HomeFresh Newsಏ.20ರಂದು ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆ

ಏ.20ರಂದು ಜೆ.ಆರ್. ಲೋಬೋ ನಾಮಪತ್ರ ಸಲ್ಲಿಕೆ

ರಾಜ್ಯ ವಿಧಾನಸಭೆ ಚುನಾವಣೆಯ ಮಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಏ.20ರಂದು ಮಧ್ಯಾಹ್ನ 12.15ಕ್ಕೆ ನಾಮಪತ್ರ ಸಲ್ಲಿಸಲಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಜೆ.ಆರ್. ಲೋಬೋ ಹೇಳಿದರು.

ಅವರು ನಗರದ ಕಾಂಗ್ರೆಸ್‍ನ ಚುನಾವಣಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷ ಸಂವಿಧಾನ, ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಪಕ್ಷ, ಸರ್ವ ಜಾತಿ ಧರ್ಮವನ್ನು ಪ್ರೀತಿಸುವ ಪಕ್ಷವಾಗಿದೆ. ದೇಶವು ಅಭವೃದ್ಧಿ ಕಂಡಿದ್ದರೆ ಅದು ಕಾಂಗ್ರೆಸ್ ಪಕ್ಷ ನೀಡಿದ ಕೊಡುಗೆಯಾಗಿದೆ.
ಭೂ ಸುಧಾರಣೆಯನ್ನು ಜಾರಿ ಮಾಡಿದ್ದು ಕಾಂಗ್ರೆಸ್ ಪಕ್ಷವಾಗಿದೆ ಎಂದ ಲೋಬೋ ಅವರು ಕಳೆದ ಚುನಾವಣೆಯಲ್ಲಿ ಅಭಿವೃದ್ಧಿ ಮಾಡಿದ್ದರೂ, ಅಪ ಪ್ರಚಾರ, ಸೂಕ್ಮ ವಿಚಾರದಲ್ಲಿ ನನ್ನನ್ನು ಸೋಲಿಸಿದ್ದಾರೆ. ಆದರೆ ಇದೀಗ ಜನರು ಅರಿತಿದ್ದಾರೆ, ಅಭಿವೃದ್ಧಿಯ ಪ್ರಣಾಳಿಕೆ ಹಿಡಿದು ಈ ಭಾರಿಯೂ ಮತ ಕೇಳಲು ಹೋಗುತ್ತೇನೆ ಎಂದರು.

ಬೀದಿ ಬದಿ ವ್ಯಾಪಾರ ಮಾಡುವರ ಮೇಲೆ ನೀರು ಹಾಯಿಸಿ ಅವರನ್ನು ಅಮಾನುಷ ರೀತಿಯಲ್ಲಿ ವರ್ತಿಸಿದ್ದನ್ನು ನಾನು ವಿರೋಧಿಸುತ್ತೇನೆ. ನಾವು ಯಾರನ್ನು ದಾರಿಗೆ ಹಾಕಿಲ್ಲ ನಾವು ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಶಶಿಧರ್ ಹೆಗ್ಡೆ, ಕಳ್ಳಿಗೆ ತಾರನಾಥ್ ಶೆಟ್ಟಿ, ವಿಶ್ವಾಸ್ ಕುಮಾರ್ ದಾಸ್, ಟಿ.ಕೆ ಸುದೀರ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments