ಪಡುಬಿದ್ರಿ: ಫಾಝಿಲ್ ಹತ್ಯೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ಕೂಡಲೇ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ಗುಲಾಂ ಮುಹಮ್ಮದ್ ಹೆಜಮಾಡಿ ಒತ್ತಾಯಿಸಿದ್ದಾರೆ. ತುಮಕೂರು ಹಾಗೂ ಉಳ್ಳಾಲದಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಇಲಾಖೆಗೆ ಶರಣ್ ಪಂಪ್ವೆಲ್
ಕಳೆದ ರಾತ್ರಿ ಪಡುಬಿದ್ರಿ ಮುಖ್ಯ ಮಾರುಕಟ್ಟೆಯ ಸೂಪರ್ ಮಾರ್ಕೆಟ್ ಹಾಗೂ ಕಾರ್ಕಳ ರಸ್ತೆಯಲ್ಲಿರುವ ಬಟ್ಟೆಯಂಗಡಿಯಲ್ಲಿ ಕಳ್ಳತನ ನಡೆದಿದ್ದು ಸಹಸ್ರಾರು ರೂಪಾಯಿ ಬೆಲೆಬಾಳುವ ವಸ್ತುಗಳು ಹಾಗೂ ನಗದು ಕಳವಾಗಿದ್ದು ಕಳ್ಳ ಸಿಸಿ ಕ್ಯಾಮಾರದಲ್ಲಿ ಸೆರೆ ಸಿಕ್ಕಿದ್ದಾನೆ.ಮುಖ್ಯ ಮಾರುಕಟ್ಟೆಯಲ್ಲಿರುವ ಕೆ.ಎಸ್. ಬಜಾರ್ನ ಬೀಗ ಮುರಿದ ಕಳ್ಳ ಒಳ ಹೊಕ್ಕು ಒಂದು ಲ್ಯಾಪ್ಟಾಪ್ ಹಾಗೂ ಒಂದು ಬೊಬೈಲ್ ಕಳವು ನಡೆಸಿದ್ದಾನೆ. ಕಾರ್ಕಳ ರಸ್ತೆಯಲ್ಲಿರುವ ಬಟ್ಟೆಯಂಗಡಿಯ
ಪಡುಬಿದ್ರಿ ಪಡುಹಿತ್ಲು ಜಾರಂದಾಯ ಬಂಟ ದೈವಸ್ಥಾನಕ್ಕೆ ಊರ ಪರವೂರ ಭಕ್ತಾಧಿಗಳು ನೀಡಿದ ಸುಮಾರು 60ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಖಡ್ಸಲೆ ಹಾಗೂ ಬೃಹತ್ ಕಾಲು ದೀಪವನ್ನು ಅದ್ಧೂರಿಯಾಗಿ ನೂರಾರು ಮಂದಿ ಭಕ್ತರು ಸೇರಿದ ಮೆರವಣಿಗೆಯಲ್ಲಿ ಶ್ರೀಕ್ಷೇತ್ರಕ್ಕೆ ಅರ್ಪಿಸಲಾಯಿತು. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಧಾನದಿಂದ ಹೊರಟ ಭವ್ಯ ಮೆರವಣಿಗೆಯಲ್ಲಿ ಅವಳಿ ಕುದುರೆಗಳು, ಭಜನಾ ಕುಣಿತ, ಕುದುರೆ ರಥ, ಚೆಂಡೆ, ವಾದ್ಯ ವಾದನ ಮುಂತಾದವುಗಳು ಗಮನ ಸೆಳೆದವು. ಈ ಬಗ್ಗೆ
ಪಡುಬಿದ್ರಿಯ ಠಾಣಾ ವ್ಯಾಪ್ತಿಯ ರಾ.ಹೆದ್ದಾರಿಯಲ್ಲಿ ರಾತ್ರಿ ಹೊತ್ತು ಒಬ್ಬಂಟಿಗಳಾಗಿ ನಡೆದುಕೊಂಡು ಹೋಗುತ್ತಿದ್ದ ಆಂಧ್ರದ ನೆಲ್ಲೂರು ನಿವಾಸಿ ಹನು (29) ಎಂಬ ಯುವತಿಯನ್ನು ಸಮಾಜ ಸೇವಕ ವಿಶುಶೆಟ್ಟಿ ಅವರು ಸ್ಥಳೀಯ ಪೊಲೀಸರ ಸಹಾಯದಿಂದ ರಕ್ಷಿಸಿ ಚಿಕಿತ್ಸೆಗಾಗಿ ಉಡುಪಿಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ತಾನು ನಡೆದುಕೊಂಡೇ ತನ್ನೂರನ್ನು ಸೇರುತ್ತೇನೆ ಎಂದು ಮೊಂಡು ಹಠ ಮಾಡಿದ ಯುವತಿಯನ್ನು ಉಡುಪಿಯ ಸಖಿ ಸೆಂಟರ್ಗೆ ದಾಖಲಿಸಲು ಅವರು
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್ ನಲ್ಲಿ ಪ್ರತಿದಿನ ಅಪಘಾತ ಸಂಭವಿಸುತ್ತಿದ್ದು, ಕಾಪು ಪೊಲೀಸರಿಂದ ವಾಹನ ಸವಾರರನ್ನು ಜಾಗೃರನ್ನಾಗಿ ಮಾಡುವ ಸಂದೇಶ ಸಾರಲಾಯಿತು. ಅಪಘಾತ ಸಂಭವಿಸಲು ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸದೇ ಇರುವುದು ಕಾರಣವಾಗಿದೆ. ಇದಕ್ಕಾಗಿ ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮವಾಗಿ ವಾಹನ ಸವಾರರಿಗೆ ಜಾಗೃತಿ ಮೂಡಿಸುವ ಸೂಚನಾ ಫಲಕವನ್ನು ಕಟಪಾಡಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ
ತೆರಿಗೆ ಕಟ್ಟಲು ಒತ್ತಡ ಹೇರಿದ್ದಾರೆ ಎಂಬ ಕಾರಣಕ್ಕೆ ನಂದಿಕೂರು ಕೈಗಾರಿಕಾ ವಲಯದಲ್ಲಿ ಕಾರ್ಯಚರಿಸುತ್ತಿರುವ ಕಂಪನಿಯೊಂದರ ಮುಖ್ಯಸ್ಥರು ಪಲಿಮಾರು ಗ್ರಾ.ಪಂ. ಅಧ್ಯಕ್ಷರ ಛೇಂಬರ್ ಗೆ ಹೋಗಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದ ಗ್ರಾ.ಪಂ. ಆಢಳಿತ ಸಮಿತಿ ಸದಸ್ಯರು ಅಧ್ಯಕ್ಷರೊಂದಿಗೆ ತೆರಳಿ ಕಂಪನಿ ಪ್ರಮುಖರಿಗೆ ಎಚ್ಚರಿಕೆ ನೀಡಿದ ಘಟನೆ ನಡೆದಿದೆ. ಸೃಷ್ಠಿ ಹೆಸರಿನ ಕಚ್ಚಾವಸ್ತುಗಳ ಮರು ಬಳಕೆ ಕಂಪನಿಯ ಪ್ರಮುಖರೇ ಆರೋಪಿಗಳು, ಅದಲ್ಲದೆ ಇದೇ ಕಂಪನಿಯ ವಠಾರದಲ್ಲಿ
ಪಡುಬಿದ್ರಿ: ಎಲ್ಲೂರು ಗ್ರಾಮದಲ್ಲಿ ಜನವಿರೋಧಿ ಯುಪಿಸಿಎಲ್ ಕಂಪನಿ ವಿದೇಶಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದನೆ ನಡೆಸುವ ಒಡಂಬಡಿಕೆ ಇದ್ದರೂ ಇದೀಗ ಅದು ಜನರಿಗೆ ಸಮಸ್ಯೆಯೊಡ್ಡುವ ದೇಶೀ ಕಲ್ಲಿದ್ದಲು ಬಳಸುವ ಹುನ್ನಾರ ನಡೆಸುತ್ತಿದೆ ಎಂಬುದಾಗಿ ಎಲ್ಲೂರು ಗ್ರಾಮಸಭೆಯಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಅದರ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಗ್ರಾಮಸಭೆಯಲ್ಲಿ ವಿಚಾರ ಮಂಡನೆ ಮಾಡಿದ ಗ್ರಾಮಸ್ಥ ನಾಗೇಶ್ ರಾವ್, ರಾಜ್ಯದಲ್ಲಿ ವಿದ್ಯುತ್ ಬರ
ಹೆದ್ದಾರಿಗೆ ಹಾಕಲಾದ ಡಾಮಾರಿನ ಒಂದು ಪದರವನ್ನು ಯಂತ್ರದ ಮೂಲಕ ತೆಗೆಯುತಿದ್ದು, ತೆಗೆದ ಡಾಮಾರು ಹುಡಿಯನ್ನು ರಸ್ತೆಯಲ್ಲೇ ಬಿಟ್ಟು ಹೋದ ಪರಿಣಾಮ ದ್ವಿಚಕ್ರ ಸವಾರರು ಬಿದ್ದು ಗಾಯಗೊಳ್ಳುತ್ತಿರುವ ಘಟನೆ ಪಡುಬಿದ್ರಿಯ ಬೀಡು ಬಳಿ ರಾತ್ರಿ ನಡೆದಿದೆ.ಮಂಗಳೂರು ಕಡೆಯಿಂದಲೂ ಹೆದ್ದಾರಿ ಡಾಮಾರಿನ ಪದರವನ್ನು ಯಂತ್ರದ ಮೂಲಕ ತೆಗೆಯುವ ಕಾಮಗಾರಿ ನಡೆಸುತ್ತಿದ್ದು, ರಾತ್ರಿ ಹೊತ್ತು ರಸ್ತೆಯ ಸುಸ್ಥಿತಿ ಗಮನಕ್ಕೆ ಬಾರದೆ ನಿಯಂತ್ರಣ ಕಳೆದುಕೊಳ್ಳುತ್ತಿದ್ದ ಬೈಕ್ ಸವಾರರು
ಪಡುಬಿದ್ರಿ ಬೀಡು ಬಳಿಯ ನಿವಾಸಿ ಉಮೇಶ್ ಪೂಜಾರಿ ಎಂಬವರು ಮುಲ್ಕಿ ಕಾರ್ನಾಡಿನ ಅಂಗಡಿಯೊಂದರಲ್ಲಿ ಕರೀದಿ ಮಾಡಿದ ಉಪ್ಪಿನ ಕಾಯಿ ಬಾಟಲ್ ಒಳಗಡೆ ಸತ್ತ ಹಲ್ಲಿ ಪತ್ತೆಯಾಗಿ ಕೆಲ ಕ್ಷಣ ಮನೆಮಂದಿ ಆತಂಕ ಪಟ್ಟಿದ್ದಾರೆ.
ತೆಂಕ ಎರ್ಮಾಳು ಜಂಕ್ಷನ್ ಬಳಿಯ ಬಾಡಿಗೆ ಮನೆಯೊಂದಕ್ಕೆ ಕನ್ನ ಹಾಕಿದ ಕಳ್ಳರು ನಗ, ನಗದು, ಬಟ್ಟೆ, ಪಾತ್ರೆ ಸಹಿತ ಅಕ್ಕಿಯನ್ನೂ ಕದ್ದೋಯ್ಯದಿದ್ದಾರೆ. ಹೆದ್ದಾರಿ ಪಕ್ಕದ ಬಾಡಿಗೆ ರೂಮ್ನಲ್ಲಿ ಹಾವೇರಿ ಮೂಲದ ಮಾಸಪ್ಪ ಎಂಬವರ ಕುಟುಂಬ ವಾಸವಾಗಿದ್ದು, ದಸರಾ ಹಬ್ಬಕ್ಕಾಗಿ ಕಳೆದ ಹದಿನೈದು ದಿನಗಳ ಹಿಂದೆ ರೂಮ್ಗೆ ಬೀಗ ಹಾಕಿ ಊರಿಗೆ ಹೋಗಿದ್ದು, ಭಾನುವಾರ ಮುಂಜಾನೆ ೫-೩೦ರ ಸುಮಾರಿಗೆ ರೂಮ್ ಕಡೆಗೆ ಬಂದಾಗ ಮಂದ ಬೆಳಕಿನಲ್ಲಿ ಮನೆಮಂದೆ ವ್ಯಕ್ತಿಯೊಬ್ಬರು ನಿಂತಿದ್ದು