HomeFresh Newsನೆಲ್ಯಾಡಿ: ಸ್ಕೂಟರ್‌ ಮತ್ತು ಕಾರುಗಳ ಮಧ್ಯೆ ಅಪಘಾತ; ತೀವ್ರ ಗಾಯಗೊಂಡ ಬೈಕ್ ಸವಾರ

ನೆಲ್ಯಾಡಿ: ಸ್ಕೂಟರ್‌ ಮತ್ತು ಕಾರುಗಳ ಮಧ್ಯೆ ಅಪಘಾತ; ತೀವ್ರ ಗಾಯಗೊಂಡ ಬೈಕ್ ಸವಾರ

ನೆಲ್ಯಾಡಿ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ಮಸೀದಿಯ ಎದುರು ಸ್ಕೂಟರ್‌ ಮತ್ತು ಕಾರುಗಳ ಮಧ್ಯೆ ಅಪಘಾತ, ತೀವ್ರ ಗಾಯಗೊಂಡ ಬೈಕ್ ಸವಾರ.

ಸ್ಕೂಟರ್‌ ಸವಾರ ಶೇಖಬ್ಬ ಎಂಬವರು KA19HL2146 ನೋಂದಣಿ ನಂಬ್ರದ ಸ್ಕೂಟರನ್ನು ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ಮಸೀದಿಯ ಎದುರು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹೆದ್ದಾರಿಯ ಬಲಭಾಗದ ರಸ್ತೆಯಿಂದ ಎಡಭಾಗದ ರಸ್ತೆಗೆ ಹೋಗಲು ಡಿವೈಡರ್‌ ನ ಮಧ್ಯದ ತೆರೆದ ಸ್ಥಳದ ಮೂಲಕ ಹೆದ್ದಾರಿಯಲ್ಲಿ ಹೋಗುವ ವಾಹನಗಳನ್ನು ಗಮನಿಸದೇ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಹೆದ್ದಾರಿಗೆ ಅಡ್ಡಲಾಗಿ ಚಲಾಯಿಸಿದಾಗ ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಪುತ್ತೂರು ಕೊಂಬೆಟ್ಟು ನಿವಾಸಿ ಅಜೇಯ ಕೃಷ್ಣ.ಪಿ, ಅವರ ಪತ್ನಿ ಪ್ರತಿಭಾ ಮತ್ತು ಮಕ್ಕಳು ಪ್ರಯಾಣಿಕರಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ KA02MG9956 ನೋಂದಣಿ ನಂಬ್ರದ ಕಾರಿಗೆ ಅಪಘಾತವಾಗಿ ರಸ್ತೆಗೆ ಬಿದ್ದ ಸ್ಕೂಟರ್‌ ಸವಾರ ಶೇಖಬ್ಬರವರ ತಲೆಗೆ ಗಾಯವಾಗಿ ಚಿಕಿತ್ಸೆಗೆ ಆಂಬುಲೆನ್ಸ್‌ ಮೂಲಕ ಮಂಗಳೂರು ಹೈಲ್ಯಾಂಡ್‌ ಆಸ್ಪತ್ರೆಗೆ ಕಳುಹಿಸಲಾಗಿದೆ.

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments