ್ತಂಭನಗೊಳ್ಳಲಿದೆ. ಈ ವೇಳೆ ಅಧ್ಯಕ್ಷರಾದ ಯೋಗೀಶ್ ಆರ್. ಸಾಲ್ಯಾನ್, ಉಪಾಧ್ಯಕ್ಷ ಮಧುರಾಜ್, ಪ್ರಧಾನ ಕಾರ್ಯದರ್ಶಿ ಕಾರ್ತಿಕೇಯ ಬಂಗೇರ, ಜೊತೆ ಕಾರ್ಯದರ್ಶಿಗಳಾದ ವರುಣ ಕರ್ಕೇರ, ಸ್ವರೂಪ್ ಜೆ. ಕೋಟ್ಯಾನ್, ಕಾರ್ಯಕಾರಿ ಸಮಿತಿ ಗೋಪಾಲ ಬಂಗೇರ, ಸಚಿನ್ ಕರ್ಕೇರ, ರಾಹುಲ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments