HomeFresh Newsಉಪ್ಪಿನಂಗಡಿ: ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಕರ್ನಾಟಕದ ವಿಶ್ವವಿದ್ಯಾನಿಲಯಗಳ ಶುಭಾರಂಭ

ಉಪ್ಪಿನಂಗಡಿ: ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಕರ್ನಾಟಕದ ವಿಶ್ವವಿದ್ಯಾನಿಲಯಗಳ ಶುಭಾರಂಭ

ಅಖಿಲ ಭಾರತಅಂತರ್ ವಿ ವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಮೊದಲ ದಿನ ನಡೆದ ನಾಕೌಟ್ ಮಾದರಿಯ ಪಂದ್ಯಾಟದಲ್ಲಿ ಸುಮಾರು 30 ಪಂದ್ಯಾವಳಿಗಳು ನಡೆದಿದ್ದು,15 ವಿ.ವಿ ತಂಡಗಳು ಮುಂದಿನ ಹಂತಕ್ಕೆ ತೇರ್ಗಡೆಗೊಂಡಿದೆ.

ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಮೊದಲ ದಿನ ನಾಕೌಟ್ ಪಂದ್ಯಗಳಲ್ಲಿ ಬೆಂಗಳೂರು ವಿವಿ 35-07, 35-14ರಲ್ಲಿ ಮೌಲಾನಾ ಆಜಾದ್ ವಿವಿಯನ್ನು ಮಣಿಸಿತು. ಬೆಳಗಾವಿಯ ವಿಶ್ವೇಶ್ವರಯ್ಯ ವಿವಿ 32-35, 35-29, 35-27ರಲ್ಲಿ ಕುವೆಂಪು ವಿವಿ ವಿರುದ್ಧ ಜಯ ಗಳಿಸಿತು. ಹೈದರಾಬಾದ್ ಜೆಎನ್ಟಿಯು ವಿವಿಯನ್ನು ಮೈಸೂರು ವಿವಿ 35-32, 35-24ರಲ್ಲಿ ಸೋಲಿಸಿತು, ಮಧ್ಯಾಹ್ನದ ನಂತರ ನಡೆದ ಪಂದ್ಯದಲ್ಲಿ ಬೆಂಗಳೂರು ನಗರ ವಿಶ್ವವಿದ್ಯಾನಿಲಯವನ್ನು ವಿಶ್ವೇಶ್ವರಯ್ಯ ವಿವಿ 35-31, 35-22ರಲ್ಲಿ ಮಣಿಸಿತು. ಬೆಳಿಗ್ಗೆ 35-28, 35-31ರಲ್ಲಿ ರವಿಶಂಕರ್ ಶುಕ್ಲಾ ವಿವಿಯನ್ನು ಮಣಿಸಿದ ದಾವಣಗೆರೆ ವಿವಿ ಸಂಜೆ ಕೆಎಸ್ಎನ್ಯು ಎಎಚ್ ಎಸ್ ಎದುರಿನ ಪಂದ್ಯದಲ್ಲಿ 28-35, 35-20, 31-35ರಲ್ಲಿ ಸೋಲಿಸಿತು.

ರಾಜಸ್ಥಾನದ ಜೆಆರ್ಎನ್ಗೆ ವಿಕ್ರಮ ಸಿಂಹಪುರಿ ವಿರುದ್ಧ 35-11, 35-10ರಲ್ಲಿ, ಟಿಎಂ ಬಗಲ್ಪುರ್ಗೆ ಒಸ್ಮಾನಿಯಾ ವಿವಿ ವಿರುದ್ಧ 35-28, 35-22ರಲ್ಲಿ, ಎಸ್ವಿ ವಿವಿಗೆ ಅನಂತಪುರದ ಜೆಎನ್ಟಿಯು ವಿರುದ್ಧ 35-12, 35-11, 35-10ರಲ್ಲಿ ಉತ್ಕಲ್ ವಿವಿಗೆ ಹೇಮಚಂದ್ರ ವಿವಿ ವಿರುದ್ಧ 35-21, 35-22ರಲ್ಲಿ, ಮುಂಬೈ ವಿವಿಗೆ ರಾಣಿ ಚೆನ್ನಮ್ಮ ವಿವಿ ವಿರುದ್ಧ 35-28, 35-29ರಲ್ಲಿ, ಆರ್ಟಿಎಂ  ವಿವಿಗೆ ಬೆಹ್ರಾಂಪುರ್ ವಿವಿ ವಿರುದ್ಧ 38-36, 35-22ರಲ್ಲಿ, ಕೇರಳ ವಿವಿಗೆ ಡಾ. ವೈಎಸ್ಆರ್ ವಿವಿ ವಿರುದ್ಧ 35-13, 35-18ರಲ್ಲಿ ಗೆಲುವು ಸಾಧಿಸಿತು.

ಆಚಾರ್ಯ ನಾಗಾರ್ಜುನ ವಿವಿಗೆ ಅಟಲ್ ಬಿಹಾರಿ ವಿವಿ ವಿರುದ್ಧ 35-19, 35-22ರಲ್ಲಿ, ಭಾರತಿದಾಸನ್  ವಿವಿಗೆ ಭರ್ಕತ್ ಉಲ್ಲಾ ವಿವಿ ವಿರುದ್ಧ 35-19, 35-14ರಲ್ಲಿ, ಕೃಷ್ಣ ವಿವಿಗೆ ಪುದುಚೇರಿ ವಿವಿ ವಿರುದ್ಧ 35-21, 35-30ರಲ್ಲಿ ಕ್ಯಾಲಿಕಟ್ ವಿವಿಗೆ ಬೆಂಗಳೂರು ಉತ್ತರ ವಿವಿ ವಿರುದ್ಧ 35-15, 35-21ರಲ್ಲಿ, ಪೆರಿಯಾರ್ ವಿವಿಗೆ ಕರ್ನಾಟಕ ವಿವಿ ವಿರುದ್ಧ 35-16, 35-21ರಲ್ಲಿ ಗೆಲವು ಸಾಧಿಸಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments