HomeFresh Newsಪಡುಬಿದ್ರಿ: ಕಾಪು ಮಲ್ಲಾರು ಅಕ್ರಮ ಕೋಳಿಯಂಕಕ್ಕೆ ದಾಳಿ, 9 ಕೋಳಿ ಸಹಿತ 7 ಮಂದಿ ವಶ

ಪಡುಬಿದ್ರಿ: ಕಾಪು ಮಲ್ಲಾರು ಅಕ್ರಮ ಕೋಳಿಯಂಕಕ್ಕೆ ದಾಳಿ, 9 ಕೋಳಿ ಸಹಿತ 7 ಮಂದಿ ವಶ

ಅಕ್ರಮವಾಗಿ ಕೋಳಿಯಂಕ ನಡೆಯುತ್ತಿದ್ದ ಕಾಪು ಮಲ್ಲಾರಿನ ಗರಡಿ ಪ್ರದೇಶಕ್ಕೆ ದಾಳಿ ಮಾಡಿದ ಕಾಪು ಪೊಲೀಸರು ಒಂಭತ್ತು ಕೋಳಿ ಸಹಿತ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸ್ ಬಲೆಗೆ ಬಿದ್ದವರು ಕೈಪುಂಜಾಲು ನಿವಾಸಿಗಳಾದ ವಿಜಿಸ್ಟನ್(42), ಫೆಡ್ರಿಕ್ ಅನ್ಮಣ್ಣ(32), ಕಟ್ ಹೌಸ್ ಮಲ್ಲಾರು ನಿವಾಸಿ ಸಂದೇಶ್(37), ಬೆಳಪು ನಿವಾಸಿ ನಿತಿನ್(30), ಇನ್ನಂಜೆ ನಿವಾಸಿ ಅಭಿಷೇಕ್ (21), ಉಡುಪಿ ಕೊಡವೂರು ನಿವಾಸಿ ಸಚಿನ್ ಕೋಟ್ಯಾನ್ (26) ಹಾಗೂ ಮಲ್ಲಾರು ನಿವಾಸಿ ಉಮೇಶ್(50) ಎಂದು ಗುರುತಿಸಲಾಗಿದೆ.

 ಜೂಜು ನಡೆಸುವ ಉದ್ಧೇಶದಿಂದ ಅಕ್ರಮವಾಗಿ ಕೋಳಿಯಂಕ ನಡೆಯುತ್ತಿದ್ದ ಮಾಹಿತಿ ಪಡೆದ ಕಾಪು ಎಸ್ಸೈ ಅಬ್ದುಲ್ ಖಾದರ್ ದಾಳಿ ನಡೆಸಿದ್ದು, ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Padubidri Koli Anka Attack
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments