Home Posts tagged #belthangadi

ನೆಲ್ಯಾಡಿ: 7.30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆ

ನೆಲ್ಯಾಡಿ: 7.30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆ. ನೆಲ್ಯಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2ನೇ ವಾರ್ಡಿನ ಕೊಟೇಲು, ದರ್ಖಾಸು ಎಂಬಲ್ಲಿ 7.30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟೀಕರಣ ರಸ್ತೆ ಉದ್ಘಾಟನೆ ಮಾ.04 ರಂದು ನೆರವೇರಿತು.ನೆಲ್ಯಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಸಲಾಂ ಬಿಲಾಲ್, ಉಪಾಧ್ಯಕ್ಷೆ ಶ್ರೀಮತಿ

ಗೋಳಿತಟ್ಟು ಜನಜಾಗೃತಿ ವೇದಿಕೆ ವತಿಯಿಂದ ವೈದ್ಯಕೀಯ ನೆರವು ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಕಡಬ ಇವರಿಂದ ಗೋಳಿತಟ್ಟು ವಲಯ ಜನಜಾಗೃತಿ ವಲಯ ಅಧ್ಯಕ್ಷರಾದ ನೋಣಯ್ಯ ಪೂಜಾರಿ ಅಂಭರ್ಜೆ ರಸ್ತೆ ಅಪಘಾತದಲ್ಲಿ ಕಾಲು ಮುರಿತಕ್ಕೆ ಒಳಗಾಗಿದ್ದು ಇವರಿಗೆ ಜನಜಾಗೃತಿ ವೇದಿಕೆಯಿಂದ ಮಂಜೂರಾದ ಹತ್ತು ಸಾವಿರ ರೂಪಾಯಿಯ ಮಂಜೂರಾತಿ ಪತ್ರವನ್ನು ಕಡಬ ತಾಲ್ಲೂಕು ಜನಜಾಗೃತಿ ಅಧ್ಯಕ್ಷ ಮಹೇಶ್ ಸವಣೂರು ಹತ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ, ಗೋಳಿತಟ್ಟು ವಲಯ

ಕೊಕ್ಕಡ: ಬೈಕ್‌ಗಳ ಮುಖಾಮುಖಿ ಡಿಕ್ಕಿ-ಮೂವರಿಗೆ ಗಾಯ

ಕೊಕ್ಕಡ:ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಗಂಭೀರ ಗಾಯಗೊಂಡಿರುವ ಘಟನೆ ನೆಲ್ಯಾಡಿ-ಕೊಕ್ಕಡ ರಸ್ತೆಯ ನೆಲ್ಯಾಡಿ ಪುತ್ಯೆ ಸಮೀಪ ಫೆ.9ರಂದು ರಾತ್ರಿ ನಡೆದಿದೆ.ನೆಲ್ಯಾಡಿ ಪಡ್ಡಡ್ಕ ನಿವಾಸಿ ಬೆನ್ನಿ, ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿ ಸಮೀಪದ ಮುಂಡ್ರೇಲು ನಿವಾಸಿಗಳಾದ ಮಹೇಂದ್ರ ಹಾಗೂ ಮಂಜುನಾಥ ಎಂಬವರು ಗಾಯಗೊಂಡು ಪುತ್ತೂರು ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ರಿಂಗ್ ವರ್ಕ್ಸ್ ಕೆಲಸ ನಿರ್ವಹಿಸುತ್ತಿರುವ ಪಡ್ಡಡ್ಕ ನಿವಾಸಿ

ಸೌತಡ್ಕ : ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ‘ಅಷ್ಟೋತ್ತರ ಸಹಸ್ರನಾಳಿಕೇರ ಶ್ರೀ ಮಹಾಗಣಪತಿ ಹೋಮ’

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಅಷ್ಟೋತ್ತರ ಸಹಸ್ರನಾಳಿಕೇರ ಶ್ರೀ ಮಹಾಗಣಪತಿ ಹೋಮ, ತಾಯಂದಿರ ಹಾಲುಣಿಸುವ ಕೊಠಡಿಯ ಲೋಕಾರ್ಪಣೆ ಹಾಗೂ ಕ್ಷೇತ್ರ ಪರಿಚಯ ಪುಸ್ತಕ ಬಿಡುಗಡೆ ಕಾರ್ಯಕ್ರಮವು ನಡೆಯಿತು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಅಷ್ಟೋತ್ತರ ಸಹಸ್ರನಾಳಿಕೇರ ಶ್ರೀ ಮಹಾಗಣಪತಿ ಹೋಮ ನಡೆಯಿತು.ರಾಜ್ಯ ಧಾರ್ಮಿಕ ಇಲಾಖೆಯ ವತಿಯಿಂದ ನಿರ್ಮಿಸಲಾದ ತಾಯಂದಿರು ಮಕ್ಕಳಿಗೆ ಹಾಲುಣಿಸುವ ಕೊಠಡಿಯನ್ನು ರಾಜ್ಯ

