ಕಾರ್ಮಿಕ ವಿರೋಧಿ ಬಿ.ಜೆ.ಪಿ ಸರಕಾರವನ್ನು ಸೋಲಿಸಿ – ಕಾಮ್ರೇಡ್ ಪಿ.ಪಿ.ಅಪ್ಪಣ್ಣ

ಬಂಟ್ವಾಳ : ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಕೇಂದ್ರೀಯ ಸಮಿತಿ (ಎ.ಐ.ಸಿ.ಸಿ.ಟಿ.ಯು) ದ.ಕ ಜಿಲ್ಲಾ ಸಮಾವೇಶ ಬಿ.ಸಿ.ರೋಡಿ ನಲ್ಲಿ ನಡೆಯಿತು.ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಎ.ಐ.ಸಿ‌.ಸಿ.ಟಿ.ಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಪಿ.ಪಿ.ಅಪ್ಪಣ್ಣ ಮಾತನಾಡಿ ಎ.ಐ‌.ಸಿ.ಸಿ.ಟಿ.ಯು ಸಂಘಟನೆ ಒಂದು ಕೇಂದ್ರ ಕಾರ್ಮಿಕ ಸಂಘಟನೆಯಾಗಿದ್ದು ಕಾರ್ಮಿಕರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದು , ಹಲವಾರು ಚಳುವಳಿಗಳನ್ನು ನಡೆಸುವುದರ ಮೂಲಕ ಕಾರ್ಮಿಕರಿಗೆ ನ್ಯಾಯ ದೊರಕಿಸಲು ಸಾದ್ಯವಾಗಿದೆ ಎಂದು ತಿಳಿಸಿದರು. ಕೊರೋ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಕಾನೂನು ಹೋರಾಟವನ್ನು ಮಾಡುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಹೋರಾಟ ಮಾಡಿದ ಏಕೈಕ ಕಾರ್ಮಿಕ ಸಂಘಟನೆ ಎ.ಐ.ಸಿ.ಸಿ.ಟಿ.ಯು ಎಂದು ತಿಳಿಸಿದರು. ರಾಜ್ಯ ಸರಕಾರವು ಅಕ್ಷರ ದಾಸೋಹ, ಆಶಾ,ಅಂಗನವಾಡಿ ಮುಂತಾದ ನೌಕರರನ್ನು ಇನ್ನೂ ನೌಕರರೆಂದು ಪರಿಗಣಿದೆ ಸಮಾಜ ಸೇವಕರು ಎಂದು ಬಿಂಬಿಸಿ ಸೌಲಭ್ಯ ದಿಂದ ವಂಚಿಸುತ್ತಿದೆ ಎಂದರು.

ಇಂದು ಕಾರ್ಮಿಕ ವರ್ಗ ಅತ್ಯಂತ ಸಂಕಷ್ಟದ ಪರಿಸ್ಥಿತಿ ಯಲ್ಲಿ ಇದ್ದು ನಮ್ಮನ್ನಾಳುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ ಸರಕಾರದ ನೀತಿ ಗಳು ಕಾರ್ಮಿಕ ವಿರೋಧಿಯಾಗಿದ್ದು ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿರುವ ಸರಕಾರವು ಕಾರ್ಮಿಕರ ಪಾಲಿಗೆ ಮರಣ ಶಾಸನವನ್ನು ಬರೆದಿಡುತ್ತಿದೆ ಎಂದು ಆರೋಪಿಸಿದರು.

ಕಾರ್ಮಿಕರು ಕೇವಲ ತಮ್ಮ ಬೇಡಿಕೆಗಳ ಈಡೇರಿಕೆ ಮಾತ್ರ ಹೋರಾಟಗಳನ್ನು‌ ನಡೆಸಲು ಸೀಮಿತರಾಗಬಾರದು ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಈ ಬಾರಿ ಚುನಾವಣೆಯಲ್ಲಿ ಬಿ.ಜೆ.ಪಿ ಸರಕಾರವನ್ನು ಕಿತ್ತೊಗೆಯಲು ಕಾರ್ಮಿಕ ವರ್ಗ ಪಣತೊಡಬೇಕೆಂದು ಕರೆ ನೀಡಿದರು.ಸಮಾವೇಶದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿದ ಸಿ.ಪಿ‌.ಐ.ಎಂ.ಎಲ್ (ಲಿಬರೇಶನ್ ) ರಾಜ್ಯ ಸಮಿತಿ ಸದಸ್ಯರಾದ ಕಾಮ್ರೇಡ್ ಪಿ.ಆರ್.ಎಸ್ ಮಣಿ ಮಾತನಾಡಿ ಇಂದು‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರಾಂತಿಕಾರಿ ಸಂಘಟನೆ ಎ.ಐ.ಸಿ.ಸಿ.ಟಿ.ಯು ಸಮಾವೇಶ ನಡೆಯುತ್ತಿರುವುದು ಬಹಳ ಸಂತೋಷದ ವಿಷಯ ವಾಗಿದೆ ಎಂದರು, ಮುಖ್ಯವಾಗಿ ಅಕ್ಷರ ದಾಸೋಹ ನೌಕರರು ,ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಸರಕಾರವು ಅಕ್ಷರ ದಾಸೋಹ ನೌಕರರನ್ನು ಅತ್ಯಂತ ಕಡಿಮೆ ವೇತನದಲ್ಲಿ ದುಡಿಸಿಕೊಳ್ಳುತ್ತಿದ್ದು , ಅವರನ್ನು ನೌಕರರಾಗಿ ಪರಿಗಣಿಸಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು ಅಕ್ಷರ ದಾಸೋಹ ನೌಕರರು ತಮ್ಮ‌ ನೌಕರಿ ಕಾಯಂಮಾತಿಗಾಗಿ ಬಲಿಷ್ಟ ಹೋರಾಟ ನಡೆಸಬೇಕೆಂದು ಕರೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ಯಾಶಿಸ್ಟರು ಪ್ರಯೋಗ ಶಾಲೆಯನ್ನಾಗಿ ಮಾಡಿದ್ದು ಪ್ಯಾಶಿಸ್ಟರು‌ ಕಾರ್ಮಿಕರ ತಲೆಗೆ ವಿಷ ಬೀಜ ಬಿತ್ತುವ ಮೂಲಕ ನಿಜವಾದ ಕಾರ್ಮಿಕರ ಸಮಸ್ಯೆ ಗೆ ಸಂಘಟಿತಗೊಳ್ಳದಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಪ್ಯಾಶಿಸಂ ವಿರುದ್ಧ ಕಾರ್ಮಿಕರು ಸಂಘಟಿತರಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡು ಹೋರಾಡಬೇಕೆಂದು ಕರೆ ನೀಡಿದರು.

ಸಮಾವೇಶದಲ್ಲಿ ಕಾರ್ಮಿಕ ಮುಖಂಡರಾದ ಕಾಮ್ರೇಡ್ ರಾಮಣ್ಣ ವಿಟ್ಲ ಮಾತನಾಡಿ ಸರಕಾರಗಳು ಕಾರ್ಮಿಕರಿಗೆ ನೀಡಬೇಕಾದ ಸೌಲಭ್ಯಗಳನ್ನು ನೀಡದೆ ಕಾರ್ಮಿಕರನ್ನು ಸತಾಯಿಸುತ್ತಿದ್ದು ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಯನ್ನು ಬಿ.ಜೆ.ಪಿ ಸರಕಾರವು ದುರುಪಯೋಗ ಮಾಡಿ ಕೋಟಿಗಟ್ಟಲೆ ಹಣ ವನ್ನು ಕೊಳ್ಳೆಹೊಡೆಯಾಲಾಗಿದ್ದು ಕಿಟ್ ಗಳನ್ನು ನೀಡುವ ಮೂಲಕ ಕಾರ್ಮಿಕರನ್ನು ಬಿಕ್ಷಕರನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಅಕ್ಷರದಾಸೋಹ ನೌಕರರು ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದು, ನಿವೃತ್ತಿ ಹೆಸರಿನಲ್ಲಿ ಯಾವುದೇ ಸೌಲಭ್ಯ ನೀಡದೆ ಕೆಲಸದಿಂದ ವಜಾ ಮಾಡಲಾಗುತ್ತಿದ್ದು ಇದರ ವಿರುದ್ದ ಹೋರಾಟಕ್ಕೆ ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಸಿ.ಪಿ.ಐ.ಎಂ.ಎಲ್ (ಲಿಬರೇಷನ್ ) ಜಿಲ್ಲಾ ಮುಖಂಡರಾದ ಭರತ್ ಕುಮಾರ್, ಅಕ್ಷರ ದಾಸೋಹ ನೌಕರರ ಸಂಘದ ಮುಖಂಡರಾದ ಜಯಶ್ರೀ .ಆರ್.ಕೆ‌ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು. ಎ.ಐ.ಸಿ.ಸಿ.ಟಿ.ಯು ಮುಖಂಡರಾದ ಮೋಹನ್ .ಕೆ.ಇ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಯುವ ರೈತ ಸಂಘದ ಗೌರವಾದ್ಯಕ್ಷರಾದ ಸುರೇಂದ್ರ ಕೋರ್ಯ,ಎ.ಐ‌.ಸಿ.ಸಿ.ಟಿ.ಯು ಜಿಲ್ಲಾ ಮುಖಂಡರಾದ ಸತೀಶ್ ಕುಮಾರ್, ಆದಿವಾಸಿ ಸಂರಕ್ಷಣಾ ಸಮಿತಿ ಕೊಡಗು ಜಿಲ್ಲಾ ಮುಖಂಡರಾದ ರವಿ , ಕಾರ್ಮಿಕ ಮುಖಂಡರಾದ ಆನಂದ ಶೆಟ್ಟಿಗಾರ್,ಸುರೇಂದ್ರ ಕೋಟ್ಯಾನ್ ,ಸರಸ್ವತಿ ಮಾಣಿ,ಅಕ್ಷರ ದಾಸೋಹ ನೌಕರರ ಸಂಘದ ಮುಖಂಡರಾದ ವಾಣಿಶ್ರೀ ಕನ್ಯಾನ ಮುಂತಾದವರು ವೇದಿಕೆಯಲ್ಲಿ ಇದ್ದರು.ಸಮಾವೇಶದಲ್ಲಿ ನೂತನ ಜಿಲ್ಲಾ ಸಮಿತಿ ರಚಿಸಲಾಯಿತು ಅಧ್ಯಕ್ಷರಾಗಿ ರಾಮಣ್ಣ ವಿಟ್ಲ ,ಪ್ರಧಾನ ಕಾರ್ಯದರ್ಶಿ ಯಾಗಿ ಮೋಹನ್.ಕೆ.ಇ.ಉಪಾದ್ಯಕ್ಷರುಗಳಾಗಿ ರಾಜಾ ಚೆಂಡ್ತಿಮಾರ್, ಇಬ್ರಾಹಿಂ ಮೈಂದಾಳ, ಸುರೇಂದ್ರ ಕೋಟ್ಯಾನ್,ಕಾರ್ಯದರ್ಶಿ ಗಳಾಗಿ ಸತೀಶ್ ಕುಮಾರ್ ಮಂಗಳೂರು, ಭರತ್ ಕುಮಾರ್ ಮಂಗಳೂರು, ನಾಗೇಶ್ ಕೈರಂಗಳ , ಕೋಶಧಿಕಾರಿಯಾಗಿ ಸರಸ್ವತಿ ಮಾಣಿ ಹಾಗೂ 13 ಜನರ ಕಾರ್ಯಕಾರಿ ಸಮಿತಿ ರಚಿಸಲಾಯಿತು.ಸಮಾವೇಶದ ಆರಂಭದಲ್ಲಿ ಸಿ.ಪಿ‌.ಐ.ಎಂ.ಎಲ್. ರಾಜ್ಯ ಸಮಿತಿ ಸದಸ್ಯರಾದ ಕಾಮ್ರೇಡ್ ಪಿ‌.ಆರ್.ಎಸ್ .ಮಣಿ ದ್ವಜಾರೋಹಣ ನೆರವೇರಿಸಿದರು.
ಕೊನೆಯಲ್ಲಿ ಮೋಹನ್ ಕೆ.ಇ .ವಂದಿಸಿದರು

Related Posts

Leave a Reply

Your email address will not be published.