ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಂತೋಷ್ ಕಾಮತ್ ನಾಮಪತ್ರ ಸಲ್ಲಿಕೆ

ಆಮ್ ಆದ್ಮಿ ಪಕ್ಷದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಂತೋಷ್ ಕಾಮತ್ ಅವರು ನಾಮಪತ್ರ ಸಲ್ಲಿಸಿದ್ರು. ನಾಮಪತ್ರ ಸಲ್ಲಿಕೆಗೂ ಮೊದಲು ನಗರದ ಮಂಗಳಾದೇವಿ ದೇವಳದಲ್ಲಿ ಕುಟುಂಬಿಕರು, ಪಕ್ಷದ ಮುಖಂಡರುಗಳು ಹಾಗೂ ಅಭಿಮಾನಿಗಳ ಜತೆಗೂಡಿ ಪೂಜೆ ಸಲ್ಲಿಸಿದ್ರು. ತದ ಬಳಿಕ ನಗರದ ಬಳ್ಳಾಲ್‍ಬಾಗ್‍ನಿಂದ ಮಹಾನಗರಪಾಲಿಕೆಯ ಚುನಾವಣಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ನಡೆಸಿ ನಾಮಪತ್ರ ಸಲ್ಲಿಸಿದ್ರು. ಈ ವೇಳೆ ಆಮ್ ಆದ್ಮಿ ಪಕ್ಷದಮುಖಂಡರಾದ ಸ್ಟೀಫನ್ ಪಿಂಟೋ, ಮಂಜುಳಾ ಸಂತೋಷ್ ಕಾಮತ್, ಎಸ್.ಎಲ್.ಪಿಂಟೋ, ಪ್ರಸಾದ್ ಬಜಿಲಕೇರಿ ಸೇರಿದಂತೆ ಮೊದಲಾದವರು ಉಪಸ್ಥತರಿದ್ದರು