ಆಲಂಕಾರು: ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಡಾಟಾ ಸೈನ್ಸ್ ಕಾರ್ಯಾಗಾರ

ಆಲಂಕಾರು :ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ, ಪುತ್ತೂರು ಇದರ ಸಹಯೋಗದಲ್ಲಿ, ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿ ಮತ್ತೆ ಮತ್ತು ಡಾಟಾ ಸೈನ್ಸ್ ನ ಕುರಿತಾದ ಕಾರ್ಯಾಗಾರ ನಡೆಯಿತು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ನ ತೃತೀಯ ವರ್ಷದ ವಿದ್ಯಾರ್ಥಿಗಳಾದ ಜೀವಿತ್, ಆಕಾಶ್ ಪಿ, ಧನುಷ್ ಕುಮಾರ್, ಗಗನ್ ಕೆ, ಅಶ್ವಿಜ ಯು ಪೈ ಹಾಗೂ ಅನುಶ್ರೀ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಸುಮಾರು 64

ಬೆಳ್ತಂಗಡಿ: ಎಳನೀರು ಪ್ರದೇಶದಲ್ಲಿ ರಸ್ತೆ ವೀಕ್ಷಿಸಿದ ಶಾಸಕಿ ನಯನ ಮೋಟಮ್ಮ

ಬೆಳ್ತಂಗಡಿಯ ದಿಡುಪೆಯಿಂದ ಸಂಸೆ ರಸ್ತೆಯನ್ನು ಮಾಡಲು ಶೀಘ್ರದಲ್ಲಿ ಅಧಿಕಾರಿಗಳನ್ನು ಕರೆದು ಮಾತನಾಡುತ್ತೇನೆ ಎಂದು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಹೇಳಿದರು. ಅವರು, ಬೆಳ್ತಂಗಡಿ ತಾಲೂಕಿನ ಎಳನೀರು ಪ್ರದೇಶದಲ್ಲಿ ರಸ್ತೆ ವೀಕ್ಷಿಸಿ ಅವರು ಮಾತನಾಡಿದರು. ಕಲಸ ಹೊರನಾಡು ಈ ಪ್ರದೇಶದ ಜನರಿಗೆ ಹಾಸ್ಪಿಟಲ್, ವಿದ್ಯಾಭ್ಯಾಸ ಹಾಗೂ ವಿವಿಧ ಕ್ಷೇತ್ರಕ್ಕೆ ಸುಬ್ರಹ್ಮಣ್ಯ ಧರ್ಮಸ್ಥಳಕ್ಕೆ ಹೋಗಲು ಇದು ಬಹಳ ಹತ್ತಿರ ಇರುವುದರಿಂದ ಈ ರಸ್ತೆಯನ್ನು ಸರಿಪಡಿಸಲು ಸಂಬಂಧಪಟ್ಟ ಅರಣ್ಯ

ನೆಲ್ಯಾಡಿ:ಶ್ರೀರಾಮ ವಿದ್ಯಾಲಯ ಸೂರ್ಯ ನಗರ ಶ್ರೀರಾಮೋತ್ಸವ

ನೆಲ್ಯಾಡಿ: ಶ್ರೀರಾಮ ವಿದ್ಯಾಲಯ ಸೂರ್ಯ ನಗರದಲ್ಲಿ ಜ.22ರಂದು ಅಯೋಧ್ಯೆಯಲ್ಲಿ ನಡೆದ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ಮಹೋತ್ಸವದ ಪ್ರಯುಕ್ತ ಪ್ರಾರ್ಥನೆ, ಭಜನೆ, ಶ್ರೀರಾಮ ರಕ್ಷಾಸ್ತೋತ್ರ, ಹನುಮಾನ್ ಚಾಲೀಸ್, ರಾಮಾಯಣ ಆಧಾರಿತ ರಸಪ್ರಶ್ನೆಗಳು, 108 ಬಾರಿ ರಾಮ ತಾರಕ ಮಂತ್ರ, ಶ್ರೀ ರಾಮೋತ್ಸವವು ನಡೆಯಿತು. ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಣೆ ಜೊತೆಗೆ ಅಯೋಧ್ಯೆಯ ಕರಸೇವೆಯಲ್ಲಿ ಪಾಲ್ಗೊಂಡ ಕರ ಸೇವಕರಾದ ಕೃಷ್ಣಪ್ಪ ಕಟ್ಟೆಮಜಲು,

ನೆಲ್ಯಾಡಿ: ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ಮಧ್ಯೆ ಉದನೆ ಸಮೀಪ ಗಣಪತಿ ಕಟ್ಟೆಯ ಬಳಿ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಇನೋವಾ ಕಾರು ರಸ್ತೆಯ ಮಧ್ಯದ ಡಿವೈಡರ್ ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಕಾರಿನಲ್ಲಿ ಮೂರು ಮಂದಿ ಪ್ರಯಾಣಿಸುತ್ತಿದ್ದು ಇವರ ಪೈಕಿ ವಾಸನಿ ಹಾಗೂ ಅವರ ಪತ್ನಿ ವೀಣಾ ಗಾಯಗೊಂಡು ಅವರನ್ನು ಶಿರಾಡಿ 108 ಆಂಬುಲೆನ್ಸ್ ನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಶಿರಾಡಿ ಘಾಟ್ ; ಮಿನಿಲಾರಿಗೆ ಡಿಕ್ಕಿಯಾಗಿ ಪರಾರಿಯಾದ ಘನ ವಾಹನ – ಇಬ್ಬರು ಸ್ಥಳದಲ್ಲೇ ಮೃತ್ಯು

ನೆಲ್ಯಾಡಿ: ಶಿರಾಡಿ ಘಾಟ್ ನ ಗುಂಡ್ಯ ಗಡಿ ದೇವಸ್ಥಾನಕ್ಕಿಂತ ಮೇಲೆ ಕೆಂಪು ಹೊಳೆ ಸಮೀಪ ಮಿನಿ ಲಾರಿಯೊಂದಕ್ಕೆ ಯಾವುದೋ ವಾಹನವೊಂದು ಡಿಕ್ಕಿ ಯಾಗಿ ಪರಾರಿಯಾಗಿದ್ದು ಈ ಅಪಘಾತದಲ್ಲಿ ಮಿನಿ ಲಾರಿಯಲ್ಲಿದ್ದ ಚಾಲಕ ಹಾಗೂ ಇನ್ನೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಡಿ.6ರ ಮುಂಜಾನೆ 3 ಗಂಟೆ ವೇಳೆಗೆ ನಡೆದಿದೆ ಎಂದು ವರದಿಯಾಗಿದೆ. ಮೃತಪಟ್ಟವರು ಹಾಸನ ನಿವಾಸಿಗಳು ಎಂದು ತಿಳಿದುಬಂದಿದೆ. ಮಿನಿ ಲಾರಿ ಹಾಸನದಿಂದ ಮಂಗಳೂರಿಗೆ ಬರುತ್ತಿತ್ತು. ಶಿರಾಡಿ ಘಾಟ್ ನ ಕೆಂಪು ಹೊಳೆ

ನೆಲ್ಯಾಡಿ: ಸ್ಕೂಟರ್‌ ಮತ್ತು ಕಾರುಗಳ ಮಧ್ಯೆ ಅಪಘಾತ; ತೀವ್ರ ಗಾಯಗೊಂಡ ಬೈಕ್ ಸವಾರ

ನೆಲ್ಯಾಡಿ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ಮಸೀದಿಯ ಎದುರು ಸ್ಕೂಟರ್‌ ಮತ್ತು ಕಾರುಗಳ ಮಧ್ಯೆ ಅಪಘಾತ, ತೀವ್ರ ಗಾಯಗೊಂಡ ಬೈಕ್ ಸವಾರ. ಸ್ಕೂಟರ್‌ ಸವಾರ ಶೇಖಬ್ಬ ಎಂಬವರು KA19HL2146 ನೋಂದಣಿ ನಂಬ್ರದ ಸ್ಕೂಟರನ್ನು ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ಮಸೀದಿಯ ಎದುರು ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಹೆದ್ದಾರಿಯ ಬಲಭಾಗದ ರಸ್ತೆಯಿಂದ ಎಡಭಾಗದ ರಸ್ತೆಗೆ ಹೋಗಲು ಡಿವೈಡರ್‌ ನ